February 22, 2026

Newsnap Kannada

The World at your finger tips!

thadegode1

ರೈತರ ತಡೆಗೆ ಗೋಡೆಯನ್ನಲ್ಲ, ಸೇತುವೆ ನಿರ್ಮಿಸಿ: ರಾಹುಲ್ ಗಾಂಧಿ

Spread the love

ಕೇಂದ್ರ ಸರ್ಕಾರ ಜಾರಿಗೆ ತರಲು ಹೊರಟಿರುವ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ಪ್ರತಿಭಟನೆಗೆಂದು ಭಾರೀ ಪ್ರಮಾಣದಲ್ಲಿ ಬರುತ್ತಿರುವ ರೈತರು ದೆಹಲಿ ಪ್ರವೇಶಿಸಿದಂತೆ ರಸ್ತೆಗಳಿಗೆ ಗೋಡೆಗಳನ್ನು ನಿರ್ಮಿಸುತ್ತಿರುವ ಕ್ರಮ ಖಂಡಿಸಿ ಟ್ವೀಟ್ ಮಾಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು, ‘ಗೋಡೆಯಲ್ಲ, ಸೇತುವೆಗಳನ್ನು ನಿರ್ಮಿಸಿ’ ಎಂದು ಹೇಳಿದ್ದಾರೆ.

thadegode

ಟಿಕ್ರಿ, ಘಾಜಿಪುರ ಹಾಗೂ ಸಿಂಘೂ ಗಡಿಗಳಿಗೆ ಕ್ರೇನ್ ಮೂಲಕ ರಸ್ತೆಗಳನ್ನು ಅಗೆದು ಗ್ರಿಲ್ ಹಾಗೂ ಮೊಳೆಗಳನ್ನು ಸಿಮೆಂಟ್ ಮೂಲಕ ರಸ್ತೆಗೆ ಜೋಡಿಸಲಾಗಿದೆ. ಇನ್ನು ಬ್ಯಾರಿಕೇಡ್ ಗಳನ್ನು ಅಳವಡಿಸಲಾಗಿದೆ. ಇದು ಭದ್ರವಾಗಿ ನಿಲ್ಲುವ ಸಲುವಾಗಿ ಕಾಂಕ್ರೀಟ್ ಸುರಿದು ಗಟ್ಟಿ ಮಾಡಿ, ತಡೆಗಳನ್ನು ನಿರ್ಮಿಸಲಾಗಿದೆ.

ಪೊಲೀಸರ ಭದ್ರತೆಗಳ ಕುರಿತ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಸಾರ್ವಜನಿಕರಿಂದ ಬಹಳಷ್ಟು ಟೀಕೆಗಳು ವ್ಯಕ್ತವಾಗುತ್ತಿವೆ.

error: Content is protected !!