ನವದೆಹಲಿ: ಹೊಸ ವರ್ಷಕ್ಕೆ ಕಾರು ಖರೀದಿಸಲು ಯೋಚಿಸುತ್ತಿರುವ ಗ್ರಾಹಕರಿಗೆ ಮಾರುತಿ ಸುಜುಕಿ ಮತ್ತು ಹುಂಡೈ ಶಾಕ್ ನೀಡಿದ್ದಾರೆ. ಡಿಸೆಂಬರ್ 6ರಂದು ಮಾರುತಿ ಸುಜುಕಿ ತನ್ನ ಕಾರುಗಳ ಬೆಲೆಯನ್ನು ಜನವರಿ 2025 ರಿಂದ ಶೇಕಡಾ 4ರಷ್ಟು ಹೆಚ್ಚಿಸುವುದಾಗಿ ಘೋಷಿಸಿತು.
ಮಾರುತಿ ಸುಜುಕಿಯ ಘೋಷಣೆ:
ಹೆಚ್ಚುತ್ತಿರುವ ಉತ್ಪಾದನಾ ವೆಚ್ಚ ಮತ್ತು ನಿರ್ವಹಣಾ ವೆಚ್ಚವನ್ನು ಸಮತೋಲನಗೊಳಿಸಲು ಈ ನಿರ್ಧಾರ ತೆಗೆದುಕೊಂಡಿದ್ದು, ಬೆಲೆ ಏರಿಕೆ ಮಾದರಿಯ ಪ್ರಕಾರ ಬದಲಾಗುತ್ತದೆ. “ಗ್ರಾಹಕರ ಮೇಲೆ ವೆಚ್ಚದ ಬೊಜ್ಜನ್ನು ಕಡಿಮೆ ಮಾಡುವ ಪ್ರಯತ್ನಗಳಲ್ಲಿ ನಾವು ತೊಡಗಿದ್ದರೂ, ನಾವೀಗ ಹೆಚ್ಚಿದ ವೆಚ್ಚದ ಭಾಗವನ್ನು ಮಾರುಕಟ್ಟೆಗೆ ವರ್ಗಾಯಿಸಲು ಬಲವಂತವಾಗಿದ್ದೇವೆ,” ಎಂದು ಕಂಪನಿಯ ಪ್ರಕಟಣೆ ತಿಳಿಸಿದೆ.
ಹುಂಡೈ ಕಾರುಗಳ ಬೆಲೆ ಏರಿಕೆ:
ಮಾರುತಿ ಸುಜುಕಿಯ ಈ ನಿರ್ಧಾರವು, ಹುಂಡೈ ಮೋಟಾರ್ಸ್ ತನ್ನ ಕಾರುಗಳ ಬೆಲೆಯನ್ನು 2025 ಜನವರಿ 1ರಿಂದ 25,000 ರೂಪಾಯಿವರೆಗೆ ಹೆಚ್ಚಿಸುವುದಾಗಿ ಘೋಷಿಸಿದ ಒಂದೇ ದಿನದ ನಂತರ ಬಂದಿದೆ. ಹ್ಯುಂಡೈ ಇಂಡಿಯಾ ಮುಖ್ಯ ಕಾರ್ಯನಿರ್ವಾಹಕ ತರುಣ್ ಗಾರ್ಗ್ ಹೇಳಿಕೆ ನೀಡಿದಂತೆ, “ಇನ್‌ಪುಟ್ ವೆಚ್ಚದ ನಿರಂತರ ಏರಿಕೆಯಿಂದ, ಬೆಲೆ ಹೊಂದಾಣಿಕೆ ಮಾಡುವುದು ಅಗತ್ಯವಾಗಿದೆ. ಜನವರಿ 1ರಿಂದ ಎಲ್ಲಾ MY25 ಮಾದರಿಗಳಲ್ಲಿ ಈ ಬೆಲೆ ಏರಿಕೆ ಜಾರಿಯಾಗಲಿದೆ.”
ಮಾರುತಿ ಸುಜುಕಿಯ ಷೇರುಗಳು ಡಿಸೆಂಬರ್ 6ರಂದು ಮಧ್ಯಾಹ್ನ 12:06ಕ್ಕೆ ಶೇಕಡಾ 0.58ರಷ್ಟು ಏರಿಕೆಯಾಗಿದ್ದು, ಪ್ರತಿ ಷೇರುದ ಬೆಲೆ 11,246.9 ರೂಪಾಯಿಯಾಗಿದೆ.ಇದನ್ನು ಓದಿ –ಶಾಲೆಯಲ್ಲಿ ವಿದ್ಯಾರ್ಥಿಗಳ ನಡುವೆ ಗಲಾಟೆ: 6ನೇ ತರಗತಿ ಬಾಲಕನ ದುರ್ಮರಣ
ಗ್ರಾಹಕರಿಗೆ ಬಾದೆ:
ಮಾರುತಿ ಮತ್ತು ಹುಂಡೈ ಇವುಗಳ ಬೆಲೆ ಏರಿಕೆಯಿಂದಾಗಿ ಹೊಸ ವರ್ಷದಲ್ಲಿ ಕಾರು ಖರೀದಿಸಲು ಮುಂದಾಗಿರುವ ಗ್ರಾಹಕರಿಗೆ ಹೆಚ್ಚಿನ ವೆಚ್ಚವನ್ನು ಹೊರುವ ಅನಿವಾರ್ಯತೆ ಎದುರಾಗುವ ಸಾಧ್ಯತೆ ಇದೆ.


More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು