Editorial

ನನ್ನ ಬಳಿ ಇರುವ ಕೆಲವು ಸೀಡಿಗಳನ್ನು ಪ್ರಸಾರ ಮಾಡುವಿರಾ?

ನನ್ನ ಬಳಿಯು ಸಹ ಕೆಲವು ಸೀಡಿಗಳು ಇವೆ. ದಯವಿಟ್ಟು ಅದನ್ನು ಪ್ರಸಾರ ಮಾಡಿ…….

ಸುಮಾರು 110 ವರ್ಷ ಕಾಲ್ನಡಿಗೆಯಲ್ಲಿ ಹಳ್ಳಿ ಹಳ್ಳಿ ತಿರುಗಿ ಭಿಕ್ಷೆ ಬೇಡಿ ಅನ್ನ ದಾಸೋಹ – ಅಕ್ಷರ ದಾಸೋಹ ಮಾಡಿದ ನಿಜವಾದ ಕಾಯಕ ಯೋಗಿ ಸಿದ್ದಗಂಗೆಯ ಶಿವಕುಮಾರ ಸ್ವಾಮಿಗಳ ಸೀಡಿ……..

ಏಕಾಂಗಿಯಾಗಿ ತನ್ನ ಮಕ್ಕಳಂತೆ ಸಾವಿರಾರು ಗಿಡಗಳನ್ನು ನೆಟ್ಟು ಸಾಕಿ ಬೆಳೆಸಿ ಪ್ರಕೃತಿಯ ಋಣ ತೀರಿಸಿದ ಸಾಲು ಮರದ ತಿಮ್ಮಕ್ಕನ ಸಾಧನೆಯ ಸೀಡಿ……

ಇಡೀ ರಾಜ್ಯದಲ್ಲಿ ಆ ಕಾಲಕ್ಕೆ ಹಳ್ಳಿ ಹಳ್ಳಿಗೂ ಬೋರ್ ವೆಲ್ ಕೊರೆಸಿ ಜನರ ಕುಡಿಯುವ ದಾಹವನ್ನು ತಣಿಸಿ ನೀರ್ ಸಾಬ್ ಎಂದು ಹೆಸರಾದ ನಜೀರ್ ಸಾಬ್ ಅವರ ಸೀಡಿ……..

ಸಮಾನತೆ ಸ್ವಾತಂತ್ರ್ಯದ ವಿಷಯದಲ್ಲಿ ಇಡೀ ವಿಶ್ವಕ್ಕೆ ಮಾದರಿಯಾಗುವ ಸಮ ಸಮಾಜದ ಚಿಂತನೆಯನ್ನು ಬಿತ್ತಿದ ಶರಣ ಸಂಸ್ಕೃತಿಯ ಹರಿಕಾರ ಬಸವಣ್ಣನವರ ಸೀಡಿ………

ಸಾಹಿತ್ಯವೆಂದರೆ ಇದೇ ಎನ್ನುವ ರೀತಿಯಲ್ಲಿ ಅಕ್ಷರಗಳೊಂದಿಗೆ ವೈಚಾರಿಕ ಪ್ರಜ್ಞೆ ಮೂಡಿಸಿ ವಿಶ್ವ ಮಾನವ ಸಂದೇಶ ನೀಡಿದ ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪನವರ ಸೀಡಿ…….

ಶತ ಶತಮಾನಗಳಿಂದ ಶೋಷಣೆ ದೌರ್ಜನ್ಯಗಳಿಗೆ ಒಳಗಾಗಿ ಎಂಬತ್ತರ ದಶಕದಲ್ಲಿ ಬಂಡಾಯದ ದೃಢ ಕಳಹೆ ಊದಿದ ಸಾಹಿತ್ಯ ಸಂಘಟನೆ ಹೋರಾಟದ ಸೀಡಿ…………..

ಕೋರೋನಾ ಸಂಕಷ್ಟದ ಸಮಯದಲ್ಲಿ ತಮ್ಮ ಬದುಕಿನ ದಿಕ್ಕನ್ನೇ ಬದಲಿಸಿಕೊಂಡು ಎರಡು ಹೊತ್ತಿನ ಊಟಕ್ಕಾಗಿ ಶ್ರಮಪಡಬೇಕಾಗಿ ಬಂದ ಅನೇಕ ವಿದ್ಯಾವಂತ ನಿರುದ್ಯೋಗಿಗಳ ಬೆವರಿನ ಬವಣೆಯ ಸೀಡಿ……….

ಒಂದೇ ಎರಡೇ…..

ಸಾವಿರಾರು ಸಾಧಕರ ಸೀಡಿಗಳು ಈ ಕನ್ನಡದ ನೆಲದಲ್ಲಿ ಸಿಗುತ್ತವೆ…..

