December 27, 2024

Newsnap Kannada

The World at your finger tips!

car rally

ಅಮೆರಿಕಾದಲ್ಲಿ ಅಪ್ಪುಗಾಗಿ CAR Rally : ಪುನೀತ್ ಪುತ್ರಿ ಕೂಡ ಭಾಗಿ

Spread the love

ಪವರ್​​ ಸ್ಟಾರ್​​ ಪುನೀತ್​​ ರಾಜಕುಮಾರ್​​ ಕೊನೇ ಸಿನಿಮಾ ಜೇಮ್ಸ್​​ ರಿಲೀಸ್​ ಆಗಿ ಸೂಪರ್​​ ಹಿಟ್​​ ಆಗಿದೆ.

ಈ ಸಿನಿಮಾದ ಹವಾ ಭಾರತ ಮಾತ್ರವಲ್ಲ ಅಮೆರಿಕಾದಲ್ಲೂ ಜೋರಾಗಿದೆ. ಅಮೆರಿಕಾದ ನ್ಯೂಜೆರ್ಸಿಯಲ್ಲಿರುವ ಅಭಿಮಾನಿಗಳು ಅಪ್ಪು ಬರ್ತ್​​ಡೇ ಅನ್ನು ಡಿಫಿರೆಂಟ್​ ಆಗಿ ಸೆಲೆಬ್ರೇಟ್​ ಮಾಡಿದರು.

ಇಂದು ಅಪ್ಪು ಸಿನಿಮಾ ನೋಡಿದ ಬಳಿಕ 250ಕ್ಕೂ ಹೆಚ್ಚು ಜನ ಕಾರುಗಳಲ್ಲಿ ರ್ಯಾಲಿ ಮಾಡೋ ಮೂಲಕ ‘ಅಪ್ಪು ಜಾತ್ರೆ’ ಎಂಬ ಕಾರ್ಯಕ್ರಮ ಮಾಡಿದರು. ಈ ಕಾರ್ಯಕ್ರಮದಲ್ಲಿ ಪುನೀತ್ ಪುತ್ರಿ ಕೂಡ ಪಾಲ್ಗೊಂಡಿದ್ದಳು.

ನಾರ್ತ್ ಬುನ್ಸ್ವಿಕ್‌ನಲ್ಲಿ ’ರೇಗಲ್ ಸಿನಿಮಾಸ್’ನಲ್ಲಿ ಪುನೀತ್​​ ಕೊನೇ ಸಿನಿಮಾ ಕಣ್ತುಂಬಿಸಿಕೊಂಡರು. ಈ ಕಾರ್ಯಕ್ರಮದಲ್ಲಿ ಪುನೀತ್​ ರಾಜಕುಮಾರ್​​ ಪುತ್ರಿ ಸೇರಿದಂತೆ ನೂರಾರು ಅಪ್ಪು ಅಭಿಮಾನಿಗಳು ಭಾಗಿಯಾಗಿದ್ದರು.

Copyright © All rights reserved Newsnap | Newsever by AF themes.
error: Content is protected !!