ವಿಶ್ವದಾದ್ಯಂತ ಕೊರೋನಾ ವೈರಾಣು ತನ್ನ ಹಸ್ತಗಳನ್ನು ಚಾಚಿರುವಾಗಲೇ, ಮತ್ತೊಂದು ವೈರಾಣು ಸದ್ದಿಲ್ಲದೇ ತನ್ನ ಬಾಹುಗಳನ್ನು ವಿಸ್ತರಿಸಲು ಪ್ರಯತ್ನಿಸುತ್ತಿದೆ.
ಕೋರೋನಾ ವೈರಾಣು ಹುಟ್ಟಿದ್ದ ಬೀಜಿಂಗ್ ನಲ್ಲೇ .
ಇದೀಗ ಬ್ರುಸೆಲೋಸಿಸ್ ಎಂಬ ವೈರಾಣು ಸಾವಿರಾರು ಜನರಿಗೆ ಹರಡಿರುವ ಸುದ್ದಿ ಜಗತ್ತಿನ ಶಾಂತಿ ಕೆಡಿಸಿದೆ.
ಈ ಬಗ್ಗೆ ವರದಿ ಮಾಡಿರುವ ಗ್ಲೋಬಲ್ ಟೈಮ್ಸ್, ‘ವಾಯವ್ಯ ಚೀನಾದಲ್ಲಿ ಈ ಸೋಂಕು ವ್ಯಾಪಕವಾಗಿ ಹರಡುತ್ತಿದೆ ಅಲ್ಲಿನ ಅನೇಕರಿಗೆ ಸೋಂಕು ಧೃಡಪಟ್ಟಿದೆ. ಈ ಬಗ್ಗೆ ಎಲ್ಲ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳುತ್ತಿರುವದಾಗಿ ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ’ ಎಂದು ಹೇಳಿದೆ.
ಮಾಲ್ಟಾ ಅಥವಾ ಮೆಟಿಟೇರಿಯನ್ ಜ್ವರ ಎಂದು ಕರೆಯಲ್ಪಡುವ ಈ ಸೋಂಕು ೨೦೧೯ರಲ್ಲಿ ಔಷಧಿ ಕಂಪನಿಯಲ್ಲಿ ಸೋರಿಕೆಯಾಗಿ ವ್ಯಾಪಕವಾಗಿ ಪ್ರಚಾರವಾಗಿತ್ತು. ಇದು ಮನುಷ್ಯನಿಂದ ಮನುಷ್ಯನಿಗೆ ಹರಡುವದಿಲ್ಲ. ಬದಲಾಗಿ ಉಸಿರಾಟದಿಂದ, ತರಕಾರಿ-ಹಣ್ಣುಗಳ ಮೂಲಕ ಹರಡುತ್ತದೆ. ಈ ವೈರಾಣು ಅಲ್ಪಾವಧಿಯಾದದ್ದಾದರೂ ವೃದ್ಧರು, ಮಕ್ಕಳು ಹಾಗೂ ಗರ್ಭಿಣಿಯರಿಗೆ ಬಹು ಅಪಾಯಕಾರಿ ಎನ್ನುತ್ತಾರೆ ತಜ್ಞರು.
More Stories
SBIನಲ್ಲಿ 600 ಪ್ರೊಬೇಷನರಿ ಆಫೀಸರ್ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ
ನಾಳೆಗಾಗಿ ಬಾಳಬೇಕು ಕೇಳು ನೊಂದ ಜೀವವೇ..!
ತುಪ್ಪ ಎಂಬ ಮಹಾ ಔಷಧಿ