ಕೃಷಿ ಸಂಗೀತ ಸಾಹಿತ್ಯ ಸಿನಿಮಾ ಕಲೆ ವಿಜ್ಞಾನ ಕ್ರೀಡೆ ವ್ಯಾಪಾರ ವ್ಯವಹಾರ ಯಾವುದು ಬೇಕು ನಿಮಗೆ,
ಎಲ್ಲಾ ಸೀಡಿಗಳು ಲಭ್ಯ……

ಇಡೀ ಕರ್ನಾಟಕದ ಬದುಕಿನ ಜೀವನಶೈಲಿಯನ್ನು ಮುಂದಿನ ಪೀಳಿಗೆಗೆ ವರ್ಗಾಯಿಸಿ ಅದನ್ನು ಮತ್ತಷ್ಟು ಶ್ರೀಮಂತ ಗೊಳಿಸುವ ಬಹುದೊಡ್ಡ ಜವಾಬ್ದಾರಿ ನಿರ್ವಹಿಸುವ ಸಾಧ್ಯತೆ ಮತ್ತು ಅವಕಾಶ ಇರುವ ಮಾಧ್ಯಮಗಳು ಸುಮಾರು ಒಂದು ತಿಂಗಳಿನಿಂದ ಒಂದು ಅಶ್ಲೀಲ ಸೀಡಿಯನ್ನು, ಅದಕ್ಕೆ ಸಂಬಂಧಿಸಿದವರ ಅಶ್ಲೀಲ ಮಾತುಗಳನ್ನು ಮತ್ತೆ ಮತ್ತೆ ಬೆಳಗಿನಿಂದ ರಾತ್ರಿಯವರೆಗೂ ವಿಧ ವಿಧವಾದ ರೀತಿಯಲ್ಲಿ ಪ್ರದರ್ಶಿಸುತ್ತಾ ಚರ್ಚಿಸುತ್ತಾ ಇದ್ದರೆ ಅದನ್ನು ನೋಡಿ ಬೆಳೆಯುವ ಯುವ ಜನರ ಮನಸ್ಥಿತಿ ಹೇಗೆ ಉತ್ತಮವಾಗಲು ಸಾಧ್ಯ……..

ಈ ಸಮಾಜದ ನಿಜವಾದ ಗುಣಲಕ್ಷಣಗಳಾದ ಮಾನವೀಯ ಮೌಲ್ಯಗಳನ್ನು ಜಾಗೃತಗೊಳಿಸುವ ಒಂದೇ ಒಂದು ಕಾರ್ಯಕ್ರಮ ಮಾಡದೆ ಡ್ರಗ್ಸ್, ಅಶ್ಲೀಲ ಸೀಡಿ, ಕೆಟ್ಟ ರಾಜಕೀಯದ ಬಗ್ಗೆಯೇ ಬಹುತೇಕ ಕಾರ್ಯಕ್ರಮಗಳನ್ನು ಪ್ರಸಾರ ಮಾಡಿ ಎಲ್ಲೋ ಒಂದೆರಡು ಒಳ್ಳೆಯ ಕಾರ್ಯಕ್ರಮ ಪ್ರಸಾರ ಮಾಡಿದರೆ ಪ್ರಯೋಜನವೇನು…..

ದೃಶ್ಯ ಮಾಧ್ಯಮದ ಹಿಡಿತ ಹೊಂದಿದ ಬುದ್ದಿವಂತ ಎಂದು ಭಾವಿಸಿರುವ ಗೆಳೆಯರೇ ದಯವಿಟ್ಟು ನಿಮ್ಮ ಮನೆಯವರು ಸಹ ನೀವು ಪ್ರಸಾರ ಮಾಡುವ‌ ಸೀಡಿ ಕಾರ್ಯಕ್ರಮಗಳನ್ನು ತುಂಬಾ ಆಸಕ್ತಿಯಿಂದ ನೋಡುತ್ತಾರೆ ಎಂಬ ಪ್ರಜ್ಞೆ ನಿಮ್ಮಲ್ಲಿ ಸದಾ ಜಾಗೃತವಾಗಿರಲಿ……

ಇದೇ ನಾಗರಿಕ ಪ್ರಜ್ಞೆ ಎಂದು ಅವರನ್ನು ಎಚ್ಚರಿಸುತ್ತಾ……

ಈ ನೆಲದಲ್ಲಿ ಈ ಕ್ಷಣದಲ್ಲಿ….

