January 15, 2025

Newsnap Kannada

The World at your finger tips!

kabini

ಕಬಿನಿಯಲ್ಲೂ 48 ಕೋಟಿ ರು ವೆಚ್ಚದಲ್ಲಿ ಬೃಂದಾವನದ ಮಾದರಿ‌ ಅಭಿವೃದ್ಧಿ – ಸಚಿವ ಸೋಮಶೇಖರ್

Spread the love

ಕೆಆರ್‌ಎಸ್ ನಲ್ಲಿರುವ ಬೃಂದಾವನ ಉದ್ಯಾನದ ಮಾದರಿಯಂತೆ ಕಬಿನಿಯಲ್ಲೂ 48 ಕೋಟಿ ರು ವೆಚ್ಚದಲ್ಲಿ ಉದ್ಯಾನವನ ನಿರ್ಮಿಸಲು ಬಜೆಟ್‌ನಲ್ಲಿ ಘೋಷಣೆ ಮಾಡಲಾಗುವುದು ಎಂದು ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅವರು ತಿಳಿಸಿದರು.

ಮಂಗಳವಾರ ಎಚ್.ಡಿ.ಕೋಟೆ ತಾಲ್ಲೂಕಿನ ಮೈಸೂರು ಗಡಿಭಾಗದಲ್ಲಿರುವ ಕಂಚಮಳ್ಳಿಯ ಹತ್ತಿರ ಸ್ವಾಗತ ಕಮಾನನ್ನು ಉದ್ಘಾಟಿಸಿ ಮಾತನಾಡಿದ ಅವರು, ಅನೇಕ ಜನರು ಎಚ್.ಡಿ.ಕೋಟೆ ಹೆಸರು ಕೇಳಿರುತ್ತಾರೆ. ಆದರೆ ಇಲ್ಲಿನ ಪ್ರವಾಸೋದ್ಯಮ ವೈಶಿಷ್ಟ್ಯತೆಗಳು ತಿಳಿದಿರುವುದಿಲ್ಲ. ಈ ನಿಟ್ಟಿನಲ್ಲಿ ತಾಲ್ಲೂಕಿನಲ್ಲಿರುವ ಪ್ರಕೃತಿ ಸಂಪತ್ತನ್ನು ಪರಿಚಯಸಲು ಸ್ವಾಗತ ಕಮಾನು ನೆರವಾಗಲಿದೆ ಎಂದರು.

ಎಚ್.ಡಿ.ಕೋಟೆ ತಾಲ್ಲೂಕಿನಲ್ಲಿ ಅನೇಕ ಅಭಿವೃದ್ಧಿ ಕಾಮಗಾರಿಗಳು ನಡೆಯಲಿವೆ. ಒಂದು ಸೇತುವೆ ಹಾಗೂ ರಸ್ತೆ ನಿರ್ಮಾಣಕ್ಕೆ ಈಗಾಗಲೇ ಅನುಮೋದನೆ ದೊರಕಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಮತ್ತಷ್ಟು ಅಭಿವೃದ್ಧಿ ಕೈಗೊಳ್ಳಲಾಗುವುದು ಎಂದರು.

ಜಿಲ್ಲೆಯ ಸಮಗ್ರ ಪ್ರವಾಸೋದ್ಯಮ ಅಭಿವೃದ್ಧಿಗೂ ಸಹ ನಾನು ಬದ್ಧನಿದ್ದೇನೆ ಎಂದು ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಶಾಸಕರಾದ ಅನಿಲ್ ಚಿಕ್ಕಮಾದು ಸೇರಿದಂತೆ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.

Copyright © All rights reserved Newsnap | Newsever by AF themes.
error: Content is protected !!