Editorial

ಕ್ಯಾರೆಟ್ ನ 5 ಉಪಯೋಗಗಳು : Top 5 Uses of Carrot

ಕ್ಯಾರೆಟ್ ಬಣ್ಣದಲ್ಲಿ ಆಕರ್ಷಕ, ತಿನ್ನಲು ರುಚಿಕರ, ಪೋಷಕಾಂಶಗಳ ಆಗರ. ನಮ್ಮ ಆರೋಗ್ಯ ಮತ್ತು ಸೌಂದರ್ಯಕ್ಕೆ ಕ್ಯಾರೆಟ್ ಸದಾ ಸಹಕಾರಿ.ಮಕ್ಕಳಿಂದ ಮುದುಕರವರೆಗೆ ಕ್ಯಾರೆಟ್ ಅಚ್ಚುಮೆಚ್ಚಿನ ತರಕಾರಿ.

ಆರೋಗ್ಯವನ್ನು ನಿಸ್ಸಂಶಯವಾಗಿ ಹೆಚ್ಚಿಸುವ ತರಕಾರಿಯಲ್ಲಿ ಕ್ಯಾರೆಟ್‍ಗೆ ಅಗ್ರಸ್ಥಾನ ನೀಡಬಹುದು. ಆದಷ್ಟು ದೈನಂದಿನ ಡಯಟ್‍ನಲ್ಲಿ ಸೇರಿಸಿಕೊಳ್ಳುವುದು ಉತ್ತಮ.

ಕ್ಯಾರೆಟ್ ಹೆಸರು ಗ್ರೀಕ್ ಭಾಷೆಯ “ಕರಟಾನ್” ಪದದಿಂದ ಬಂದಿದೆ. ಸಂಯುಕ್ತ ರಾಷ್ಟ್ರಗಳ ಕೃಷಿ ಇಲಾಖೆಯ ಪ್ರಕಾರ ಒಂದು ಕ್ಯಾರೆಟ್ ಅಥವಾ ಕತ್ತರಿಸಿದ ಅರ್ಧ ಕಪ್ ಕ್ಯಾರೆಟ್‍ನಲ್ಲಿ 25 ಕ್ಯಾಲೊರಿ, 6 ಗ್ರಾಂ ಕಾರ್ಬೋಹೈಡ್ರೇಟ್, 3 ಗ್ರಾಂ ಸಕ್ಕರೆ ಮತ್ತು 1 ಗ್ರಾಂ ಪ್ರೋಟಿನ್ ದೊರೆಯುತ್ತದೆ.

ನಮ್ಮ ಆರೋಗ್ಯ ರಕ್ಷಣೆ ನಮ್ಮ ಹೊಣೆ ಎಂಬಂತೆ ನಮ್ಮ ದೇಹದ ಇಂದಿನ ಪ್ರತಿ ಸಮಸ್ಯೆಗೂ ನಾವೇ ಕಾರಣ.ಗಜ್ಜರಿ ತಿನ್ನಿ, ಕಣ್ಣಿಗೆ ಒಳ್ಳೆಯದು ಎಂದು ಹಿರಿಯರು ಹೇಳುತ್ತಿದ್ದರು.ಕ್ಯಾರೆಟ್ ಅನ್ನು ಗಜ್ಜರಿ ಅಂತಲೂ ಕರೆಯುತ್ತಾರೆ. ಕ್ಯಾರೆಟ್ ನ ಗುಣವನ್ನು ನಮ್ಮ ಹಿರಿಯರು ನೂರಾರು ವರ್ಷಗಳ ಹಿಂದೆಯೇ ಕಂಡುಕೊಂಡಿದ್ದಾರೆ.

