ಸ್ಯಾಂಡಲ್ವುಡ್ ನಟ ಧನ್ವೀರ್ ಗೌಡ ಬಂಡೀಪುರ ರಾಷ್ಟ್ರೀಯ ಹುಲಿ ಸಂರಕ್ಷಿತ ಪ್ರದೇಶದಲ್ಲಿ ರಾತ್ರಿ ವೇಳೆ ಸಫಾರಿ ಮಾಡಿದ ಕಾರಣಕ್ಕಾಗಿ ಅವರ ವಿರುದ್ಧ ಕೇಸ್ ದಾಖಲಿಸಲು ಅರಣ್ಯ ಇಲಾಖೆ ಸಜ್ಜಾಗಿದೆ
ಪರಿಸರವಾದಿಗಳ ಆಕ್ರೋಶಕ್ಕೆ ಕಾರಣವಾಗುವ ಮೂಲಕ ಈ ವಿವಾದವೂ ಕೂಡ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಕಾರಣ, ರಾತ್ರಿ ಸಫಾರಿಯನ್ನು ನಿಷೇಧಿಸಲಾಗಿದೆ. ನಟ ಧನ್ವೀರ್ ಗೌಡ ಬಂಡಿಪುರ ಅಭಯಾರಣ್ಯದಲ್ಲಿ ರಾತ್ರಿ ಸಫಾರಿ ಮಾಡಿರುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ವಿಷಯ ಎಲ್ಲರ ಗಮನಸೆಳೆಯುತ್ತಿದ್ದಂತೆ ಈ ಫೋಟೊವನ್ನು ಅಳಿಸಿ ಹಾಕಿದ್ದಾರೆ. ಅಲ್ಲದೇ , ನಟನಿಗೆ ರಾತ್ರಿ ಸಮಯದಲ್ಲಿ ಅರಣ್ಯ ಪ್ರವೇಶಕ್ಕೆ ಅನುಮತಿ ನೀಡಿದ ಅಧಿಕಾರಿಗಳ ವಿರುದ್ಧ ಕೂಡ ಆಕ್ರೋಶ ವ್ಯಕ್ತವಾಗಿದೆ. ಅಧಿಕಾರಿಗಳು ಸಿನಿಮಾ ನಟರಿಗೆ ಒಂದು ಸಾಮಾನ್ಯರಿಗೆ ಒಂದು ನಿಯಮ ರೂಪಿಸಿದ್ದಾರಾ ಎಂಬ ವಾದಗಳು ಕೇಳಿಬರುತ್ತಿದೆ.
ಬಂಡೀಪುರಕ್ಕೆ ತನ್ನ ಸ್ನೇಹಿತರೊಂದಿಗೆ ಭೇಟಿ ನೀಡಿದ ಸ್ಯಾಂಡಲ್ ವುಡ್ ನಟ ಧನ್ವೀರ್ ಸಫಾರಿಗೆ ತೆರಳಿದ್ದಾರೆ. ಕಾಡಿನಲ್ಲಿ ಹುಲಿಯೊಂದು ರಸ್ತೆ ದಾಟುತ್ತಿರುವ ದೃಶ್ಯವನ್ನ ಮೊಬೈಲ್ ನಲ್ಲಿ ಚಿತ್ರೀಕರಿಸಿದ್ದಾರೆ. ಧನ್ವೀರ್ ತಮ್ಮ ಇನ್ಸ್ಟಾಗ್ರಾಂ ಪೇಜ್ ನಲ್ಲಿ ಈ ವಿಡಿಯೋ ಅಪ್ಲೋಡ್ ಮಾಡಿದ್ದಾರೆ. ಈ ವಿಡಿಯೋ ಸಾಕಷ್ಟು ವೈರಲ್ ಆಗಿದೆ. ವಿಡಿಯೋದಲ್ಲಿ ರಾತ್ರಿ ಹೊತ್ತಲ್ಲಿ ಹುಲಿ ಕಾಣಿಸಿಕೊಂಡಿರುವುದು ಸ್ಪಷ್ಟವಾಗಿ ಕಾಣಿಸುತ್ತಿದೆ. ಆದ್ರೆ ಈ ಬಗ್ಗೆ ನಟ ಧನ್ವೀರ್ ಸ್ಪಷ್ಟನೆಯೇ ಬೇರೆಯಾಗಿದ್ದು ಇದು ಸಂಜೆಯ ಸಫಾರಿ ಎನ್ನುತ್ತಿದ್ದಾರೆ.
