December 3, 2024

Newsnap Kannada

The World at your finger tips!

Map karnataka flag

ಮೈಸೂರು ಜಿಲ್ಲೆಯ ಸಂಕ್ಷಿಪ್ತ ಮಾಹಿತಿಯ ಕವನ

Spread the love

ಮಹಿಷಪುರ ಶಬ್ದದಿಂದ ಮೈಸೂರು ಹೆಸರು ಬಂದಿದೆ
ಗಂಗರು ಚಾಲುಕ್ಯರು ಚೋಳರು ಹೊಯ್ಸಳರಲ್ಲದೆ
ವಿಜಯನಗರದ ಅರಸರು ಮೈಸೂರು ಒಡೆಯರು
ಹೈದರಾಲಿ ಟಿಪ್ಪು ಸುಲ್ತಾನ ಬ್ರಿಟಿಷರು ಆಳಿದರು

ಯದುರಾಯರಿಂದ ಸ್ಥಾಪಿತ ಮೈಸೂರು ಸಂಸ್ಥಾನ
ಹತ್ತು ಜನ ಚಾಮರಾಜರು ನಾಲ್ವರು ಕೃಷ್ಣರಾಜರು
ಮಹಾ ಪರಾಕ್ರಮಿ ಕಂಠೀರವ ನರಸಿಂಹರಾಜರು
ಇಪ್ಪತ್ತೈದು ರಾಜರಿಂದ ಆಳಿದ ಒಡೆಯರ ಮೈಸೂರು

ಪಿರಿಯಾಪಟ್ಟಣ ಹುಣಸೂರು ಕೃಷ್ಣರಾಜನಗರ
ಹೆಗ್ಗಡದೇವನಕೋಟೆ ನಂಜನಗೂಡು ಮೈಸೂರು
ತಿರುಮಕೂಡಲನರಸಿಪುರ ಸರಗೂರು ಸಾಲಿಗ್ರಾಮ
ಎಂಬ ಒಂಭತ್ತು ತಾಲ್ಲೂಕುಗಳು ಇರುವ ಮೈಸೂರು

ಮೈಸೂರು ಪಾಕ್ ಮೈಸೂರು ಸಿಲ್ಕ್ ಸೀರೆ ಗಳಿಗಲ್ಲದೆ
ಮೈಸೂರು ಮಲ್ಲಿಗೆ ಮೈಸೂರು ವೀಳ್ಯದೆಲೆಗಳು
ಮೈಸೂರು ಪೇಟ ಅಗರ್ ಬತ್ತಿ ಮೈಸೂರು ಇಂಕ್
ಮೈಸೂರು ಸಾಂಪ್ರದಾಯಿಕ ಚಿತ್ರಪಟಕ್ಕೆ ಪ್ರಸಿದ್ಧ ನಗರ

ಮೈಸೂರು ವಿಶ್ವವಿದ್ಯಾನಿಲಯ ರಂಗಾಯಣಗಳು
ಜಗದ್ವಿಖ್ಯಾತ ಮೈಸೂರು ದಸರಾ ನವರಾತ್ರಿ ಉತ್ಸವ
ಡೊಳ್ಳು ಪೂಜಾ ಕುಣಿತ ಕಂಸಾಳೆ ಸೋಮನ ಕುಣಿತ
ವಾಸ್ತು ಶಿಲ್ಪ ಸಂಗೀತ ಚಿತ್ರಕಲೆ ಮೈಸೂರಿನ ವಿಶೇಷತೆ

ಕಪಿಲಾನದಿ ಕಬಿನಿಜಲಾಶಯ ಚುಂಚನಕಟ್ಟೆ ಜಲಪಾತ
ಮೈಸೂರು ಮಲ್ಲಿಗೆ ತಂಬಾಕು ಶುಂಠಿ ಎಳ್ಳು ಕಬ್ಬು ರಾಗಿ
ದ್ವಿದಳ ಧಾನ್ಯಗಳು ಮುಸುಕಿನ ಜೋಳ ಇಲ್ಲಿಯ ಬೆಳೆ
ಮೈಸೂರು ಪಾಕು ಮಸಾಲೆ ದೋಸೆ ಪ್ರಸಿದ್ಧ ತಿಂಡಿಗಳು

ಜಗನ್ಮೋಹನ ಅರಮನೆ ಕುಕ್ಕರಹಳ್ಳಿ ಕಾರಂಜಿ ಕೆರೆ
ರೇಲ್ವೆ ಮ್ಯುಸಿಯಮ್ ಸೆಂಟ್ ಫಿಲೋಮಿನಾಸ್ ಚರ್ಚ್
ಲಲಿತ್ ಮಹಲ್ ಶ್ರೀ ಚಾಮರಾಜೇಂದ್ರ ಮೃಗಾಲಯ
ಚಾಮುಂಡಿ ಬೆಟ್ಟ ಫ್ಯಾಂಟಸಿ ಪಾರ್ಕ್ ನೋಡೊ ತಾಣ

ನಂಜನಗೂಡಿನ ಶ್ರೀಕಂಠೇಶ್ವರ ತಲಕಾಡಿನ ಗುಡಿ
ಪಂಚಲಿಂಗ ದರ್ಶನ ಸೋಮನಾಥ ಪುರದಲ್ಲಿಯ
ಚನ್ನಕೇಶವ ದೇವಾಲಯ ಅಮರ ಶಿಲ್ಪಿ ಜಕಣಾಚಾರಿ
ಕೈಯಿಂದ ಕೆತ್ತಿದ ಅದ್ಭುತವಾದ ಶಿಲ್ಪಕಲೆಯ ನೆಲೆಬೀಡು

ಎಂ ವೆಂಕಟಕೃಷ್ಣಯ್ಯನವರು ಆರ್ ತಾತಾಚಾರ್ಯರು
ಟಿ ಪಿ ಕೈಲಾಸಂ ಜಾನಪದ ತಜ್ಞ ಸಿ ಪಿ ಕೃಷ್ಣ ಕುಮಾರ್
ಎಂ ವಿ ಸೀತಾರಾಮಯ್ಯ ಎಸ್ ಶ್ರೀಕಂಠ ಶಾಸ್ತ್ರಿಗಳು
ಹೊಸಗನ್ನಡದ ಲೇಖಕಿ ತಿರುಮಲಾಂಬ ಸಾಹಿತಿಗಳು

ಕಲಾವತಿ ಪ್ರಕಾಶ್ ಬೆಂಗಳೂರು (ಜಿಲ್ಲೆ ೩೦)

Copyright © All rights reserved Newsnap | Newsever by AF themes.
error: Content is protected !!