ಕ್ಯಾರೆಟ್‍ನಲ್ಲಿರುವ ಪೋಷಕಾಂಶಗಳು :

  • ಕ್ಯಾರೆಟ್‍ನಲ್ಲಿ ವಿಟಮಿನ್ ಎ, ಕ್ಯಾಲ್ಸಿಯಂ, ಕಬ್ಬಿಣಾಂಶ, ವಿಟಮಿನ್ ಇ, ನಾರಿನಂಶ, ವಿಟಮಿನ್ ಕೆ, ಪೊಟಾಶಿಯಂ, ವಿಟಮಿನ್ ಸಿ, ಪೊಟಾಶಿಯಂ, ಮೆಗ್ನಿಶಿಯಂ, ಫೋಲೆಟ್, ಮ್ಯಾಂಗನೀಸ್, ವಿಟಮಿನ್ ಇ ಮತ್ತು ಸತು ಇರುತ್ತದೆ.
  • ಕ್ಯಾರೆಟ್‍ನಲ್ಲಿ ಮಕ್ಕಳ ಬೆಳವಣಿಗೆಗೆ ಅಗತ್ಯ ಪೋಷಕಾಂಶವಾಗಿರುವ ಬೀಟಾ-ಕೆರೋಟಿನ್ ಇದೆ. ಅದು ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ ಮಾತ್ರವಲ್ಲ ಅದರಲ್ಲಿ ಆ್ಯಂಟಿ ಏಜಿಂಗ್ ಅಂಶಗಳು ಕೂಡ ಇವೆ.
  • ಕ್ಯಾರೆಟಿನಲ್ಲಿ ಥೈಮಿನ್, ನಿಯಾಸಿನ್ ಮತ್ತು ವಿಟಮಿನ್ ಬಿ6 ಇದೆ.
  • ಕ್ಯಾರೆಟ್‍ನಲ್ಲಿರುವ ಡಯೆಟರಿ ಫೈಬರ್, ಸಕ್ಕರೆ ರಕ್ತ ಪ್ರವಾಹಕ್ಕೆ ಹೀರಿಕೊಳ್ಳುವ ಪ್ರಕ್ರಿಯೆಯನ್ನು ನಿಧಾನಗೊಳಿಸುತ್ತದೆ.

ಕ್ಯಾರೆಟ್ ಬಗ್ಗೆ ಇನ್ನೂ ಹಲವಾರು ಮಾಹಿತಿಗಳು:

ಕಣ್ಣಿನ ರಕ್ಷಣೆ

ಕಣ್ಣಿನ ಆರೋಗ್ಯಕ್ಕೆ ಈ ವಿಟಮಿನ್ ಅತಿ ಅವಶ್ಯವಾಗಿದ್ದು ಕೆಲವೇ ಆಹಾರಗಳಲ್ಲಿ ಇದು ಸಮೃದ್ದವಾಗಿದೆ. ಇದರಲ್ಲಿ ಕ್ಯಾರೆಟ್ ಪ್ರಮುಖವಾಗಿದೆ. ನಿಯಮಿತವಾಗಿ ಕ್ಯಾರೆಟ್ ಅನ್ನು ಹಸಿಯಾಗಿ ಅಥವಾ ರಸದ ರೂಪದಲ್ಲಿ ಸೇವಿಸುತ್ತಾ ಬಂದರೆ ಕಣ್ಣಿನ ಆರೋಗ್ಯವನ್ನು ವೃದ್ದಿಸುವ ಜೊತೆಗೇ ಕಣ್ಣಿಗೆ ಎದುರಾಗುವ ಕೆಲವಾರು ಕಾಯಿಲೆಗಳಿಂದ ರಕ್ಷಣೆಯನ್ನೂ ಒದಗಿಸುತ್ತದೆ.

ಕ್ಯಾರೆಟ್‍ ಗಳಲ್ಲಿ ಕಡಿಮೆ ಕ್ಯಾಲೋರಿಗಳಿವೆ

ಕ್ಯಾರೆಟ್‍ಗಳಲ್ಲಿ ಅತಿ ಕಡಿಮೆ ಕೊಬ್ಬು ಹಾಗೂ ಪ್ರೋಟೀನ್ ಇದ್ದು ಸುಮಾರು 86-95 ಶೇಖಡಾದಷ್ಟು ನೀರೇ ಇದೆ. ಅಲ್ಲದೇ ಕೇವಲ ಹತ್ತು ಶೇಖಡಾ ಕಾರ್ಬೋಹೈಡ್ರೇಟುಗಳಿದ್ದು ಒಂದು ಮಧ್ಯಮ ಗಾತ್ರದ ಕ್ಯಾರೆಟ್ ತಿನ್ನುವುದರಿಂದ ಕೇವಲ ಇಪ್ಪತ್ತೈದು ಕ್ಯಾಲೋರಿಗಳು ಹಾಗೂ ಕೇವಲ ನಾಲ್ಕು ಗ್ರಾಂ ನಷ್ಟು ಜೀರ್ಣವಾಗುವ ಕಾರ್ಬೋಹೈಡ್ರೇಟ್ ಲಭ್ಯವಾಗುತ್ತವೆ.

