ವಂಚನೆ ಆರೋಪದ ಪ್ರಕರಣದಲ್ಲಿ ಮಹಾತ್ಮ ಗಾಂಧೀಜಿ ಮರಿಮೊಮ್ಮಗಳಿಗೆ ದಕ್ಷಿಣ ಆಫ್ರಿಕಾದ ಡರ್ಬನ್ ನ್ಯಾಯಾಲಯ 7 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.
ಉದ್ಯಮಿಯೊಬ್ಬರಿಗೆ 6.2 ಮಿಲಿಯನ್ ರಾಂಡ್ (ದಕ್ಷಿಣ ಆಫ್ರಿಕಾ ಕರೆನ್ಸಿ; 1 ರಾಂಡ್ = 5.38 ರೂಪಾಯಿ) ವಂಚಿಸಿರುವ ಆರೋಪ ಮಹಾತ್ಮ ಗಾಂಧೀಜಿ ಯವರ ಮರಿಮೊಮ್ಮಗಳು ಆಶೀಶ್ ಲತಾ ರಾಮ್ಗೋಬಿನ್ ಅವರ ಮೇಲಿದೆ
ಈಕೆ ಇಳಾ ಗಾಂಧಿ ಹಾಗೂ ಮೆವಾ ರಾಮ್ಗೋವಿಂದ್ ಮಗಳು. ವಂಚನೆ ಪ್ರಕರಣ 2015ರಲ್ಲಿ ದಾಖಲಾಗಿತ್ತು. ಉದ್ಯಮಿ ಎಸ್ ಆರ್ ಮಹಾರಾಜ್ ಎನ್ನುವವರಿಂದ 6.2 ಮಿಲಿಯನ್ ರಾಂಡ್ ಪಡೆದು ನಂತರ ಮೋಸ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು.
ಅಲ್ಲದೇ, ಅವರು ಹಣ ಯಾವ ಕಾರಣಕ್ಕೆ ಅವಶ್ಯಕವಿದೆ ಎಂದು ಹೇಳಿದ್ದರೋ ಅದು ಕೂಡಾ ಸುಳ್ಳು ಎಂದು ಸಾಬೀತಾಗಿದೆ. ಆಶೀಶ್ ಲತಾ ತೋರಿಸಿದ್ದ ದಾಖಲೆಗಳೆಲ್ಲವೂ ನಕಲಿ ಎನ್ನುವುದು ತಿಳಿದುಬಂದ ನಂತರ ನ್ಯಾಯಾಲಯ 7 ವರ್ಷ ಕಾರಾಗೃಹ ಶಿಕ್ಷೆ ನೀಡಿದೆ.
- SBIನಲ್ಲಿ 600 ಪ್ರೊಬೇಷನರಿ ಆಫೀಸರ್ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ
- ನಾಳೆಗಾಗಿ ಬಾಳಬೇಕು ಕೇಳು ನೊಂದ ಜೀವವೇ..!
- ತುಪ್ಪ ಎಂಬ ಮಹಾ ಔಷಧಿ
- ಸಂಸತ್ ಕಟ್ಟಡದ ಬಳಿ ಬೆಂಕಿ ಹಚ್ಚಿಕೊಂಡ ಯುವಕ ಚಿಕಿತ್ಸೆ ಫಲಕಾರಿಯಾಗದೆ ಸಾವು
- ಕರ್ತವ್ಯದ ವೇಳೆ ಬ್ರೈನ್ಸ್ಟ್ರೋಕ್ಗೆ ಬಲಿಯಾದ ಅರಣ್ಯ ಇಲಾಖೆ ನೌಕರ
More Stories
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ವಿಧಿವಶ
ಮೈಸೂರಿನ ಪ್ರಮುಖ ರಸ್ತೆಗೆ ಸಿಎಂ ಸಿದ್ದರಾಮಯ್ಯ ಹೆಸರು: ಪಾಲಿಕೆ ತೀರ್ಮಾನಕ್ಕೆ ಆಕ್ಷೇಪಣೆಗಳು
10 ಸಾವಿರ ಕೋಟಿ ಕೈಗಾರಿಕೆ ಸ್ಥಾಪನೆ: ಪ್ರಸ್ತಾವನೆಗೆ ಉನ್ನತ ಮಟ್ಟದ ಸಮಿತಿ ಒಪ್ಪಿಗೆ