January 30, 2026

Newsnap Kannada

The World at your finger tips!

covid5

ಕೊರೋನಾ ಸೋಂಕಿತ ಮಾವನನ್ನು ಹೆಗಲ ಮೇಲೆ ಹೊತ್ತು ಆಸ್ಪತ್ರೆಗೆ ಸಾಗಿದ ಸೊಸೆ!

Spread the love

ಕೊರೊನಾ ಸೋಂಕಿತ ಮಾವನನ್ನು ಸೊಸೆ ಹೆಗಲ ಮೇಲೆ ಹೊತ್ತು ಆಟೋಗೆ ಸಾಗಿಸಿ ಅಲ್ಲಿಂದ ಆಸ್ಪತ್ರೆಗೆ ಕರೆದುಕೊಂಡ ಹೋದ ಘಟನೆ ಭವನೇಶ್ವರದಲ್ಲಿ ಜರುಗಿದೆ.

ಕೊರೊನಾ ಚಿಕಿತ್ಸೆಗಾಗಿ ತನ್ನ ಮಾವನನ್ನು ಸೊಸೆ ಹೊತ್ತು ಸಾಗುವ ಮೂಲಕವಾಗಿ ಮಾನವೀಯತೆ ಜೊತೆಗೆ ಸಂಬಂಧದ ಮೌಲ್ಯವನ್ನು ಸಾರಿದ್ದಾಳೆ.

ತುಳೇಶ್ವರ್ ದಾಸ್(75) ಕೊರೊನಾ ಸೋಂಕಿನಿಂದ ಬಳಲುತ್ತಿದ್ದರು. ಈತನ ಮಗ ಸೂರಜ್ ಕೆಲಸದ ನಿಮಿತ್ತ ಬೇರೆ ಊರಿನಲ್ಲಿ ವಾಸವಾಗಿದ್ದಾನೆ. ಹೀಗಾಗಿ ಮನೆಯ ಪೂರ್ತಿ ಜವಾಬ್ದಾರಿ ಸೊಸೆ ನಿಹಾರಿಕಾ ಮೇಲೆ ಇತ್ತು.

ಮಾವನ ಆರೋಗ್ಯ ಸ್ಥಿತಿ ಬಿಗಡಾಯಿಸುತ್ತಿದ್ದಂತೆ ಏನು ಮಾಡುವುದು ಗೊಂದಲಕ್ಕೀಡಾದ ನಿಹಾರಿಕ ಮಾವನನ್ನು ಹೊತ್ತುಕೊಂಡು ಕೋವಿಡ್ ಸೆಂಟರ್​ಗೆ ತೆರೆಳಿದ್ದಾಳೆ.

ಮಾವನನ್ನು ಆಸ್ಪತ್ರೆಗೆ ದಾಳಲಿಸಿದ ಸೊಸೆ ನಿಹಾರಿಕಳನ್ನು ಮನೆಯಲ್ಲಿಯೇ ಪ್ರತ್ಯೇಕವಾಗಿ ಇರಲು ವೈದ್ಯರು ಸೂಚನೆ ನೀಡಿದ್ದಾರೆ.

ಮಾವನೊಬ್ಬನನ್ನೇ ಕೊರೊನಾ ಕೇಂದ್ರಕ್ಕೆ ಕಳುಹಿಸಲು ನಿಹಾರಿಕಾ ನಿರಾಕರಿಸಿದ್ದಾಳೆ. ಇದಕ್ಕೆ ಸ್ಪಂದಿಸಿದ ಆಸ್ಪತ್ರೆ ಸಿಬ್ಬಂದಿ ಅಂಬ್ಯುಲೆನ್ಸ್‌ನಲ್ಲಿ ಇಬ್ಬರನ್ನು ಕೋವಿಡ್ ಆಸ್ಪತ್ರೆಗೆ ಕಳುಹಿಸಿದ್ದಾರೆ. ತನ್ನ ಪ್ರಾಣ ಲೆಕ್ಕಿಸದೇ ಕೊರೊನಾ ಸೋಂಕಿತ ಮಾವನನ್ನು ಹೊತ್ತು ಆಸ್ಪತ್ರೆಗೆ ಧಾವಿಸಿದ ನಿಹಾರಿ ನಡೆಗೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.

error: Content is protected !!