December 29, 2024

Newsnap Kannada

The World at your finger tips!

bullet prakash son

ಬುಲೆಟ್ ಪ್ರಕಾಶ್ ಪುತ್ರ ರಕ್ಷಕ್ ಮೇಲೆ ಮಂಗಳ ಮುಖಿಯರ ದಾಳಿ

Spread the love

ಸ್ಯಾಂಡಲ್ ವುಡ್ ನ ದಿವಂಗತ ಹಾಸ್ಯ ನಟ ಬುಲೆಟ್ ಪ್ರಕಾಶ್ ಮಗನ ಮೇಲೆ ಮಂಗಳಮುಖಿಯರು ದಾಳಿ ಮಾಡಿದ್ದಾರೆ.

ಈ ಘಟನೆ ಹೆಬ್ಬಾಳದ ಫ್ಲೈ ಓವರ್ ಬಳಿ ಜರುಗಿದೆ. ಬುಲೆಟ್ ಪ್ರಕಾಶ್ ಪುತ್ರ ರಕ್ಷಕ್ ನಿನ್ನೆ ರಾತ್ರಿ ರಾತ್ರಿ 9 ಗಂಟೆ ವೇಳೆ ಜಿಮ್ ಮುಗಿಸಿ ​​ ಗಾಡಿಯಲ್ಲಿ ಮನೆಗೆ ವಾಪಸ್ ಹೋಗುತ್ತಿದ್ದ ವೇಳೆ ಹೆಬ್ಬಾಳ ಫ್ಲೈಓವರ್ ಬಳಿ ಮಂಗಳ ಮುಖಿಯರು ತಡೆದ ದಾಳಿ ಮಾಡಿದ್ದಾರೆ ಎನ್ನಲಾಗಿದೆ.

ಹೆಬ್ಬಾಳ ಫ್ಲೈ ಓವರ್ ಬಳಿ ಮಂಗಳಮುಖಿಯರು ರಕ್ಷಕ್ ಬ್ಯಾಗ್ ಹಿಡಿದು ಎಳೆದ ಕಾರಣ ಗಾಡಿಯಿಂದ ಕೆಳಗೆ ಬಿದ್ದು ಸಣ್ಣಪುಟ್ಟ ಗಾಯಗಳಾಗಿವೆ.

ಈ ಘಟನೆಯಲ್ಲಿ ಬೈಕ್​​ಗೂ ಡ್ಯಾಮೇಜ್ ಆಗಿದೆ. ಈ ವೇಳೆ ಬೈಕ್ ಸ್ಥಳದಲ್ಲೇ ಬಿಟ್ಟು ಹೋಗಿದ್ದ ರಕ್ಷಕ್ ಕೊನೆಗೆ ಹೆಬ್ಬಾಳ ಪೊಲೀಸರ ನೆರವಿನಲ್ಲಿ ಬೈಕ್ ಪಡೆದು ಮನೆಗೆ ತೆರಳಿದ್ದಾರೆ.

ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Copyright © All rights reserved Newsnap | Newsever by AF themes.
error: Content is protected !!