ಈ ಅಧ್ಯಯನದ ವರದಿ ನಮ್ಮ ದೇಶಕ್ಕೆ ಅನ್ವಯ ಆಗುವುದಿಲ್ಲ. ಆದರೂ ಪ್ರತಿನಿತ್ಯ ನಿಯಮಿತ ಪ್ರಮಾಣದಲ್ಲಿ ಮದ್ಯ ಸೇವನೆ ಮಾಡುವ ಜನರೂ ಸಹ ಅನಿಯಮಿತ ಹೃದಯಬಡಿತದ ಸಮಸ್ಯೆಯನ್ನು ಎದುರಿಸುತ್ತಾರೆ ಎಂದು ಹೊಸ ಅಧ್ಯಯನವೊಂದು ಹೇಳಿದೆ.
ಯುರೋಪಿನ್ ಹಾರ್ಟ್ ಜರ್ನಲ್ನಲ್ಲಿ ಪ್ರಕಟವಾದ ಅಧ್ಯಯನದಲ್ಲಿ, ಮದ್ಯಪಾನವನ್ನೇ ಮಾಡದ ವ್ಯಕ್ತಿಗೆ ಹೋಲಿಸಿದರೆ ಹಾಗೂ ದಿನಕ್ಕೆ ಒಂದು ಬಾರಿ ಮದ್ಯಪಾನ ಸೇವನೆ ಮಾಡುವ ವ್ಯಕ್ತಿಯಲ್ಲಿ ಈ ಸಮಸ್ಯೆ ಶೇ. 16ರಷ್ಟು ಹೆಚ್ಚಿರುತ್ತೆ ಎಂದು ಹೇಳಲಾಗಿದೆ. ನಂತರ
1,07,845 ಜನರನ್ನೊಳಗೊಂಡ ಅಧ್ಯಯನದಲ್ಲಿ ಅವರ ವೈದ್ಯಕೀಯ ಇತಿಹಾಸ, ಜೀವನಶೈಲಿ, ಉದ್ಯೋಗ ಹಾಗೂ ಶಿಕ್ಷಣ ಮಟ್ಟ ಇವೆಲ್ಲವನ್ನೂ ಸಂಗ್ರಹಿಸಲಾಗಿತ್ತು. ಸುಮಾರು 14 ವರ್ಷಗಳ ಅಧ್ಯಯನದಲ್ಲಿ ಮೊದಲು ಹೃತ್ಕರ್ಣ ಕಂಪನದ ಸಮಸ್ಯೆ ಹೊಂದಿರದ ಈ ಎಲ್ಲಾ ಜನರಲ್ಲಿ 5854 ಮಂದಿ ಅನಿಯಮಿತ ಹೃದಯ ಕಂಪನವನ್ನು ಹೊಂದಿರುವುದು ಕಂಡು ಬಂತು.ಇವರೆಲ್ಲ ದಿನಕ್ಕೆ ಒಂದು ಬಾರಿ ಮದ್ಯ ಸೇವನೆ ಮಾಡುವವರಾಗಿದ್ದರು.
ಒನ್ ಪೆಗ್ ಸೇವನೆ ಮಾಡುವವರ ಕತೆ ಹೀಗಾದರೆ ದಿನಕ್ಕೆ 2 ಪೆಗ್ ಸೇವನೆ ಮಾಡುವವರಿಗೆ ಈ ಅಪಾಯ 28 ಪ್ರತಿಶತದಷ್ಟು ಅಧಿಕ ಇದೆ.
ಇದೇ ರೀತಿ ದಿನಕ್ಕೆ ಮೂರು, ನಾಲ್ಕು ಪೆಗ್ ಸೇವನೆ ಮಾಡುವವರಿಗೆ 48 ಪ್ರತಿಶತದವರೆಗೂ ಹೃತ್ಕರ್ಣ ಕಂಪನದ ಸಮಸ್ಯೆ ಅಧಿಕವಾಗುತ್ತಲೇ ಹೋಗುತ್ತದೆ ಎಂದು ಅಧ್ಯಯನ ಹೇಳಿದೆ.
- ಮಕ್ಕಳನ್ನು ಕೊಂದು ಆತ್ಮಹತ್ಯೆಗೆ ಶರಣಾದ ದಂಪತಿ
- 2024-25ನೇ ಅತಿಥಿ ಉಪನ್ಯಾಸಕರ ನೇಮಕಾತಿಗೆ ಅರ್ಜಿ ಆಹ್ವಾನ
- 10ನೇ ತರಗತಿ ಪಾಸಾದವರಿಗೆ ರೈಲ್ವೆ ಇಲಾಖೆಯಲ್ಲಿ ಉದ್ಯೋಗ ಅವಕಾಶ
- HMPV ವೈರಸ್ ಕರ್ನಾಟಕಕ್ಕೆ ಪ್ರವೇಶ: ಬೆಂಗಳೂರಿನಲ್ಲಿ 8 ತಿಂಗಳ ಮಗುವಿಗೆ ಸೋಂಕು ದೃಢ
- ಮಳೆ ನಿಂತರೂ ಮರದ ಹನಿ ನಿಲ್ಲದು
More Stories
ಕಾನ್ಸ್ಟೇಬಲ್ ನೇಮಕಾತಿ ದೈಹಿಕ ಪರೀಕ್ಷೆ: ಓಟದ ವೇಳೆ ಬಿದ್ದ ಯುವಕನ ದುರ್ಮರಣ
ಸಂಕ್ರಾಂತಿ ಬಳಿಕ ಬಸ್ ಟಿಕೆಟ್ ದರ ಏರಿಕೆ ಸಾಧ್ಯತೆ
ಹೊಸ ವರ್ಷದ ಸಂಭ್ರಮ: KSBCLನಿಂದ ಒಂದೇ ದಿನ 308 ಕೋಟಿ ರೂ. ಮದ್ಯ ಮಾರಾಟ