December 19, 2024

Newsnap Kannada

The World at your finger tips!

yedi 2

ಸಚಿವ ಸಂಪುಟ ವಿಸ್ತರಣೆ ಸುಳಿವು ನೀಡಿದ ಬಿಎಸ್ ವೈ – ಸಿಎಂ ಪರಮಾಧಿಕಾರದ ನಿಧಾ೯ರ

Spread the love

ರಾಜ್ಯದಲ್ಲಿ ಸಚಿವ ಸಂಪುಟ ವಿಸ್ತರಣೆಯಾಗುವ ನೀರಿಕ್ಷೆ ಇದೆ ಎಂಬ ಸುಳಿವನ್ನು ಎಂದು ಮಾಜಿ ಸಿಎಂ ಯಡಿಯೂರಪ್ಪ ಪರೋಕ್ಷ ನೀಡಿದರು.

ದಾವಣಗೆರೆಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಯಡಿಯೂರಪ್ಪ ರಮೇಶ್ ಜಾರಕಿಹೊಳಿಯನ್ನು ಸಂಪುಟ ಸೇರಲು ನಡೆಸುತ್ತಿರುವ ಕಸರತ್ತು ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿ,
ಸಚಿವ ಸಂಪುಟ ವಿಸ್ತರಿಸುವ ಅಧಿಕಾರ ಸಿಎಂ ಬೊಮ್ಮಾಯಿಗೆ ಇದೆ. ಯಾರನ್ನು ಸಚಿವರನ್ನಾಗಿ ಮಾಡಬೇಕು, ಬಿಡಬೇಕು ಅನ್ನೋದು ಸಿಎಂಗೆ ಬಿಟ್ಟಿದ್ದು. ಸಂಪುಟ ವಿಸ್ತರಣೆ ಆಗುವ ನಿರೀಕ್ಷೆ ಇದೆ ಎಂದಷ್ಟೇ ಹೇಬಲ್ಲೆ ಎಂದರು.

ಯಡಿಯೂರಪ್ಪ ಅವರ ಈ ಹೇಳಿಕೆ ಬೆನ್ನಲ್ಲೆ, ಸಚಿವಾಕಾಂಕ್ಷಿಗಳ ನಿರೀಕ್ಷೆ ದುಪ್ಪಟ್ಟು ಆಗಲಿದೆ

ಪ್ರಧಾನಿ ಮೋದಿಯನ್ನು ಮಾಜಿ ಪ್ರಧಾನಿ ದೇವೇಗೌಡರು ಭೇಟಿ ಮಾಡಿದ ವಿಚಾರಕ್ಕೆ ಪ್ರತಿಕ್ರಿಯಿಸಿದ ಬೆಸ್ ವೈಅವರುಮೋದಿ-ದೇವೇಗೌಡ ಭೇಟಿ ಚುನಾವಣೆ ವಿಚಾರಕ್ಕೆ ಸಂಬಂಧಿಸಿದ್ದಲ್ಲ. ನಾನು ಬಹಿರಂಗವಾಗಿಯೇ ಜೆಡಿಎಸ್ ಬೆಂಬಲ ಕೇಳಿದ್ದೇನೆ. ಕುಮಾರಸ್ವಾಮಿ ಬೆಂಬಲವನ್ನು ಕೇಳಿದ್ದೇನೆ. ನೂರರಕ್ಕೆ ನೂರರಷ್ಟು ಅವರ ಅಭ್ಯರ್ಥಿಗಳು ಎಲ್ಲಿಲ್ಲ, ಅಲ್ಲಿ ನಮಗೆ ಬೆಂಬಲ ನೀಡುವ ವಿಶ್ವಾಸವಿದೆ ಎಂದರು.

Copyright © All rights reserved Newsnap | Newsever by AF themes.
error: Content is protected !!