February 23, 2026

Newsnap Kannada

The World at your finger tips!

dinesh

ರಮೇಶ ಜಾರಕಿಹೊಳಿ ವಿರುದ್ದ ದಾಖಲಿಸಿದ್ದ ಕೇಸ್ ವಾಪಸ್ : ರಾಸಲೀಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್

Spread the love

ಇಡೀ ಪ್ರಕರಣಕ್ಕೆ ಬಿಗ್ ಟ್ವಿಸ್ಟ್
ಬೆಂಗಳೂರು – ಬೆಂಗಳೂರಿನ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಮಾಜಿ ಸಚಿವ ರಮೇಶ ಜಾರಕಿಹೊಳಿ ವಿರುದ್ಧ ಸಾಮಾಜಿಕ ಕಾರ್ಯಕರ್ತ ದಿನೇಶ ಕಲ್ಲಹಳ್ಳಿ ಸಲ್ಲಿಸಿದ್ದ ಸೆಕ್ಸ್ ಸಿಡಿ ಪ್ರಕರಣ ದೂರನ್ನು ವಾಪಸ್ ಮುಂದಾಗಿದ್ದಾರೆ.

ತಮ್ಮ ವಕೀಲರ ಮೂಲಕ ಪೊಲೀಸ್ ಠಾಣೆಗೆ ಪತ್ರ ಕಳಿಸಿದ್ದಾರೆ. ರಮೇಶ ಜಾರಕಿಹೊಳಿ ಯುವತಿಯೋರ್ವಳಿಗೆ ಕೆಲಸ ಕೊಡುವುದಾಗಿ ಹೇಳಿ ಲೈಂಗಿಕ ಶೋಷಣೆ ಮಾಡಿದ್ದಾರೆ ಎಂದು ವಿಡೀಯೋ ಸಹಿತ ದಿನೇಶ ಕಲ್ಲಳ್ಳಿ ಮಾರ್ಚ್ 2ರಂದು ಬೆಂಗಳೂರಿನ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.

ಸಂತ್ರಸ್ತೆ ಸಂಬಂಧಿಕರ ಮಾಹಿತಿ ಮೇರೆ ದೂರು ನೀಡಿದ್ದಾಗಿ ಹೇಳಿದ್ದರು. ಆದರೆ ಇದೀಗ ವಕೀಲರ ಸಲಹೆ ಮೇರೆಗೆ ಕೇಸ್ ವಾಪಸ್ ಪಡೆದುಕೊಳ್ಳಲು ನಿರ್ಧರಿಸಿದ್ದಾರೆ.

ಮನಸ್ಸಿಗೆ ನೋವಾಗಿದೆ : ದಿನೇಶ್
ಈ ಪ್ರಕರಣದಲ್ಲಿ 5 ಕೋಟಿ ರೂ. ಡೀಲ್ ಆಗಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದ್ದರು. ಇದರಿಂದ ಮನಸ್ಸಿಗೆ ನೋವಾಗಿ ಕೇಸ್ ವಾಪಸ್ ಪಡೆಯಲು ಮುಂದಾಗಿದ್ದಾಗಿ ದಿನೇಶ ಕಲ್ಲಳ್ಳಿ ತಿಳಿಸಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಮೇಶ ಜಾರಕಿಹೊಳಿ ತಮ್ಮ ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಿದ್ದರು. ಅನೇಕ ಕಡೆ ಜಾರಕಿಹೊಳಿ ಪರ ಪ್ರತಿಭಟನೆಗಳು ನಡೆದಿದ್ದವು.

ಇನ್ನೂ 6 ಸಚಿವರು ತಮ್ಮ ವಿರುದ್ಧ ಈ ರೀತಿಯ ಮಾನಹಾನಿಕರ ಸುದ್ದಿ ಪ್ರಕಟವಾಗಬಾರದೆಂದು ನ್ಯಾಯಾಲಯದ ಮೊರೆ ಹೋಗಿದ್ದಾರೆ.

error: Content is protected !!