December 23, 2024

Newsnap Kannada

The World at your finger tips!

Map karnataka flag

ಕರುನಾಡ ಜಿಲ್ಲೆಗಳ ಕಿರು ಪರಿಚಯ – 24 – ಕೋಲಾರ

Spread the love

ಕಲಾವತಿ ಪ್ರಕಾಶ್
ಬೆಂಗಳೂರು

ಶತಶೃಂಗ ಪರ್ವತದಲ್ಲಿ ಪರಶುರಾಮ ಮತ್ತು ದೊರೆ
ಕಾಂತವೀರಾರ್ಜುನರ ನಡುವೆ ಯುದ್ಧವಾದಾಗ
ಆ ಯುದ್ಧದಿಂದ ಉಂಟಾದ ಕೋಲಾಹಲವು
ಸುತ್ತ ಬೆಟ್ಟಗಳಲ್ಲೆಲ್ಲ ಮಾರ್ದನಿಸಿದ ಕಾರಣಕ್ಕೆ

ಆ ಸ್ಥಳಕ್ಕೆ ಕೋಲಾಹಲ ಎಂಬ ಹೆಸರು ಬಂತೆಂದೂ
ಪೌರಾಣಿಕ ಹಿನ್ನೆಲೆಯಂತೆ ಮುಂದೆ ಕೋಲಾರವಾಯ್ತು
ಕೋಲಾರದ ಮೂಲ ಹೆಸರು ಕುವಲಾಲಪುರವಂತೆ
ಕಾಲಕ್ರಮೇಣ ಕೋಲಾರವಾಯ್ತೆಂದು ಜನರ ಮಾತು

ಚಿನ್ನದ ನಾಡೆಂಬ ಖ್ಯಾತಿಯ ಜಿಲ್ಲೆಯ ತಾಲ್ಲೂಕು ಆರು
ಮುಳಬಾಗಿಲು ಮಾಲೂರು ಹಾಗೂ ಲೋಲಾರ
ಬಂಗಾರಪೇಟೆ ಕೆಜಿಎಫ್ ಮತ್ತು ಶ್ರೀನಿವಾಸಪುರ
ಬರಿ ಧರೆಯಾಗಲಿಲ್ಲ ಎಂದೂ ಬರಡಾಗದ ಈ ನಾಡು

ಗಂಗರು ಕದಂಬರು ಚಾಲುಕ್ಯರು ಹೊಯ್ಸಳರು
ರಾಷ್ಟ್ರಕೂಟರು ಹೈದರಾಲಿ ಮೈಸೂರಿನ ಅರಸರು
ಟಿಪ್ಪು ಸುಲ್ತಾನ್ ಪಾಳೆಗಾರರು ಇಲ್ಲಿ ಆಳಿದರು
ಬಂಗಾರದ ನಾಡನ್ನು ಶ್ರೀಮಂತ ಗೊಳಿಸಿದರು

ಬೇತಮಂಗಲ ಕೆರೆ ರಾಮಸಾಗರ ಕೋಲಾರಮ್ಮನ ಕೆರೆ
ನರಸಾಪುರ ಕೆರೆಗಳು ಈ ಜಿಲ್ಲೆಯ ಜಲಮೂಲಗಳು
ಹೂವು ಹಣ್ಣು ತರಕಾರಿ ರೇಷ್ಮೆಮಾವು ಇಲ್ಲಿನ ಬೆಳೆಗಳು
ಅತಿ ಹೆಚ್ಚು ಹಾಲು ಮಾವು ಉತ್ಪಾದಿಸುವ ಜಿಲ್ಲೆ ಇದು

ಇಟ್ಟಿಗೆ ಹೆಂಚು ತಯಾರಿಕಾ ಕಾರ್ಖಾನೆಗಳಿಹವಿಲ್ಲಿ
ಕರ್ನಾಟಕದ ಅತಿ ದೊಡ್ಡ ಕೈಗಾರಿಕಾ ಪ್ರದೇಶವಿಹುದು
ಏಷ್ಯಾದ ೨ನೇ ದೊಡ್ಡ ಕೋಲಾರದ ಎ ಪಿ ಎಮ್ ಸಿ
ಶ್ರೀನಿವಾಸಪುರ ಮಾವಿನ ತವರೂರೆಂದೇ ಹೆಸರುವಾಸಿ

ಅವನಿ ಬೆಟ್ಟ ಶತಶೃಂಗ ಕುರುಡು ಮಲೆ ಮುಂತಾದವು
ಕೋಲಾರ ಜಿಲ್ಲೆಯ ನಿಸರ್ಗದತ್ತ ಬೆಟ್ಟಗಳು ಅನೇಕವು
ಬೇಸಿಗೆ ಬರಗಾಲಗಳಲ್ಲೂ ಸದಾ ನೀರು ಸುರಿಸುವಂಥ
ಅಂತರಗಂಗೆಯಂಥ ಜಲಮೂಲ ಭಾರತದಲ್ಲಿ ಇನ್ನಿಲ್ಲ