ಸೆಪ್ಟೆಂಬರ್ 27ರಂದು ನಾಗರಹೊಳೆ ಅಭಯಾರಣ್ಯ ಮತ್ತಿಗೊಡು ಆನೆ ಶಿಬಿರಕ್ಕೆ ಭೇಟಿ ನೀಡಿದ ವೇಳೆ ಆನೆಯ ಮೇಲೆ ಕುಳಿತು ಫೋಟೊ ಶೋಟ್ ಮಾಡಿಸಿಕೊಂಡಿದ್ದಾರೆ. ಕಾನೂನಿನ ಪ್ರಕಾರ ಆನೆಯ ಮೇಲೆ ಮಾವುತರು ಮತ್ತು ಕಾವಾಡಿಗಳು ಬಿಟ್ಟರೆ ಬೇರೆಯಾರು ಕೂರುವಂತಿಲ್ಲ. ಸಿನಿಮಾಗಳಲ್ಲೂ ಆನೆಯ ಮೇಲೆ ಯಾರು ಮೇಲೆ ಕೂರುವಂತಿಲ್ಲ. ಈ ಮೂಲಕ ಅರಣ್ಯ ಇಲಾಖೆಯ ಕಾನೂನುಗಳನ್ನ ಸ್ಪಷ್ಟವಾಗಿ ಉಲ್ಲಂಘಿಸಿದ್ದಾರೆ ಎಂಬ ಚರ್ಚೆಗಳು ಸಹ ಆರಂಭವಾಗಿದೆ.
ನಟನ ವಿರುದ್ಧ ಕಾನೂನು ಕ್ರಮ ?
ಅಭಯಾರಣ್ಯದಲ್ಲಿ ನಿಯಮ ಉಲ್ಲಂಘನೆಯಾಗಿರುವ ಬಗ್ಗೆ ಉತ್ತರಿಸಿರುವ ನಿರ್ದೇಶಕರರಾದ ಬಾಲಚಂದರ್, ಈ ಬಗ್ಗೆ ನಾನು ಸಹ ಮಾಧ್ಯಮಗಳಲ್ಲಿ ನೋಡಿದ್ದೇನೆ. ರಾತ್ರಿ ವೇಳೆ ಬಂಡೀಪುರದಲ್ಲಿ ಸಫಾರಿ ನಡೆಸಲು ಅವಕಾಶವಿಲ್ಲ. ಈ ಬಗ್ಗೆ ಸಂಬಂಧಪಟ್ಟ ಅರಣ್ಯ ಇಲಾಖೆಯ ಸಿಬ್ಬಂದಿಗಳಿಗೆ ವರದಿ ನೀಡುವಂತೆ ತಿಳಿಸಿದ್ದೇನೆ. ನಿಯಮಗಳು ಉಲ್ಲಂಘನೆಯಾಗಿದ್ದರೆ ಕಾನೂನು ಕ್ರಮ ಜರುಗಿಸಲಾಗುವುದು ಎಂದಿದ್ದಾರೆ.
ಬಂಡೀಪುರದಲ್ಲಿ ಸಫಾರಿಗೆ ಹೋಗಬೇಕೆಂದು ದೇಶ ಮತ್ತು ರಾಜ್ಯದ ಮೂಲೆ ಮೂಲೆಗಳಿಗೆ ಪ್ರಾಣಿ ಪ್ರಿಯರು ಹಾಗೂ ಪ್ರವಾಸಿಗರು ಭೇಟಿ ನೀಡುತ್ತಾರೆ. ಬಂಡೀಪುರ ಸೇರಿದಂತೆ ರಾಜ್ಯದ ಯಾವುದೇ ಅರಣ್ಯ ಪ್ರದೇಶದಲ್ಲಿ ರಾತ್ರಿ ಸಫಾರಿ ನಿಷೇಧ ಮಾಡಲಾಗಿದೆ. ಬಂಡೀಪುರದಲ್ಲಿ ಬೆಳಗ್ಗೆ 6.30 ರಿಂದ 10.30ರೆವರೆಗೆ ಸಂಜೆ 4.30 ರಿಂದ 6.30ರೆವರೆಗೆ ಪ್ರವಾಸಿಗರಿಗೆ ಸಫಾರಿಗೆ ಅವಕಾಶ ಮಾಡಿಕೊಳ್ಳಲಾಗಿದೆ.
1 thought on “ರಾತ್ರಿ ಬಂಡೀಪುರದಲ್ಲಿ ಸಫಾರಿ ನಟ ಧನ್ವೀರ್ ವಿರುದ್ಧ ಕೇಸ್?”