ಕ್ಯಾನ್ಸರ್ ಪೀಡಿತ ಮಕ್ಕಳಿಗೆ ಕೂದಲು ದಾನ ಮಾಡಬಹುದು

Team Newsnap
2 Min Read

ದಾನದಲ್ಲಿ ಶ್ರೇಷ್ಠ ದಾನ ಅನ್ನ , ರಕ್ತ ದಾನ ಎಂಬ ಹಲವಾರು ದಾನಗಳಿವೆ. ಅವುಗಳ ಲಿಸ್ಟ್ ಗೆ ಕೂದಲು ದಾನ ಸೇರಿದೆ.
ಹೇಗೆ ಅಂತಿರಾ? ನಟ ದ್ರುವ ಸರ್ಜಾ ಸ್ಟೋರಿ ಕೇಳಿ….
ಸ್ಯಾಂಡಲ್ ವುಡ್ ನಟ ಧ್ರುವ ಕಳೆದ ವರ್ಷಗಳಿಂದ ಕೂದಲು ಬಿಟ್ಟಿದ್ದರು. ಪೊಗರು ಸಿನಿಮಾಗಾಗಿ ಉದ್ದ ಕೂದಲು ಬೆಳೆಸಿದ್ದ ಧ್ರುವ ಇದೀಗ ತನ್ನ ಕೂದಲಿಗೆ ಕತ್ತರಿ ಹಾಕಿದ್ದಾರೆ. ಪೊಗರು ಸಿನಿಮಾದ ಚಿತ್ರೀಕರಣ ಸಂಪೂರ್ಣವಾಗಿ ಮುಗಿದ ಹಿನ್ನಲೆ ಹೇರ್ ಕಟ್ ಮಾಡಿದ್ದಾರೆ. ಎರಡು ವರ್ಷಗಳಿಂದ ಬೆಳೆಸಿದ್ದ ಕೂದಲಿಗೆ ಕತ್ತರಿ ಹಾಕಿ, ಕ್ಯಾನ್ಸರ್ ಪೀಡಿತ ಮಕ್ಕಳಿಗೆ ದಾನ ಮಾಡುವುದಾಗಿ ಹೇಳಿದ್ದಾರೆ.

ಕೂದಲು ಕಟ್ ಮಾಡುವುದನ್ನು ವಿಡಿಯೋ ಮಾಡಿದ್ದಾರೆ:

ಕೂದಲಿಗೆ ಕತ್ತರಿ ಹಾಕುವ ವಿಡಿಯೋವನ್ನು ಧ್ರುವ ಸರ್ಜಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಹೇರ್ ಕಟ್ ಮಾಡಿಸುವ ಮೊದಲು ವಿಡಿಯೋದಲ್ಲಿ ಮಾತನಾಡಿರುವ ಧ್ರುವ, ‘ಪೊಗರು ಶೂಟಿಂಗ್ ಮುಗೀತು, ಸ್ನೇಹಿತರೆಲ್ಲ ಕುಳಿತು ಕೂದಲು ದಾನ ಮಾಡುವಂತೆ ಹೇಳಿದರು. ಹಾಗಾಗಿ ಈ ನಿರ್ಧಾರ ಮಾಡಿರುವುದಾಗಿ ಧ್ರುವ ಸರ್ಜಾ ಹೇಳಿದ್ದಾರೆ.

ಕ್ಯಾನ್ಸರ್ ಪೀಡಿತ ಮಕ್ಕಳ ಉಪಯೋಗಕ್ಕೆ!

’10 ಇಂಚು ಉದ್ದ ಇರುವ ಕೂದಲನ್ನು ದಾನ ಮಾಡಬಹುದು. ಸಾಕಷ್ಟು ಜನ ದಾನ ಮಾಡಿದ್ದಾರೆ. ಕ್ಯಾನ್ಸರ್ ಬಂದು ಕೂದಲು ಉದುರುವ 15 ವರ್ಷದ ಒಳಗಿನ ಮಕ್ಕಳಿಗೆ ಕೂದಲು ಉಪಯೋಗವಾಗುತ್ತೆ. ಅವರಿಗೆ ಸಹಾಯವಾಗಲಿ ಎಂದು ಹೀಗೆ ಮಾಡುತ್ತಿದ್ದೇನೆ. ಕೂದಲು ಕತ್ತರಿಸುವ ಎಲ್ಲರೂ ಹೀಗೆ ಮಾಡಿದರೆ ಸಾಕಷ್ಟು ಜನರಿಗೆ ಒಳ್ಳೆಯದಾಗುತ್ತೆ.’ ಎಂದು ಧ್ರುವ ಸರ್ಜಾ ಹೇಳಿದ್ದಾರೆ.

ರಶ್ಮಿಕಾ ನಾಯಕಿ – ಪೋಗರು ರೆಡಿ:

ಪೊಗರು ಸಿನಿಮಾದ ಚಿತ್ರೀಕರಣ ಮುಕ್ತಾಯವಾಗಿ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿದೆ. ನಂದಕಿಶೋರ್ ನಿರ್ದೇಶನದಲ್ಲಿ ಸಿನಿಮಾ ಮೂಡಿಬರುತ್ತಿದೆ. ಧ್ರುವ ಸರ್ಜಾಗೆ ನಾಯಕಿಯಾಗಿ ರಶ್ಮಿಕಾ ಮಂದಣ್ಣ ಕಾಣಿಸಿಕೊಂಡಿದ್ದಾರೆ.

ಭಾರಿ ನಿರೀಕ್ಷೆ ಮೂಡಿಸಿರುವ ಪೊಗರು ಸಿನಿಮಾ ಕ್ರಿಸ್ಮಸ್ ಅಥವಾ ಮುಂದಿನ ವರ್ಷ ಸಂಕ್ರಾಂತಿಗೆ ತೆರೆಗೆ ಬರುವ ಸಾಧ್ಯತೆ ಇದೆ. ಈಗಾಗಲೇ ಚಿತ್ರದ ಡೈಲಾಗ್ ಟ್ರೈಲರ್ ಮತ್ತು ಒಂದು ಹಾಡನ್ನು ರಿಲೀಸ್ ಮಾಡಲಾಗಿದ್ದು, ಸಕ್ಕಾಪಟ್ಟೆ ವೈರಲ್ ಆಗಿದೆ. ಇನ್ನು ಸಿನಿಮಾ ಹೇಗಿರಲಿದೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಇದೆ

Share This Article
Leave a comment