December 26, 2024

Newsnap Kannada

The World at your finger tips!

nirajna swamy

ಮನೆಗೊಬ್ಬ ಕುರುಬಣ್ಣ ಸಮಾವೇಶಕ್ಕೆ ಬಾರಣ್ಣ – ಕಾಗಿನೆಲೆ ಶ್ರೀ ಗಳ ಕರೆ:ಬೆಂಗಳೂರಿನಲ್ಲಿಂದು ಕುರುಬರ ಸಮಾವೇಶ

Spread the love

ಬೆಂಗಳೂರಿನಲ್ಲಿ ಭಾನುವಾರ ‘ಎಸ್‌ಟಿ ನಮ್ಮ ಹಕ್ಕು’ ಕುರುಬರ ಬೃಹತ್ ಸಮಾವೇಶ ನಡೆಯಲಿದೆ.

ಮಾದಾವರದ ಬಿಐಇಸಿ ಆವರಣದಲ್ಲಿ ಈ ಬೃಹತ್ ಕಾರ್ಯಕ್ರಮ ಆಯೋಜನೆಗೊಂಡಿದೆ. ಈ ಸಮಾವೇಶಕ್ಕಾಗಿ 15 ಲಕ್ಷ ರೊಟ್ಟಿ ಸೇರಿದಂತೆ ವಿವಿಧ ಖಾದ್ಯ ಗಳನ್ನು ತಯಾರಿಸಲಾಗಿದೆ.

ಮನೆಗೊಬ್ಬ ಕುರುಬಣ್ಣ ಸಮಾವೇಶಕ್ಕೆ ಬಾರಣ್ಣ ಎಂದು ಕಾಗಿನೆಲೆ ಪೀಠದ ನಿರಂಜನಾನಂದಪುರಿ ಶ್ರೀಗಳು ಸಮಾವೇಶಕ್ಕೆ ಬರುವಂತೆ ಕುರುಬರಿಗೆ ಕರೆ ನೀಡಿದ್ದಾರೆ. ಇಂದಿನ ಸಮಾವೇಶದಲ್ಲಿ 10 ಲಕ್ಷ ಕುರುಬ ಸಮುದಾಯದವರು ಭಾಗಿಯಾಗುವ ಸಾಧ್ಯತೆಯಿದೆ. ನಿರಂಜನಾನಂದಪುರಿ ಸ್ವಾಮೀಜಿ, ಈಶ್ವರಾನಂದ ಶ್ರೀಗಳು, ಕುರುಬ ಸಮುದಾಯದ ಸಚಿವರು, ಶಾಸಕರು, ರಾಜಕೀಯ ನಾಯಕರು ಭಾಗಿಯಾಗಲಿದ್ದಾರೆ. ಇಂದು ಬೆಳಗ್ಗೆ 11ಕ್ಕೆ ವೇದಿಕೆ ಕಾರ್ಯಕ್ರಮ ಶುರುವಾಗಲಿದೆ.

ಕುರುಬ ಸಮುದಾಯವನ್ನ ಪರಿಶಿಷ್ಟ ಪಂಗಡಕ್ಕೆ ಒಳಪಡಿಸುವಂತೆ ಕುರುಬರು ಶಕ್ತಿ ಪ್ರದರ್ಶನ ಮಾಡಲಿದ್ದಾರೆ. ಈ ಹಿನ್ನೆಲೆಯಲ್ಲಿ ಭಾನುವಾರ ಬೆಂಗಳೂರಿನಲ್ಲಿ ಟ್ರಾಫಿಕ್ ಸಮಸ್ಯೆ ತಲೆದೋರಲಿದೆ.ಈ ಸಮಾವೇಶ ಸಂಚಾರ ದಟ್ಟಣೆಯನ್ನು ನಿಯಂತ್ರಿಸಲು 2000 ಪೋಲಿಸರನ್ನು ನಿಯೋಜಿಸಲಾಗಿದೆ.

Copyright © All rights reserved Newsnap | Newsever by AF themes.
error: Content is protected !!