ಜಾತಿ ರಾಜಕಾರಣ ಚುನಾವಣೆಯಲ್ಲಿ ವಕ್೯ ಔಟ್ ಆಗುವುದಿಲ್ಲ. ಜಾತಿ ಬಲ ನಡೆಯುವುದಿದ್ದರೆ, ಮಂಡ್ಯದವರು ಎಚ್ ಡಿ ಕುಮಾರಸ್ವಾಮಿ ಮಗನನ್ನು ಯಾಕೆ ಸೋಲಿಸಿದರು. ತುಮಕೂರಿನಲ್ಲಿ ದೇವೆಗೌಡರು ಯಾಕೆ ಸೋತರು ಎಂದು ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಉಪಚುನಾವಣೆಯಲ್ಲಿ ಕಾಂಗ್ರೆಸ್ ಜಾತಿ ರಾಜಕಾರಣ ಮಾಡಲು ಹೊರಟಿದೆ. ಡಿಕೆ ಶಿವಕುಮಾರ್ಗೆ ಜಾತಿ ರಾಜಕಾರಣ ಮಾಡುವಂತೆ ಹೇಳಿಕೊಟ್ಟವರು ಯಾರು ಎಂಬುದು ಗೊತ್ತಿದೆ ಎಂಬ ಎಚ್ಡಿ ಕುಮಾರಸ್ವಾಮಿ ಹೇಳಿಕೆಗೆ ತಿರುಗೇಟು ನೀಡಿದ ಅವರು, ಜಾತಿ ಕಾರ್ಡ್ ಎಲ್ಲಾ ನಡೆಯಲ್ಲ. ಅಲ್ಲದೇ ಯಾವ ಜಾತಿಯೂ ಒಬ್ಬರ ಹಿಂದೆ ಹೋಗಲ್ಲ. ಒಕ್ಕಲಿಗರೆಲ್ಲಾ ಕುಮಾರಸ್ವಾಮಿ ಜೊತೆ ಹೋಗಲ್ಲ ಎಂದು ತಿಳಿಸಿದರು.
ಉಪ ಚುನಾವಣಾ ಪ್ರತಿ ವಾರ್ಡ್ ನಿಂದ ಒಂದೊಂದು ಟೀಮ್ ಮಾಡಲಾಗಿದೆ. ಪ್ರತಿ ಬೂತ್ ಗೂ ಜವಾಬ್ದಾರಿ ನೀಡಲಾಗಿದೆ. ಶಾಸಕರು, ಮಾಜಿ ಸಚಿವರು ಪ್ರತಿ ಟೀಮ್ ನಲ್ಲಿ ಇರಲಿದ್ದಾರೆ. ಈ ಮೂಲಕ ಅಭ್ಯರ್ಥಿಗಳ ಗೆಲುವಿಗೆ ಕೆಲಸ ಮಾಡುವುದಾಗಿ ತಿಳಿಸಿದರು.
ಬಿಜೆಪಿಯಲ್ಲಿ ಸಂಘರ್ಷ
ಇದೇ ವೇಳೆ ಬಿಜೆಪಿ ಅಭ್ಯರ್ಥಿ ಆಯ್ಕೆ ಮಾಡದಿರುವುದರ ಕುರಿತು ಟೀಕಿಸಿದ ಅವರು, ಅಭ್ಯರ್ಥಿ ಆಯ್ಕೆ ಮಾಡಲು ಬಿಜೆಪಿಗೆ ಸಾಧ್ಯವಾಗುತ್ತಿಲ್ಲ. ಬಿಜೆಪಿ ಅಭ್ಯರ್ಥಿಗಳನ್ನು ಒಪ್ಪಲು ಸ್ಥಳೀಯ ಜನರಿಗೆ ಇಷ್ಟ ಇಲ್ಲ. ಹಾಗಾಗಿ ಅವರ ಪಕ್ಷದಲ್ಲಿ ಮೂಲ ಮತ್ತು ವಲಸಿಗರ ಸಂಘರ್ಷ ನಡೆಯುತ್ತಿದೆ. ಇನ್ನು ಜೆಡಿಎಸ್ನಲ್ಲಿ ಅಭ್ಯರ್ಥಿಯೇ ಇಲ್ಲ ಎಂದು ಇದೇ ವೇಳೆ ಟೀಕಿಸಿದರು.
More Stories
ಡ್ರಗ್ಸ್ ಕೇಸ್ ಹೆಸರಿನಲ್ಲಿ ಟೆಕಿಗೆ 40 ಲಕ್ಷ ವಂಚನೆ
ಮೈಸೂರು BEML ಅಧಿಕಾರಿ ಆತ್ಮಹತ್ಯೆ ಗೆ ಶರಣು
MUDA ಹಗರಣ: 15,085 ನಿವೇಶನಗಳು ಪೆಂಡಿಂಗ್, ಹಲವಾರು ಅಕ್ರಮ ಬಯಲು