December 22, 2024

Newsnap Kannada

The World at your finger tips!

BSY,POCSO, crime

ಮಾಜಿ ಸಿಎಂ BSY ಬಿಗ್ ರಿಲೀಫ್‌ : ಲಂಚ ಪ್ರಕರಣದ ತನಿಖೆಗೆ ‘ಮಧ್ಯಂತರ ತಡೆ’ ನೀಡಿದ ಸುಪ್ರಿಂ

Spread the love

ಭ್ರಷ್ಟಾಚಾರ ತಡೆ ಕಾಯ್ದೆಯಡಿ ಯಡಿಯೂರಪ್ಪ ಹಾಗೂ ಇತರರ ವಿರುದ್ಧ ಲಂಚದ ದೂರನ್ನು ಮರು ದಾಖಲಿಸುವಂತೆ ಕರ್ನಾಟಕ ಹೈಕೋರ್ಟ್ ನೀಡಿದ್ದ ಆದೇಶಕ್ಕೆ ಸುಪ್ರೀಂ ತಡೆ ನೀಡಿದೆ.

ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಕರ್ನಾಟಕದ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಸಲ್ಲಿಸಿದ್ದ ಅರ್ಜಿಯ ಬಗ್ಗೆ ಮುಂದಿನ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ತಡೆಹಿಡಿಯುತ್ತದೆ ಅಂತ ತಿಳಿಸಿದೆ.ಆರ್ಟಿಕಲ್ 370 ರದ್ದು : ದಸರಾ ರಜೆ ಬಳಿಕ ವಿಚಾರಣೆ – ಸುಪ್ರೀಂ ಸಿಜೆಐ

ಪ್ರಕರಣ ಸಂಬಂಧ ಬಿಎಸ್‌ವೈ ಅವರಿಗೆ ಮಾತ್ರ ರಿಲೀಫ್‌ ಸಿಕ್ಕಿದೆ . ಪುತ್ರ ವಿಜೇಂದ್ರ ಸೇರಿ ಇತರರ ವಿರುದ್ದ ತನಿಖೆ ನಡೆಸಲಾಗುವುದು ಎನ್ನಲಾಗಿದೆ.

ಇದೇ ವೇಳೇ ಬಿಎಸ್‌ವೈ ವಿರುದ್ದ ತನಿಖೆ ಮಾಡಬೇಕಾದರೆ ರಾಜ್ಯಪಾಲರ ಅನುಮತಿ ಅಗತ್ಯವಿತ್ತು ಅಂತ ಮಾಜಿ ಸಿಎಂ ಪರ ವಕೀಲರು ನ್ಯಾಯಪೀಠ ಮುಂದೆ ವಾದ ಮಾಡಿದರು.

ಪ್ರಕರಣದ ಹಿನ್ನಲೆ: ಮಾಜಿ ಸಿಎಂ ಯಡಿಯೂರಪ್ಪನವರು ತಮ್ಮ ವಿರುದ್ದ ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ದಾಖಲಾಗಿರುವ ಪ್ರಕರಣ ಸಂಬಂಧ ಸುಪ್ರಿಂಕೋರ್ಟ್‌ನಲ್ಲಿ ಮೇಲ್ಮನವಿ ಅರ್ಜಿ ಸಲ್ಲಿಸಿದ್ದರು.

ಅರ್ಜಿ ವಿಚಾರಣೆಯನ್ನು ಇಂದು ನ್ಯಾಯಮೂರ್ತಿಗಳಾದ ಡಿವೈ ಚಂದ್ರಚೂಡ್ ಮತ್ತು ಹಿಮಾ ಕೊಹ್ಲಿ ಅವರನ್ನೊಳಗೊಂಡ ಪೀಠ ವಿಚಾರಣೆ ನಡೆಸಿತು.

ಸಾಮಾಜಿಕ ಕಾರ್ಯಕರ್ತ ಟಿಜೆ ಅಬ್ರಹಾಂ ಬಿಎಸ್​​ವೈ ಹಾಗೂ ಅವರ ಕುಟುಂಬದವರ ಮೇಲೆ 12 ಕೋಟಿ ಲಂಚ ತೆಗೆದುಕೊಂಡಿದ್ದರು ಅಂತ ಆರೋಪಿಸಿ ಜನಪ್ರತಿನಿಧಿಗಳ ಕೋರ್ಟ್ ಗೆ ದೂರು ನೀಡಿದ್ದರು, ಇದೇ ವೇಳೆ ​ ಜನಪ್ರತಿನಿಧಿಗಳ ಕೋರ್ಟ್ ನವೆಂಬರ್ 2, 2022 ರೊಳಗೆ ವರದಿ ಸಲ್ಲಿಸುವಂತೆ ಲೋಕಾಯುಕ್ತ ಪೊಲೀಸರಿಗೆ ಸೂಚಿಸಿದೆ.

ಇದರಲ್ಲಿ ನ್ಯಾಯಾಲಯದ ಆದೇಶದಂತೆ ಲೋಕಾಯುಕ್ತ ಪೊಲೀಸರು ಆರೋಪಿಗಳ ವಿರುದ್ಧ ಎಫ್‌ಐಆರ್ ಮಾಡಿದ್ದರು. ಇದರ ವಿರುದ್ದ ಮಾಜಿ ಸಿಎಂ ಹೈಕೋರ್ಟ್​ ಹಾಗೂ ವಿಶೇಷ ನ್ಯಾಯಾಲಯದ ಆದೇಶ ಪ್ರಶ್ನಿಸಿ ಸುಪ್ರೀಂಕೋರ್ಟ್​ ಮೆಟ್ಟಿಲೇರಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!