December 22, 2024

Newsnap Kannada

The World at your finger tips!

WhatsApp Image 2022 05 22 at 6.05.36 PM

ಮೈಸೂರಿನಲ್ಲಿ ವಧು ಹೈಡ್ರಾಮ : ಕುಸಿದು ಬಿದ್ದು ನಾಟಕ – ವರನಿಗಿಂತ ಲವರ್ ಇಷ್ಟ

Spread the love

ಮೈಸೂರಿನ ವಿದ್ಯಾಭಾರತಿ ಕಲ್ಯಾಣ ಮಂಟಪದಲ್ಲಿ ತಾಳಿ ಕಟ್ಟಿಸಿಕೊಳ್ಳಲು ಕುಳಿತಿದ್ದ ಯುವತಿ ಕೊನೆ ಕ್ಷಣದಲ್ಲಿ ವರನಿಗೆ ಶಾಕ್​ ನೀಡಿ ಮದುವೆ ಅಂತ ಆದ್ರೆ ನಾನು ಪ್ರೀತಿಸಿದ ಹುಡುಗನನ್ನೇ ಆಗೋದಾಗಿ ಹಠ ಹಿಡಿದು ಹೈಡ್ರಾಮ ಮಾಡಿದ್ದಾಳೆ.

ಮೈಸೂರಿನ ಸುಣ್ಣದಕೇರಿ ಸಿಂಚನ ಹಾಗೂ ಹೆಚ್.ಡಿ ಕೋಟೆ ತಾಲೂಕಿನ ಗ್ರಾಮವೊಂದರ ಯುವಕನೊಂದಿಗೆ ಮದುವೆ ಕಾರ್ಯಕ್ರಮ ನಿಗದಿಯಾಗಿತ್ತು. ಎರಡು ಕುಟುಂಬಗಳ ಬಂದು ಮಿತ್ರರು ಹಾಗೂ ಸ್ನೇಹಿತರು, ಗ್ರಾಮಸ್ಥರು ಕಲ್ಯಾಣ ಮಂಟಪಕ್ಕೆ ಆಗಮಿಸಿದ್ದರು. ಆದರೆ ತುಂಬಿದ ಕಲ್ಯಾಣ ಮಂಟಪದಲ್ಲಿ ವಧು ಇಂಚನ ಮಾಡಿದ್ದ ಹೈಡ್ರಾಮ ನೆರೆದಿದ್ದ ಎಲ್ಲರಿಗೂ ಶಾಕ್​ ಆಗಿದೆ.

ಮದುವೆ ಸಂಭ್ರಮದಲ್ಲಿ ಇದ್ದ ವರ ಇನ್ನೇನು ತಾಳಿ ಕಟ್ಟಬೇಕು ಎನ್ನುವ ವೇಳೆಯಲ್ಲಿ ಕುಸಿದು ಬಿದ್ದಂತೆ ನಾಟಕ ಮಾಡಿದ್ದ ಯುವತಿ ಮಂಟಪದಲ್ಲಿ ಹೈಡ್ರಾಮಾ ಸೃಷ್ಟಿ ಮಾಡಿದ್ದಳು.ಆ ಬಳಿಕ ತಾನು ಮದುವೆಯಾದರೇ ಪ್ರೀತಿಸಿದ ಯುವಕನನ್ನೇ ಮದುವೆಯಾಗುತ್ತೇನೆ ಎಂದು ಹಠ ಮಾಡಿದ್ದಾಳೆ.

ಸಿಂಚನ ಸುಣ್ಣದಕೇರಿಯ ಗ್ರಾಮದ ತನ್ನ ಪಕ್ಕದ ಮನೆಯ ಯುವಕನನ್ನು ಲವ್​ ಮಾಡಿದ್ದು, ಸುತ್ತಾಟ ನಡೆಸಿದ್ದರು. ಆದರೆ ಈ ನಡುವೆ ಬೇರೆಯೊಬ್ಬ ಯುವಕನೊಂದಿಗೆ ಸಿಂಚನಳ ಮದುವೆಯನ್ನು ಕುಟುಂಬದವರು ನಿರ್ಧಾರ ಮಾಡಿದ್ದರು.

