November 23, 2024

Newsnap Kannada

The World at your finger tips!

Map karnataka flag

ಕರುನಾಡ ಜಿಲ್ಲೆಗಳ ಕಿರು ಪರಿಚಯ – 14- ಉತ್ತರ ಕನ್ನಡ

Spread the love

ಕಲಾವತಿ ಪ್ರಕಾಶ್
ಬೆಂಗಳೂರು

ಉತ್ತರ ಕನ್ನಡ ಜಿಲ್ಲೆ ಪ್ರಕೃತಿ ಸೌಂದರ್ಯಕೆ ಹೆಸರಾಗಿದೆ
ಇದು ಜಲಪಾತಗಳ ಜಿಲ್ಲೆ ಎಂಬ ಹೆಗ್ಗಳಿಕೆ ಪಡೆದಿದೆ
ಯಕ್ಷಗಾನ ಕ್ಷೇತ್ರದಲ್ಲಿ ಸಾಕಷ್ಟು ಪ್ರಸಿದ್ಧಿ ಪಡೆದಿದೆ
ಉಪ್ಪಿನ ಸತ್ಯಾಗ್ರಹದ ದಾಂಡೀ ಈ ಜಿಲ್ಲೆಗೆ ಸೇರಿದೆ

ಸಾತವಾಹನ ಮೌರ್ಯ ಚಾಲುಕ್ಯರು ರಾಷ್ಟ್ರಕೂಟರು
ವಿಜಯನಗರದರಸರು ಕದಂಬರು ಕೆಳದಿ ನಾಯಕರು
ಚಿಳಗಿ ಸ್ವಾದಿ ಗೇರುಸೊಪ್ಪೆ ಪಾಳಯಗಾರರು ಆಳಿದರು
ಅವರಲ್ಲದೆ ಟಿಪ್ಪು ಸುಲ್ತಾನ್ ಹೈದರಾಲಿ ಬ್ರಿಟೀಷರೂ

ಅಂಕೋಲಾ ಕುಮುಟಾ ಕಾರವಾರ ಸಿದ್ದಾಪುರ
ಶಿರಸಿ ಜೋಯಿಡಾ ಮುಂಡಗೋಡ ಹೊನ್ನಾವರ
ಹಳಿಯಾಳ ದಾಂಡೇಲಿ ಭಟ್ಕಳ ಮತ್ತು ಯಲ್ಲಾಪುರ
ಇವೇ ಈ ಜಿಲ್ಲೆಯ ಹನ್ನೆರಡು ತಾಲ್ಲೂಕುಗಳು

ದಟ್ಟ ಅರಣ್ಯ ನದಿ ಹೇರಳ ಸಸ್ಯ ಪ್ರಾಣಿ ಸಂಪತ್ತಿದೆ
ಅಘನಾಶಿನಿ ಕಾಳಿ ಶರಾವತಿ ಗಂಗಾವಳಿ ನದಿಗಳಿದೆ
ಮಾಗೋಡು ಜಲಪಾತ ಬೆಣ್ಣೆಹೊಳೆ ಜಲಪಾತಗಳಿದೆ
ಜಲಪಾತಗಳ ಜಿಲ್ಲೆಯೆಂದೇ ಪ್ರಸಿದ್ಧಿ ಪಡೆದಿದೆ

ಸಹ್ಯಾದ್ರಿ ಬೆಟ್ಟಗಳ ಶ್ರೇಣಿ ಸಮುದ್ರದಂಚಿನ ಬೀಚ್ಗಳು
ಭತ್ತ ತೆಂಗು ಅಡಿಕೆ ಮೆಣಸು ಏಲಕ್ಕಿ ಮುಖ್ಯ ಬೆಳೆಗಳು
ವ್ಯವಸಾಯ ವ್ಯಾಪಾರ ಮೀನುಗಾರಿಕೆ ಕಸಬುಗಳು
ದಾಂಡೇಲಿ ಕಾಗದದಕಾರ್ಖಾನೆ ಚರ್ಮದುದ್ಯೋಗಗಳು

ಉತ್ತರ ಕನ್ನಡ ಜಿಲ್ಲೆ ಜನಪದ ಸಂಸ್ಕೃತಿಯ ಬೀಡು
ಜನಪದ ಗೀತೆ ಸುಗ್ಗಿ ಕುಣಿತ ಬೆಸ್ತರ ಪದಗಳ ನಾಡು
ಹುಲಿವೇಶ ಯಕ್ಷಗಾನ ಸಾಮಪ್ರದಾಯಕ ಕಲೆಗಳಿವೆ
ಕುಣಬಿ ಹಾಲಕ್ಕಿ ಒಕ್ಕಲಿಗ ಗೊಂಡ ಗೌಳಿ ಮತಗಳಿವೆ

ಯಶವಂತಚಿತ್ತಾಲ ಶಿವಲೀಲಾ ಗೌರೀಶ ಕಾಯ್ಕಿಣಿ
ಶಾಂತಿನಾಥ ದೇಸಾಯಿ ಜಯಂತ ಕಾಯ್ಕಿಣಿ
ಕರ್ಕಿ ವೆಂಕಟರಮಣ ಶಾಸ್ತ್ರಿ ಮುಂತಾದವರು
ಇದೇ ಜಿಲ್ಲೆಯ ಸಾಹಿತ್ಯ ಕ್ಷೇತ್ರದ ದಿಗ್ಗಜರು

ಬನವಾಸಿ ಮಧುಕೇಶ್ವರ ಉಳವಿ ಚನ್ನಬಸವೇಶ್ವರ
ಇಡಗುಂಜಿ ಗಣಪತಿ ಗೋಕರ್ಣ ಮುರುಡೇಶ್ವರ
ಅನೇಕ ಪುಣ್ಯ ಕ್ಷೇತ್ರಗಳಿರುವ ಜಿಲ್ಲೆಯಿದ
ಸ್ವರ್ಣ ವಲ್ಲಿ ಮಠ ಸೊಂದಾ ಕೋಟೆ ಜೈನ ಬಸದಿಗಳಿದೆ

ಚಾರಣಕ್ಕೆ ಸಹ್ಯಾದ್ರಿ ಶ್ರೇಣಿಯಲ್ಲಿ ಯಾಣವಿದೆ
ಮುರುಡೇಶ್ವರ ಏಷ್ಯಾದಲ್ಲೇ ೨ನೇ ಎತ್ತರದ ಪ್ರತಿಮೆ
ಜಗತ್ತಿನ ಅತಿ ಎತ್ತರದ ರಾಜಗೋಪುರ ಮುರುಡೇಶ್ವರ
ಮುಂಡುಗೋಡದಲ್ಲಿ ಟಿಬೆಟಿಯನ್ ದೇವಾಲಯವಿದೆ

Copyright © All rights reserved Newsnap | Newsever by AF themes.
error: Content is protected !!