December 23, 2024

Newsnap Kannada

The World at your finger tips!

WhatsApp Image 2023 04 15 at 7.26.20 AM

ಕಾರು ಅಪಘಾತ: ಬಾಬು ರಾವ್ ಚಿಂಚನಸೂರು ಕಾಲು, ಮುಖಕ್ಕೆ ತೀವ್ರ ಗಾಯ – ಆಸ್ಪತ್ರೆಗೆ ದಾಖಲು

Spread the love

ಕಾಂಗ್ರೆಸ್ ಅಭ್ಯರ್ಥಿ ಮಾಜಿ ಸಚಿವ ಬಾಬು ರಾವ್ ಚಿಂಚನಸೂರು ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೆ ಇಡಾಗಿದೆ. ಇದರಿಂದ ಬಾಬೂರಾವ್ ಅವರ ಕಾಲು ಮುಖಕ್ಕೆ ತೀವ್ರ ಗಾಯವಾಗಿ ಆಸ್ಪತ್ರೆ ದಾಖಲು ಮಾಡಲಾಗಿದೆ.

ಕಳೆದ ರಾತ್ರಿ 12.30 ರ ವೇಳೆಗೆ ಯಾದಗಿರಿಯಿಂದ ಕಲಬುರಗಿಗೆ ಹೋಗುವಾಗ ಕಲಬುರಗಿ ಆಕಾಶವಾಣಿ ಕೇಂದ್ರದ ಬಳಿ ಈ ಅಪಘಾತ ಸಂಭವಿಸಿದೆ.

ಚಾಲಕ ನಿದ್ದೆ ಮಂಪರಿನಲ್ಲಿ ಇದ್ದಾಗ ಕಾರು ಹಳ್ಳಕ್ಕೆ ಹೋಗಿ ಬಿದ್ದಿದೆ. ಆಗ ಬಾಬೂರಾವ್ ಗೆ ಎರಡೂ ಕಾಲುಗಳು ಹಾಗೂ ತಲೆಗೆ ಪೆಟ್ಟು ಬಿದ್ದಿದೆ . ಚಾಲಕ , ಗನ್ ಮ್ಯಾನ್ ಗೂ ಗಾಯಗಳಾಗಿವೆ.

ಯುನೈಟೆಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕಲಬುರಗಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Copyright © All rights reserved Newsnap | Newsever by AF themes.
error: Content is protected !!