ಮಾಸ್ತಿ ವೆಂಕಟೇಶ ಅಯ್ಯಂಗಾರ್ ಡಿ ವಿ ಗುಂಡಪ್ಪ
ವಿಜಯನಗರದ ಆಸ್ಥಾನದ ಕವಿ ಲಕ್ಕಣ್ಣ ದಂಡೇಶ
ಪದಬಂಧ ಖ್ಯಾತಬರಹಗಾರ ಎ ಎನ್ ಪ್ರಹ್ಲಾದ್ ರಾವ್
ಕೋಲಾರದ ಪ್ರಖ್ಯಾತ ಸಾಹಿತ್ಯ ದಿಗ್ಗಜರಿವರೆಲ್ಲರೂ

ಕೇಂದ್ರ ಸರ್ವೋಚ್ಚ ನ್ಯಾಯಾಲಯದ ನಿವೃತ್ತರಾದ
ನ್ಯಾಯಾಧೀಶರು ಎನ್ ವೆಂಕಟಾಚಲರು ಸಿನಿ ತಾರೆ
ಸೌಂದರ್ಯ ಬಿ ಆರ್ ಪಂತಲು ಹರಿಕಥಾ ವಿದ್ವಾಂಸ
ಮಾಲೂರು ಸೊಣ್ಣಪ್ಪ ಕೋಲಾರದ ಖ್ಯಾತನಾಮರು

ಸೀತೆಯ ರಕ್ಷಣೆಗೆ ಬಂದ ಜಟಾಯುವ ಕೊಂದ ರಾವಣ
ವಿಶ್ವದ ಏಕೈಕ ಗೆರುಡ ದೇವಾಲಯವಿದೆ ಕೋಲಾರದಿ
ಕೋಲಾರಮ್ಮನ ಗುಡಿಗೆ ಬಹು ಪ್ರಸಿದ್ಧವಿದೆ ಕೋಲಾರ
ಅರ್ಜುನ ನಿಂದ ಪ್ರತಿಷ್ಟಿತ ಆಂಜನೇಯ ದೇವಾಲಯ

ಮಹರ್ಷಿ ವಾಲ್ಮಿಕಿ ನೆಲೆಸಿದ್ದರಂತೆ ಅವನಿ ಬೆಟ್ಟದಲ್ಲಿ
ಸೀತಾಮಾತೆ ಆಶ್ರಯ ಪಡೆದು ಲವ ಕುಶರಿಗೆ ಜನ್ಮ
ನೀಡಿದ್ದು ಈ ವಾಲ್ಮಿಕಿ ಮಹರ್ಷಿಗಳ ಆಶ್ರಮದಲ್ಲಿಯೇ
ರಾಮ ತನ್ನ ಮಕ್ಕಳೊಡನೆ ಯುದ್ಧ ಮಾಡಿದನಿಲ್ಲಿಯೇ

ಪ್ರಪಂಚದಲ್ಲೇ ಅತ್ಯಂತ ಪುರಾತನ ಹಾಗೂ ಆಳವಾದ
ಚಿನ್ನದ ಗಣಿ ಇರುವುದು ಕೋಲಾರದ ಕೆ ಜಿ ಎಫ್
ಕೋಲಾರದ ಶಿವಾರಪಟ್ಟಣ ಕರ್ನಾಟಕದ ಪಾರಂಪರಿಕ
ಶಿಲ್ಪಕಲಾ ಗ್ರಾಮವೆಂದು ಘೋಷಿಸಲಾದ ಈ ಊರು

ಹೈದರಾಲಿಯ ಜನ್ಮ ಸ್ಥಳ ಕೋಲಾರದ ಬೂದಿಕೋಟೆ
ಕರ್ನಾಟಕದ ಮೊದಲ ಮುಖ್ಯಮಂತ್ರಿ ಯವರಾದ
ಕೆ ಚಂಗಲರಾಯ ರೆಡ್ಡಿ ಹುಟ್ಟೂರೂ ಸಹ ಕೋಲಾರವೆ
ಚಿಕ್ಕ ತಿರುಪತಿ ದೇಶದ ಏಳು ತಿರುಪತಿ ಪೈಕಿ ಇದೊಂದು

ಕೋಟಿಲಿಂಗೇಶ್ವರ ಇರುವುದೂ ಕೋಲಾರದಲ್ಲಿಯೇ
ಹಲವು ಗಾತ್ರ ಆಕಾರದ ಲಕ್ಷಾಂತರ ಶಿವಲಿಂಗಗಳನ್ನು
ಭಕ್ತಾದಿಗಳು ಬಂದು ಸ್ಥಾಪಿಸಿ ಪೂಜಿಸುವರು ಇಲ್ಲಿ
ವಿಶ್ವದಲ್ಲೇ ಅತಿ ಎತ್ತರದ ೧೦೮ ಅಡಿ ಶಿವಲಿಂಗವಿದೆ

Copyright © All rights reserved Newsnap | Newsever by AF themes.
error: Content is protected !!