ಕ್ಯಾರೆಟ್‍ಗಳಲ್ಲಿದೆ ಕರಗುವ ನಾರು

ಕ್ಯಾರೆಟ್‍ಗಳಲ್ಲಿ ಕರಗುವ ನಾರು ಹೆಚ್ಚಿನ ಪ್ರಮಾಣದಲ್ಲಿದ್ದು ಇವುಗಳ ಸೇವನೆಯಿಂದ ಸಕ್ಕರೆ ಹಾಗೂ ಪಿಷ್ಟದ ಜೀರ್ಣಕ್ರಿಯೆ ನಿಧಾನಗತಿಯಲ್ಲಿ ಸಾಗುತ್ತದೆ ಹಾಗೂ ಈ ಮೂಲಕ ರಕ್ತದಲ್ಲಿ ಸಕ್ಕರೆಯನ್ನು ನಿಧಾನವಾಗಿ ಪ್ರವಹಿಸಲು ಸಾಧ್ಯವಾಗುತ್ತದೆ. ಅಷ್ಟೇ ಅಲ್ಲ, ಕ್ಯಾರೆಟ್ಟುಗಳಲ್ಲಿ ಉತ್ತಮ ಪ್ರಮಾಣದ ಕರಗದ ನಾರು ಸಹಾ ಇದೆ. ಇವುಗಳು ಮಲಬದ್ದತೆಯಾಗದಂತೆ ನೆರವಾಗುತ್ತವೆ ಹಾಗೂ ಕರುಳುಗಳಲ್ಲಿ ಆಹಾರದ ಚಲನೆ ಸುಲಭವಾಗಿಸಿ ಆರೋಗ್ಯ ವೃದ್ದಿಸುತ್ತವೆ. ಅಲ್ಲದೇ ಇವುಗಳು ನಿಧಾನವಾಗಿ ಸಕ್ಕರೆಯನ್ನು ರಕ್ತಕ್ಕೆ ಸೇರಿಸುವುದರಿಂದ ಇವುಗಳ ಗ್ಲೈಸೆಮಿಕ್ ಕೋಷ್ಟಕದ ಮಟ್ಟವೂ ಕಡಿಮೆಯೇ ಇದೆ.

ಕ್ಯಾರೆಟ್‍ಗಳಲ್ಲಿ ಹೆಚ್ಚಿನ ಪ್ರಮಾಣದ ಖನಿಜಗಳಿವೆ

ಆರೋಗ್ಯಕ್ಕೆ ಅಗತ್ಯವಾದ ಎಲ್ಲಾ ಖನಿಜಗಳನ್ನು ಕ್ಯಾರೆಟ್ ನೀಡಲು ಶಕ್ತವಾಗಿದೆ, ಇದರಲ್ಲಿ ತಾಮ್ರ, ಮ್ಯಾಂಗನೀಸ್, ಕ್ಯಾಲ್ಸಿಯಂ, ಕಬ್ಬಿಣ, ಗಂಧಕ, ಪೊಟ್ಯಾಶಿಯಂ ಹಾಗೂ ಮ್ಯಾಂಗನೀಸ್ ಇದ್ದು ಮೂಳೆಗಳನ್ನು ದೃಢಗೊಳಿಸುತ್ತದೆ. ನಿತ್ಯವೂ ಕ್ಯಾರೆಟ್ಟುಗಳನ್ನು ಸೇವಿಸುವ ಮೂಲಕ ನಿತ್ಯದ ಖನಿಜಗಳ ಅಗತ್ಯತೆಯನ್ನು ಪೂರೈಸಬಹುದು.

