Main News

ಹೆಚ್ಚು ಮದ್ಯ ಸೇವನೆ ಹೃದಯ ಬಡಿತದ ಸಮಸ್ಯೆಗೆ ಕಾರಣವಂತೆ?

ಈ ಅಧ್ಯಯನದ ವರದಿ‌ ನಮ್ಮ ದೇಶಕ್ಕೆ ಅನ್ವಯ ಆಗುವುದಿಲ್ಲ. ಆದರೂ ಪ್ರತಿನಿತ್ಯ ನಿಯಮಿತ ಪ್ರಮಾಣದಲ್ಲಿ ಮದ್ಯ ಸೇವನೆ ಮಾಡುವ ಜನರೂ ಸಹ ಅನಿಯಮಿತ ಹೃದಯಬಡಿತದ ಸಮಸ್ಯೆಯನ್ನು ಎದುರಿಸುತ್ತಾರೆ ಎಂದು ಹೊಸ ಅಧ್ಯಯನವೊಂದು ಹೇಳಿದೆ.

ಯುರೋಪಿನ್​ ಹಾರ್ಟ್​ ಜರ್ನಲ್​​ನಲ್ಲಿ ಪ್ರಕಟವಾದ ಅಧ್ಯಯನದಲ್ಲಿ, ಮದ್ಯಪಾನವನ್ನೇ ಮಾಡದ ವ್ಯಕ್ತಿಗೆ ಹೋಲಿಸಿದರೆ ಹಾಗೂ ದಿನಕ್ಕೆ ಒಂದು ಬಾರಿ ಮದ್ಯಪಾನ ಸೇವನೆ ಮಾಡುವ ವ್ಯಕ್ತಿಯಲ್ಲಿ ಈ ಸಮಸ್ಯೆ ಶೇ. 16ರಷ್ಟು ಹೆಚ್ಚಿರುತ್ತೆ ಎಂದು ಹೇಳಲಾಗಿದೆ. ನಂತರ

1,07,845 ಜನರನ್ನೊಳಗೊಂಡ ಅಧ್ಯಯನದಲ್ಲಿ ಅವರ ವೈದ್ಯಕೀಯ ಇತಿಹಾಸ, ಜೀವನಶೈಲಿ, ಉದ್ಯೋಗ ಹಾಗೂ ಶಿಕ್ಷಣ ಮಟ್ಟ ಇವೆಲ್ಲವನ್ನೂ ಸಂಗ್ರಹಿಸಲಾಗಿತ್ತು. ಸುಮಾರು 14 ವರ್ಷಗಳ ಅಧ್ಯಯನದಲ್ಲಿ ಮೊದಲು ಹೃತ್ಕರ್ಣ ಕಂಪನದ ಸಮಸ್ಯೆ ಹೊಂದಿರದ ಈ ಎಲ್ಲಾ ಜನರಲ್ಲಿ 5854 ಮಂದಿ ಅನಿಯಮಿತ ಹೃದಯ ಕಂಪನವನ್ನು ಹೊಂದಿರುವುದು ಕಂಡು ಬಂತು.ಇವರೆಲ್ಲ ದಿನಕ್ಕೆ ಒಂದು ಬಾರಿ ಮದ್ಯ ಸೇವನೆ ಮಾಡುವವರಾಗಿದ್ದರು.

ಒನ್ ಪೆಗ್​ ಸೇವನೆ ಮಾಡುವವರ ಕತೆ ಹೀಗಾದರೆ ದಿನಕ್ಕೆ 2 ಪೆಗ್​ ಸೇವನೆ ಮಾಡುವವರಿಗೆ ಈ ಅಪಾಯ 28 ಪ್ರತಿಶತದಷ್ಟು ಅಧಿಕ ಇದೆ.

ಇದೇ ರೀತಿ ದಿನಕ್ಕೆ ಮೂರು, ನಾಲ್ಕು ಪೆಗ್​ ಸೇವನೆ ಮಾಡುವವರಿಗೆ 48 ಪ್ರತಿಶತದವರೆಗೂ ಹೃತ್ಕರ್ಣ ಕಂಪನದ ಸಮಸ್ಯೆ ಅಧಿಕವಾಗುತ್ತಲೇ ಹೋಗುತ್ತದೆ ಎಂದು ಅಧ್ಯಯನ ಹೇಳಿದೆ.

