ಕೊರೊನಾ ಲಸಿಕೆ ಹಾಕಿಸಿಕೊಂಡ 45 ದಿನಗಳ ಕಾಲ ಗುಂಡು ಹಾಕುವಂತಿಲ್ಲ !

Team Newsnap
1 Min Read

ನಿತ್ಯವೂ‌ ಗುಂಡು ( ಮದ್ಯ) ಹಾಕದೇ ಇರೋಕೆ ಸಾಧ್ಯವೇ ಇಲ್ಲ ಎನ್ನುವವರಿಗೆ ಒಂದು ಸಣ್ಣ ಆಘಾತಕರ ಸಂಗತಿ ಇದೆ.

ಮದ್ಯ ಸೇವನೆ ಮಾಡುವವರು ಯಾರೇ ಆಗಲಿ ಕೊರೋನಾ ಲಸಿಕೆ ಹಾಕಿಸಿಕೊಂಡರೆ 45 ದಿನಗಳ ಕಾಲ ಎಣ್ಣೆ (ಮದ್ಯ) ಹೊಡೆಯುವ ಅಭ್ಯಾಸ ದಿಂದ ದೂರ ಇರಬೇಕು. ಹಾಗೊಂದು ವೇಳೆ ಲಸಿಕೆ ಹಾಕಿಸಿಕೊಂಡವರು ಗುಂಡು ಹಾಕಿದರೆ ಲಸಿಕೆಯ ಔಷಧಿ ವಕ್೯ ಔಟ್ ಆಗುವುದಿಲ್ಲವಂತೆ !

ಈ ಸಂಗತಿಯನ್ನು ನಾವು ಹೇಳುತ್ತಿಲ್ಲ. ಕೋವಿಡ್ ತಾಂತ್ರಿಕ ಸಲಹಾ ಸಮಿತಿಯ ಅಧ್ಯಕ್ಷ ಡಾ.ಸುದರ್ಶನ್ ಬಲ್ಲಾಳ್ ಅವರೇ ಹೇಳಿದ್ದಾರೆ.

ಸ್ವತಃ ತಾವೇ ಕೊರೋನಾ ಲಸಿಕೆ ತೆಗೆದುಕೊಂಡ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಡಾ. ಸುದರ್ಶನ್ ಬಳ್ಳಾಲ್ , ಕೊರೊನಾ ಲಸಿಕೆ ಹಾಕಿಸಿಕೊಂಡರೆ ಯಾವುದೇ ತೊಂದರೆ ಇಲ್ಲ. ಜೊತೆಗೆ ಎಲ್ಲಾ ವಯಸ್ಸಿನವರೂ ಲಸಿಕೆ ತೆಗೆದುಕೊಳ್ಳಬಹುದು. ರಾಜ್ಯದ ಜನರು ಭಯ ಬಿಟ್ಟು ಕೊರೊನಾ ಲಸಿಕೆ ತೆಗೆದುಕೊಳ್ಳಬೇಕು ಎಂದು ಸಲಹೆ ನೀಡಿದರು.

ಮದ್ಯ ಸೇವನೆ ಮಾಡಿದರೆ ವಕ್೯ ಔಟ್ ಆಗೋಲ್ಲಾ!

ಕೊರೋನಾ ಲಸಿಕೆ ಹಾಕಿಸಿಕೊಂಡವರು ಮದ್ಯ ಸೇವನೆ ಮಾಡಿದರೆ ಲಸಿಕೆಯ ಔಷಧಿ ಮಾತ್ರ ವರ್ಕ್ ಔಟ್ ಆಗುವುದಿಲ್ಲ. ಒಟ್ಟು 45 ದಿನ ಮದ್ಯ ಸೇವಿಸುವಂತಿಲ್ಲ. ಕನಿಷ್ಟ 45 ದಿನ ಮದ್ಯ ಸೇವನೆಯಿಂದ ದೂರು ಇರಬೇಕಾಗುತ್ತದೆ ಎಂದು ಹೇಳಿದರು.

ಮೊದಲ ಲಸಿಕೆ ತೆಗೆದುಕೊಂಡ 28 ದಿನಗಳ ನಂತರ ಎರಡನೇ ಲಸಿಕೆ ನೀಡಲಾಗುತ್ತಿದೆ. ಇದರಿಂದ ಬೇರೆ ಯಾವ ತೊಂದರೆ ಬರುವುದಿಲ್ಲ ಎಂದು ಅಧ್ಯಕ್ಷ ಬಲ್ಲಾಳ್ ಸ್ಪಷ್ಟವಾಗಿ ಹೇಳಿದರು.

Share This Article
Leave a comment