ಕ್ಯಾರೆಟ್‍ಗಳಲ್ಲಿ ಆಂಟಿ ಆಕ್ಸಿಡೆಂಟುಗಳು ಹೆಚ್ಚಿನ ಪ್ರಮಾಣದಲ್ಲಿವೆ

ಕ್ಯಾರೆಟ್ಟುಗಳಲ್ಲಿರುವ ಬೀಟಾ ಕ್ಯಾರೋಟೀನ್ ಒಂದು ಪ್ರಬಲ ನೈಸರ್ಗಿಕ ಆಂಟಿ ಆಕ್ಸಿಡೆಂಟ್ ಆಗಿದ್ದು ನಮ್ಮ ದೇಹಗಳನ್ನು ಆಮ್ಲಜನಕದ ಕಣಗಳಿಂದ ಪ್ರೇರಿತವಾದ ಕ್ಯಾನ್ಸರ್ ಉಂಟುಮಾಡುವ ಫ್ರೀ ರ್‍ಯಾಡಿಕಲ್ ಎಂಬ ಕಣಗಳಿಂದ ರಕ್ಷಿಸುತ್ತದೆ. ಹಾಗೂ ಇದರಲ್ಲಿ ಫಾಲ್ಕಾರಿನಾಲ್ ಎಂಬ ಪಾಲಿಅಸಿಟೈಲೀನ್ ಆಂಟಿ ಆಕ್ಸಿಡೆಂಟ್ ಇದೆ. ಇವುಗಳು ಸಹಾ ಕ್ಯಾನ್ಸರ್ ವಿರುದ್ದ ಹೋರಾಡುವ ಶಕ್ತಿ ಹೊಂದಿದೆ.

ಕ್ಯಾರೆಟ್ ಹಲ್ವಾ

ಕ್ಯಾರೆಟ್ ಹಲ್ವಾ ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಇಷ್ಟಪಟ್ಟು ತಿನ್ನುವ ಒಂದು ಸಿಹಿ ತಿನಿಸು ಆಗಿದೆ. ಇನ್ನು ಇದರಲ್ಲಿ ಹಾಲು, ತುಪ್ಪ, ನಟ್ಸ್ ಬಳಸುವುದರಿಂದ ಇವು ರುಚಿಯ ಜೊತೆಗೆ ದೇಹಕ್ಕೆ ಬೇಕಾದ ಪೋಷಕಾಂಶ ನೀಡುತ್ತದೆ. ಈ ಕ್ಯಾರೆಟ್ ಹಲ್ವಾವನ್ನು ಸುಲಭದಲ್ಲಿ ಮಾಡಬಹುದಾಗಿದೆ.

ಬೇಕಾಗುವ ಸಾಮಗ್ರಿ :

  • 2-4 ಕ್ಯಾರೆಟ್
  • ಅರ್ಧ ಲೀಟರ್ ಹಾಲು ಅರ್ಧ ಕಪ್ ಸಕ್ಕರೆ (ನಿಮ್ಮ ಸಿಹಿಗೆ ತಕ್ಕಷ್ಟು)
  • ನಟ್ಸ್ (ಗೋಡಂಬಿ, ಬಾದಾಮಿ, ಪಿಸ್ತಾ)
  • ದ್ರಾಕ್ಷಿ
  • 3-4 ಚಮಚ ತುಪ್ಪ

ಕ್ಯಾರೆಟ್ ಹಲ್ವಾ ಮಾಡುವ ವಿಧಾನ :ಕ್ಯಾರೆಟ್‌ ಅನ್ನು ತುರಿಯಿರಿ,ಕ್ಯಾರೆಟ್‌ ಅನ್ನು ಚಿಕ್ಕ ಕುಕ್ಕರ್‌ಗೆ ಹಾಕಿ ಬೇಯಲು ತಕ್ಕ ಹಾಲು ಸೇರಿಸಿ 2-3 ವಿಶಲ್‌ ಬರುವವರೆಗೆ ಬೇಯಿಸಿ,ಬೆಂದ ಕ್ಯಾರೆಟ್ ನ್ನು ಪ್ಯಾನ್ ಗೆ ಹಾಕಿ ನಂತರ ಸಕ್ಕರೆ ಹಾಕಿ ಕರಗಿದ ನಂತರ ತುಪ್ಪದಲ್ಲಿ ಹುರಿದ ಗೋಡಂಬಿ,ದ್ರಾಕ್ಷಿ ,ಏಲಕ್ಕಿ ಪೌಡರ್ ಹಾಕಿ ಕ್ಯಾರೆಟ್ ಹಲ್ವಾ ರೆಡಿ.

