December 25, 2024

Newsnap Kannada

The World at your finger tips!

accident

ಚಲಿಸುತ್ತಿದ್ದ ಕಾರಿನ ಮೇಲೆ ಉರುಳಿದ ಮರ ; ಶಿಕ್ಷಕರ ಸಂಘದ ಉಪಾಧ್ಯಕ್ಷ ಪ್ರಾಣಾಪಾಯದಿಂದ ಪಾರು

Spread the love

ಚಲಿಸುತ್ತಿದ್ದ ಕಾರಿನ ಮೇಲೆ ಮರ ಉರುಳಿದ ಬಿದ್ದ ಪರಿಣಾಮ ರಾಜ್ಯ ಶಿಕ್ಷಕರ ಸಂಘದ ಉಪಾಧ್ಯಕ್ಷ ಪ್ರಾಣಾಪಾಯದಿಂದ ಪಾರಾದ ಘಟನೆ ಮಂಡ್ಯ ತಾಲೂಕಿನ ಬಸರಾಳು ಸಮೀಪದ ಕೋಡಿಕೊಪ್ಪಲು ಗ್ರಾಮದ ಮಂಡ್ಯ- ನಾಗಮಂಗಲ ರಸ್ತೆಯಲ್ಲಿ ಸೋಮವಾರ ಜರುಗಿದೆ.

ಇದನ್ನು ಓದಿ – ಬೆಂಗಳೂರು ನಗರ ಪೋಲಿಸ್ ನೂತನ ಆಯುಕ್ತ ಪ್ರತಾಪ್ ರೆಡ್ಡಿ – ಕಮಲ್ ಪಂತ್ ಎತ್ತಂಗಡಿ

ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಉಪಾಧ್ಯಕ್ಷ ಕೆ.ನಾಗೇಶ್ ಹಾಗೂ ಕಾರಿನ ಚಾಲಕ ಕೋಡಿಕೊಪ್ಪಲು ಸರ್ಕಾರಿ ಶಾಲೆ ಆರಂಭಗೊಂಡ ಹಿನ್ನೆಲೆಯಲ್ಲಿ ಶಾಲೆಗೆ ತೆರಳಿ ವಾಪಸ್ ಮಂಡ್ಯಕ್ಕೆ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ.

ಘಟನೆ ನಡೆದ ಸ್ಥಳಕ್ಕೆ ಆಗಮಿಸಿದ ಸ್ಥಳೀಯರು ಮರವನ್ನು ಕತ್ತರಿಸಿ ಕಾರಿನಲ್ಲಿದ್ದವರನ್ನು ಹೊರಗೆ ಬರಲು ಅನುಕೂಲ ಮಾಡಿಕೊಟ್ಟಿದ್ದಾರೆ. ಇದರಿಂದ ಕಾರು ಸಂಪೂರ್ಣ ಜಖಂಗೊಂಡಿದೆ.

Copyright © All rights reserved Newsnap | Newsever by AF themes.
error: Content is protected !!