November 22, 2024

Newsnap Kannada

The World at your finger tips!

leopard

ಮೈಸೂರಿನಲ್ಲಿ ಚಿರತೆಗಳ ಸೆರೆ

Spread the love

ಮೈಸೂರು : ಸೋಮವಾರ ಬೆಳಗ್ಗೆ ನಂಜನಗೂಡು ವ್ಯಾಪ್ತಿಯ ಚಿಕ್ಕಯ್ಯನಛತ್ರ ಹೋಬಳಿಯ ಹತ್ಯಾಳು ಗ್ರಾಮದಲ್ಲಿ ಜಾನುವಾರುಗಳ ಮೇಲೆ ದಾಳಿ ಮಾಡುತ್ತಿದ್ದ ಚಿರತೆ ಬೋನಿಗೆ ಬಿದ್ದಿದೆ.

ದಿನದಿಂದ ದಿನಕ್ಕೆ ಚಿರತೆಗಳ ಕಾಟ ಹೆಚ್ಚಾಗುತ್ತಿದ್ದು ಮೈಸೂರು ಜಿಲ್ಲೆಯ ಎರಡು ಗ್ರಾಮಗಳಲ್ಲಿ ಅರಣ್ಯ ಇಲಾಖೆ 2 ಚಿರತೆಗಳನ್ನು ಸೆರೆ ಹಿಡಿದು ರಕ್ಷಿಸಿದೆ.

ನಂಜನಗೂಡು ತಾಲೂಕಿನ ರಾಂಪುರ ಹಾಗೂ ಸುತ್ತಮುತ್ತಲ ಗ್ರಾಮಗಳಲ್ಲಿ ಜಾನುವಾರುಗಳ ಮೇಲೆ ದಾಳಿ ಮಾಡುತ್ತಿದ್ದ 2 ಚಿರತೆಗಳು ಬೋನಿಗೆ ಬಿದ್ದಿವೆ .

ಜಾನುವಾರುಗಳ ಮೇಲೆ ಈ ಪ್ರದೇಶದಲ್ಲಿ ಚಿರತೆಗಳು ದಾಳಿ ಮಾಡುತ್ತಿರುವ ಬಗ್ಗೆ ದೂರುಗಳು ಬಂದಿದ್ದು, ಇದರಿಂದ ರೈತರು ಜಾನುವಾರುಗಳನ್ನು ಮೇಯಿಸಲು ಭಯಪಡುತ್ತಿದ್ದರು.

ಅರಣ್ಯ ಇಲಾಖೆಗೆ ಬೀಡುಬಿಟ್ಟಿರುವ ಇತರ ಚಿರತೆಗಳನ್ನು ಸೆರೆ ಹಿಡಿಯುವಂತೆ ಇಲ್ಲಿನ ನಿವಾಸಿಗಳು ಮನವಿ ಮಾಡಿದ್ದಾರೆ.ದುಬೈನಲ್ಲಿ ʻCBSEʼ ಹೊಸ ಕಚೇರಿಯನ್ನು ತೆರೆಯಲಾವುದು :ಪ್ರಧಾನಿ ಮೋದಿ ಘೋಷಣೆ

ಭಾನುವಾರ ರಾತ್ರಿ ಟಿ.ನರಸೀಪುರ ವ್ಯಾಪ್ತಿಯ ತಲಕಾಡು ಹೋಬಳಿಯ ಕುರುಬೋಳನಹುಂಡಿಯ ಬಾಳೆ ತೋಟದಲ್ಲಿ ಹಾಕಲಾಗಿದ್ದ ಬಲೆಗೆ ಮತ್ತೊಂದು ಚಿರತೆ ಬಿದ್ದಿದೆ.

Copyright © All rights reserved Newsnap | Newsever by AF themes.
error: Content is protected !!