ಕ್ಯಾರೆಟ್ ಹಾಗೂ ಶುಂಠಿಯ ಜ್ಯೂಸ್

ಆರೋಗ್ಯಕರ ಪೇಯವೆಂದರೆ ಅದು ತಾಜಾ ಕ್ಯಾರೆಟ್ ಹಾಗೂ ಶುಂಠಿಯ ಜ್ಯೂಸ್. ಇದನ್ನು ಮನೆಯಲ್ಲಿಯೇ ತಯಾರಿಸಿ ಕುಡಿಯಬಹುದು. ಕ್ಯಾರೆಟ್ ಹಾಗೂ ಶುಂಠಿಯಲ್ಲಿ ಪೋಷಕಾಂಶಗಳು ಹಾಗೂ ಆ್ಯಂಟಿಆಕ್ಸಿಡೆಂಟ್‌ಗಳು ಇರುವ ಕಾರಣದಿಂದ ದೇಹಕ್ಕೆ ತುಂಬಾ ಒಳ್ಳೆಯದು.

ಕ್ಯಾರೆಟ್ ಮತ್ತು ಶುಂಠಿಯ ಜ್ಯೂಸ್ ತಯಾರಿಸುವುದು ಹೇಗೆ: ನಾಲ್ಕರಿಂದ ಐದು ಕ್ಯಾರೆಟ್ ಅರ್ಧ ಇಂಚಿನ ಶುಂಠಿ ತೆಗೆದುಕೊಳ್ಳಿ. ಅರ್ಧ ನಿಂಬೆ, ಸ್ವಲ್ಪ ದಾಲ್ಚಿನಿ ಮತ್ತು ಉಪ್ಪು, ಕ್ಯಾರೆಟ್ ಅನ್ನು ತುಂಡು ಮಾಡಿ ಅದನ್ನು ತೊಳೆದು ಒಣಗಿಸಿ. ಶುಂಠಿಯನ್ನು ಸರಿಯಾಗಿ ತೊಳೆದು ಅದರ ಸಿಪ್ಪೆ ತೆಗೆಯಿರಿ. ಕ್ಯಾರೆಟ್ ಶುಂಠಿ ಜ್ಯೂಸರ್‌ಗೆ ಹಾಕಿಕೊಂಡು ಜ್ಯೂಸ್ ತಯಾರಿಸಿ, ಒಂದು ಲೋಟಕ್ಕೆ ಜ್ಯೂಸ್ ನ್ನು ಹಾಕಿ ಮತ್ತು ಅರ್ಧ ನಿಂಬೆರಸವನ್ನು ಅದಕ್ಕೆ ಹಿಂಡಿಕೊಳ್ಳಿ. ಸ್ವಲ್ಪ ಉಪ್ಪು, ದಾಲ್ಚಿನಿ ಪುಡಿ ಹಾಕಿದರೆ ಕ್ಯಾರೆಟ್ ಜ್ಯೂಸ್ ರೆಡಿ.

Team Newsnap
Leave a Comment
Share
Published by
Team Newsnap

Recent Posts

ಸಂಚಾರ ನಿಯಮಗಳ ಉಲ್ಲಂಘನೆ: ರಾಜ್ಯದಲ್ಲಿ 1,700 ಕೋಟಿ ರೂ. ದಂಡ ಬಾಕಿ

ಬೆಂಗಳೂರು: ಸಂಚಾರ ನಿಯಮಗಳ ಉಲ್ಲಂಘನೆಗೆ ಸಂಬಂಧಪಟ್ಟಂತೆ ರಾಜ್ಯದಲ್ಲಿ ಬರೋಬ್ಬರಿ 1,700 ಕೋಟಿ ರೂ. ದಂಡ ಬಾಕಿ ಉಳಿದಿದೆ. ದಂಡವನ್ನು ವಸೂಲಿ… Read More

May 4, 2024

ಜಾಮೀನು ಅರ್ಜಿ ವಜಾ : ಮಾಜಿ ಸಚಿವ HD ರೇವಣ್ಣ ಬಂಧನ

ಮಾಜಿ ಪ್ರಧಾನಿ ಹೆಚ್​.ಡಿ ದೇವೇಗೌಡರ ನಿವಾಸದಲ್ಲಿದ್ದ ಹೆಚ್​.ಡಿ ರೇವಣ್ಣ ರೇವಣ್ಣರನ್ನು ಅರೆಸ್ಟ್ ಮಾಡಲು ಪದ್ಮನಾಭನಗರಕ್ಕೆ ತೆರಳಿದ್ದ SIT ತಂಡ ಮಹಿಳೆ… Read More

May 4, 2024

ಪ್ರಜ್ವಲ್ ಕೇಸನ್ನು ನಾವು ಯಾರು ಬೆಂಬಲಿಸಿಲ್ಲ, ತಪ್ಪು ಮಾಡಿದವರಿಗೆ ಶಿಕ್ಷೆಯಾಗಲಿ : ಬಿ.ವೈ ವಿಜಯೇಂದ್ರ

ಹುಬ್ಬಳ್ಳಿ : ಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ , : ನಾವು ಯಾರು ಪ್ರಜ್ವಲ್ ರೇವಣ್ಣ ಪ್ರಕರಣವನ್ನು ಬೆಂಬಲಿಸಿಲ್ಲ… Read More

May 4, 2024

ಶಕುನಿ ಪಾತ್ರಧಾರಿ ವೇದಿಕೆಯ ಮೇಲೆಯೇ ಕುಸಿದು ಬಿದ್ದು ಸಾವು

ನಿನ್ನೆ ರಾತ್ರಿ 72ರ ವಯಸ್ಸಿನ ಎನ್.ಮುನಿಕೆಂಪಣ್ಣ ಶಕುನಿ (Shakuni) ವೇಷದಲ್ಲಿ ವೇದಿಕೆಗೆ ಬಂದು ಪಾತ್ರ ನಿರ್ವಹಿಸುತ್ತಲೇ ವೇದಿಕೆಯ ಮೇಲೆ ಕುಸಿದು… Read More

May 4, 2024

ಬಿಜೆಪಿಯವರು ಏಕೆ ಪ್ರಜ್ವಲ್ ರೇವಣ್ಣ ಕೇಸ್ ಬಗ್ಗೆ ಮಾತನಾಡುತ್ತಿಲ್ಲ ?ಡಿ.ಕೆ.ಶಿವಕುಮಾರ್

ಬಾಗಲಕೋಟೆ : ಡಿಸಿಎಂ ಡಿ.ಕೆ.ಶಿವಕುಮಾರ್ , ಬಿಜೆಪಿ ಮುಖಂಡರು ಪ್ರಜ್ವಲ್ ರೇವಣ್ಣ ಬಗ್ಗೆ ಯಾಕೆ ಮಾತನಾಡುತ್ತಿಲ್ಲ ? ಹೆಣ್ಣುಮಕ್ಕಳಿಗೆ ಸಾಂತ್ವನ… Read More

May 4, 2024

ರೇವಣ್ಣ ಅಪಹರಣ ಕೇಸ್‌ : ಎಸ್‌ಐಟಿ ವಿಶೇಷ ತಂಡದಿಂದ 40 ಕಡೆ ರೇಡ್‌

ಬೆಂಗಳೂರು : ನೆನ್ನೆ ವಿಶೇಷ ತನಿಖಾ ತಂಡ (ಎಸ್‌ಐಟಿ) , ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರಿಂದ ಲೈಂಗಿಕ ಶೋಷಣೆಗೆ ಒಳಗಾಗಿದ್ದಳು… Read More

May 4, 2024