ಸೀಡಿಗಳಿಗಿಂತ ಮಹತ್ವದ ಸುದ್ದಿಗಳು ಇವೆ ಎಂಬುದನ್ನು ಗಮನಿಸಿ………

ರೈತ ಹೋರಾಟ, ಕೊರೋನಾ ಆರ್ಭಟ, ಬದುಕಿನ ಜಂಜಾಟ, ಆಹಾರ ಕಲಬೆರಕೆ, ನೀರು ಗಾಳಿಯ ನೈರ್ಮಲ್ಯ, ಪ್ರಕೃತಿಯ ವಿನಾಶ ಮುಂತಾದವು ನಿಮ್ಮ ಸುದ್ದಿಗಳಾಗಲಿ ಎಂದು ಆಶಿಸುತ್ತಾ.

  • ವಿವೇಕಾನಂದ. ಹೆಚ್.ಕೆ.
Team Newsnap
Leave a Comment
Share
Published by
Team Newsnap

Recent Posts

2.5 ಟಿಎಂಸಿ ನೀರನ್ನು ತಮಿಳುನಾಡಿಗೆ ಹರಿಸುವಂತೆ ‘CWMA’ ಸೂಚನೆ

ನವದೆಹಲಿ : ಇಂದು ಸಭೆ ನಡೆಸಿದ ಕಾವೇರಿ ನಿರ್ವಹಣಾ ಪ್ರಾಧಿಕಾರ ( CWMA ) ಮೇ ತಿಂಗಳ ಭಾಗವಾಗಿ ತಮಿಳುನಾಡಿಗೆ… Read More

May 21, 2024

5 ವರ್ಷದ ಬಾಲಕ ಸಂಪ್ ಗೆ ಬಿದ್ದು ಸಾವು

ಬೆಂಗಳೂರು: ಬೆಂಗಳೂರಿನ ಕೆ.ಆರ್.ಪುರಂನ ಅಯ್ಯಪ್ಪ ನಗರದಲ್ಲಿ ನೀರಿನ ಸಂಪ್ ಗೆ ಬಿದ್ದು 5 ವರ್ಷದ ಬಾಲಕ ಸಾವನ್ನಪ್ಪಿರುವ ದಾರುಣ ಘಟನೆ… Read More

May 21, 2024

ಜ್ಞಾನಬುತ್ತಿ ಸಂಸ್ಥೆಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ನಡೆಯುವ ಉಚಿತ ತರಬೇತಿ ಶಿಬಿರದ ಉದ್ಘಾಟನೆ

ಮೈಸೂರು: “ಸಮಾಜ ಸೇವೆ ಮಾಡಲು ನಾನು ಐ.ಎ.ಎಸ್.‌ ಮತ್ತು ಕೆ.ಎ.ಎಸ್‌ ಅಧಿಕಾರಿಯಾಗಬೇಕು ಎನ್ನುತ್ತಾರೆ ಹಲವರು. ಆದರೆ ನನ್ನ ಪ್ರಕಾರ ಸಮಾಜ… Read More

May 21, 2024

ದ್ವಿತೀಯ ಪಿಯುಸಿ ಪರೀಕ್ಷೆ-2 ಫಲಿತಾಂಶ ಪ್ರಕಟ : ಬಾಲಕಿಯರೇ ಮೇಲುಗೈ

ಬೆಂಗಳೂರು: ಇಂದು ಮಧ್ಯಾಹ್ನ 3 ಗಂಟೆಗೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ , ದ್ವಿತೀಯ ಪಿಯುಸಿ… Read More

May 21, 2024

ಮೈಸೂರಿನಲ್ಲಿ ಕಲುಷಿತ ನೀರು ಸೇವಿಸಿ ಯುವಕ ಸಾವು : 40 ಕ್ಕೂ ಹೆಚ್ಚು ಮಂದಿ ಅಸ್ವಸ್ಥ

ಮೈಸೂರು : ಯುವಕನೊಬ್ಬ ಜಿಲ್ಲೆಯ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಕಲುಷಿತ ನೀರು ಸೇವಿಸಿ ಮೃತಪಟ್ಟಿದ್ದಾನೆ . ಮೂವರ ಸ್ಥಿತಿ ಚಿಂತಾಜನಕವಾಗಿದ್ದು, ಒಟ್ಟು‌… Read More

May 21, 2024

ಬೆಂಗಳೂರಿನಲ್ಲಿ ರೇವ್ ಪಾರ್ಟಿ : ನಟಿ ಹೇಮಾ, ನಟ ಶ್ರೀಕಾಂತ್ ಬಂಧನ

ಬೆಂಗಳೂರು : ಬೆಂಗಳೂರಿನ ಹೊರ ವಲಯದ ರೆಸಾರ್ಟ್ ವೊಂದರಲ್ಲಿ ನಡೆದ ರೇವ್ ಪಾರ್ಟಿಗೆ ಸಂಬಂಧಿಸಿದಂತೆ ಐವರನ್ನು ಬಂಧಿಸಲಾಗಿದೆ. ಪಾರ್ಟಿಯಲ್ಲಿ ನಟ,… Read More

May 21, 2024