Team Newsnap
Leave a Comment
Share
Published by
Team Newsnap

Recent Posts

ಅಕ್ಟೋಬರ್ 4 ರಿಂದ 7 ವರೆಗೆ ಶ್ರೀರಂಗಪಟ್ಟಣ ದಸರ

ಶ್ರೀರಂಗಪಟ್ಟಣ : ಅಕ್ಟೋಬರ್ 4 ರಿಂದ 7 ವರೆಗೆ ವಿಜೃಂಭಣೆಯಿಂದ ಶ್ರೀರಂಗಪಟ್ಟಣ ಆಚರಿಸಲಾಗುವುದು ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ… Read More

September 19, 2024

ತುಪ್ಪದ ಬದಲು ಪ್ರಾಣಿಗಳ ಕೊಬ್ಬಿನಿಂದ ತಿರುಪತಿ ಲಡ್ಡನ್ನು ತಯಾರಿಸಲಾಗುತ್ತಿತ್ತು: ಚಂದ್ರಬಾಬು ನಾಯ್ಡು

ಆಂಧ್ರಪ್ರದೇಶ: ಹಿಂದಿನ ಸರ್ಕಾರ ತಿರುಪತಿ ಲಡ್ಡುವನ್ನು ತುಪ್ಪದ ಬದಲು ಪ್ರಾಣಿಗಳ ಕೊಬ್ಬಿನಿಂದ ತಯಾರಿಸಲಾಗಿದೆ ಎಂದು ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು… Read More

September 19, 2024

ಶಾಸಕ ಮುನಿರತ್ನ ವಿರುದ್ಧ ಅತ್ಯಾಚಾರ ಕೇಸ್‌ ದಾಖಲು

ಬೆಂಗಳೂರು: ಜೆಪಿ ಶಾಸಕ ಮುನಿರತ್ನವಿರುದ್ಧ ಮತ್ತೊಂದು ಕೇಸ್‌ ದಾಖಲಾಗಿದ್ದು , ಇದೀಗ ಶಾಸಕನ ವಿರುದ್ಧ ಅತ್ಯಾಚಾರ ಕೇಸ್‌ ದಾಖಲಾಗಿದೆ. ಶಾಸಕ… Read More

September 19, 2024

ಮೆಜೆಸ್ಟಿಕ್‌ ಬಸ್‌ ನಿಲ್ದಾಣದಲ್ಲಿ ಬಿಎಂಟಿಸಿ ಬಸ್‌ಗೆ ವಿಶೇಷ ಚೇತನ ಬಲಿ

ಬೆಂಗಳೂರು: ಮೆಜೆಸ್ಟಿಕ್‌ ಬಸ್‌ ನಿಲ್ದಾಣದಲ್ಲಿ ಬಿಎಂಟಿಸಿ ಬಸ್‌ ಅಪಘಾತಕ್ಕೆ ವಿಶೇಷ ಚೇತನ ಬಲಿಯಾಗಿರುವ ಘಟನೆ ನಡೆದಿದೆ. ಬಿಎಂಟಿಸಿ ಬಸ್ ಯಶವಂತಪುರದಿಂದ… Read More

September 18, 2024

ಭಾರತದಲ್ಲಿ ಚಿನ್ನದ ದರದ ಬಗ್ಗೆ ತಿಳಿಯಿರಿ | Gold Price In India

ನವದೆಹಲಿ ,ಸೆಪ್ಟೆಂಬರ್ 18 : ಭಾರತದಲ್ಲಿ 22 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ 68,640 ರೂಪಾಯಿ ದಾಖಲಾಗಿದೆ. 24… Read More

September 18, 2024

ಸೆ.19ರಿಂದ ವಿಎಓ/ಜಿಟಿಟಿಸಿ ಪರೀಕ್ಷೆಗೆ ಹೊಸದಾಗಿ ಅರ್ಜಿ ಸಲ್ಲಿಸಲು ಅವಕಾಶ

ಬೆಂಗಳೂರು: ಸೆ.19ರಿಂದ ಮ ಆಡಳಿತಾಧಿಕಾರಿ ಮತ್ತು ಜಿಟಿಟಿಸಿಯ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಮತ್ತೊಮ್ಮೆ ಅವಕಾಶ ನೀಡಲಾಗಿದೆ ಎಂದು ಕೆಇಎ ಕಾರ್ಯನಿರ್ವಾಹಕ… Read More

September 17, 2024