January 29, 2026

Newsnap Kannada

The World at your finger tips!

bpl

ಅಕ್ರಮ 94 ಸಾವಿರ ಬಿಪಿಎಲ್ ಕಾರ್ಡ್ ರದ್ದು- 6 ಕೋಟಿ ರೂ ಇಳಿಕೆ

Spread the love

ಆರ್ಥಿಕವಾಗಿ ಸದೃಢವಾಗಿದ್ದರೂ ತಪ್ಪು ಮಾಹಿತಿ ನೀಡಿ ಬಿಪಿಎಲ್ ಕಾರ್ಡ್ ಪಡೆದುಕೊಂಡವರಿಗೆ ರಾಜ್ಯ ಸರ್ಕಾರ ಬಿಗ್ ಶಾಕ್ ನೀಡಿದೆ. 94 ಸಾವಿರಕ್ಕೂ ಅಧಿಕ ಅನರ್ಹ ಬಿಪಿಎಲ್ ಕಾರ್ಡಗಳನ್ನು ರದ್ದುಪಡಿಸಲಾಗಿದೆ. ಪರಿಣಾಮ ಸರಕಾರದ ಬೊಕ್ಕಸಕ್ಕೆ ಕೋಟ್ಯಾಂತರ ರೂಪಾಯಿ ಉಳಿತಾಯವಾಗಿದೆ.

ಹೆಚ್ಚಿನ ಸಂಖ್ಯೆಯ ಜನರು ಆರ್ಥಿಕವಾಗಿ ಸದೃಢವಾಗಿದ್ದರೂ ಬಿಪಿಎಲ್‌ ಕಾರ್ಡ್‌ ಪಡೆದುಕೊಂಡು ಉಚಿತವಾಗಿ ಪಡಿತರ ಪಡೆಯುತ್ತಿದ್ದಾರೆ. ಇದರಿಂದಾಗಿ ಸರ್ಕಾರದ ಬೊಕ್ಕಸಕ್ಕೆ ನಷ್ಟವಾಗುತ್ತಿದೆ. ಅದನ್ನು ತಡೆಯುವ ಉದ್ದೇಶದಿಂದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಬಿಪಿಎಲ್‌ ಕಾರ್ಡ್‌ ಪಡೆದ ಅನರ್ಹರ ಪತ್ತೆಗೆ ಮುಂದಾಗಿತ್ತು.

ಇಲಾಖೆ ಪಡಿತರ ಚೀಟಿ ಹಿಂತಿರುಗಿಸುವಂತಹ ಅವಧಿಯಲ್ಲಿ ಎರಡು ಮೂರು ಬಾರಿ ವಿಸ್ತರಿಸಿತ್ತು. ಅದಾದ ಬಳಿಕವೂ ಹೆಚ್ಚಿನ ಸಂಖ್ಯೆ ಜನರು ಹಿಂತಿರುಗಿಸಲು ಮುಂದಾಗದ ಹಿನ್ನೆಲೆಯಲ್ಲಿ ಇಲಾಖೆಯೇ ನಕಲಿಗಳ ವಿರುದ್ಧ ಕ್ರಮಕ್ಕೆ ಮುಂದಾಗಿದೆ.

15 ತಿಂಗಳಲ್ಲಿ (2019ರ ಮೇ 2020ರ ಆಗಸ್ಟ್‌ವರೆಗೆ) ರಾಜ್ಯಾದ್ಯಂತ 94,885 ಎಎವೈ ಹಾಗೂ ಬಿಪಿಎಲ್‌ ಕಾರ್ಡ್‌ಗಳನ್ನು ಇಲಾಖೆ ರದ್ದುಪಡಿಸಿದೆ. ಸರ್ಕಾರಕ್ಕೆ ಅಂದಾಜು ಪ್ರತಿ ತಿಂಗಳು ಆರು ಕೋಟಿಗೂ ಹೆಚ್ಚಿನ ಹಣ ಉಳಿತಾಯವಾಗುತ್ತಿರುವುದು ಅಂಕಿ-ಅಂಶಗಳಿಂದ ಕಂಡುಬಂದಿದೆ. ಬಿಪಿಎಲ್‌ ಹಾಗೂ ಎಎವೈ ಪಡಿತರ ಚೀಟಿಗಳಿಗೆ ಸರಕಾರದಿಂದ ಸದ್ಯ ಉಚಿತವಾಗಿ ಪಡಿತರ ವಿತರಿಸಲಾಗುತ್ತದೆ, ಫಲಾನುಭವಿಗಳಿಗೆ ನೀಡುವ ಪ್ರತಿ ಕೆಜಿಗೆ ಸರಕಾರ 22-23 ರೂ. ವೆಚ್ಚ ಮಾಡುತ್ತಿದೆ. ಅದರಂತೆ 94 ಸಾವಿರ ಪಡಿತರ ಚೀಟಿಗಳಲ್ಲಿ ಸರಾಸರಿ ಮೂರು ಸದಸ್ಯರಂತೆ 2.82 ಲಕ್ಷ ಸದಸ್ಯರು ಇಷ್ಟು ದಿನ ಪಡಿತರ ಪಡೆಯುತ್ತಿದ್ದರು. ಅದರಂತೆ ಅಂದಾಜು 6 ಕೋಟಿಗೂ ಹೆಚ್ಚಿನ ಹಣ ಸರ್ಕಾರಕ್ಕೆ ಹೊರೆಯಾಗುತ್ತಿತ್ತು.

error: Content is protected !!