ತನ್ನ ಮದುವೆ ಖಚಿತವಾಗುತ್ತಿದ್ದಂತೆ ಸಿಂಚನ ಪ್ರಿಯಕರ ವರನಿಗೆ ಮಸೇಜ್​ ಮಾಡಿ ಮದುವೆಯಾಗದಂತೆ ಎಚ್ಚರಿಕೆ ಕೊಟ್ಟಿದ್ದ. ಈ ಮೆಸೇಜ್​ ತೋರಿಸಿ ಪ್ರಶ್ನೆ ಮಾಡಿದರೇ ಮಸೇಜ್‌ಗೂ ನನಗೂ ಸಂಬಂಧವಿಲ್ಲವೆಂದು ಮದುವೆಗೆ ತಯಾರಿ ನಡೆಸಿದ್ದಳು. ಆದರೆ ತಾಳಿ ಕಟ್ಟುವ ಕೊನೆ ಕ್ಷಣದಲ್ಲಿ ವರನಿಗೆ ನೋ ಎಂದ ಸಿಂಚನ ಮಂಟಪದಲ್ಲಿ ಹೈಡ್ರಾಮಾ ಮಾಡಿದ್ದಾಳೆ.

ಪೋಲಿಸ್ ಠಾಣೆ ಮೆಟ್ಟಿಲೇರಿದ ಪ್ರಕರಣ :

ಮದುವೆಗೆ ಯುವತಿಯ ಮನೆಯವರಿಗೆ ಕಷ್ಟವಾಗುತ್ತದೆ ಎಂದು ವರನ ಕಡೆಯವರೇ ಸುಮಾರು 5 ಲಕ್ಷ ರೂಪಾಯಿ ಖರ್ಚು ಮಾಡಿದ್ದರು, ವಧುವಿಗೆ ಚಿನ್ನ, ರೇಷ್ಮೆ ಸೀರೆಗಾಗಿ ಲಕ್ಷ ಲಕ್ಷ ರೂಪಾಯಿ ಖರ್ಚು ಮಾಡಿದ್ದಾರೆ. ಆದರೆ ಇಷ್ಟೆಲ್ಲಾ ಆದ ಬಳಿಕ ವಧು ಮದುವೆ ಬೇಡ ಎಂದಿದ್ದಕ್ಕೆ ವರನ ಪೋಷಕರು ವಧುವಿಗೆ ಛೀಮಾರಿ ಹಾಕಿದ್ದಾರೆ. ಮದುವೆಯಾಗಲ್ಲವೆಂದು ಹಠ ಹಿಡಿದ ವಧುವನ್ನು ಪೊಲೀಸರು ಠಾಣೆಗೆ ಕರೆದು ಕೊಂಡು ಹೋದರು.

ಇದನ್ನು ಓದಿ : ವಾಹನಗಳ ನೋಂದಣಿ ಫಲಕಗಳ ಮೇಲೆ ಯಾವುದೇ ಹೆಸರು, ಚಿನ್ನೆ, ಲಾಂಛನ ಹಾಕುವಂತಿಲ್ಲ – ರಾಜ್ಯ ಸರ್ಕಾರ ಗೆಜೆಟ್ ಅಧಿಸೂಚನೆ

ನಂತರ ವಧು ಹಾಗೂ ವರನ ಕುಟುಂಬದವರು ಮಾತುಕತೆ ಮೂಲಕ ಪರಿಹರಿಸಿಕೊಂಡ ವಧು ಕಡೆಯವರು 5 ಲಕ್ಷರು ಹಾಗೂ ವಧುವಿಗೆ ಹಾಕಲಾಗಿದ್ದ ಚಿನ್ನಾಭರಣಗಳನ್ನು ವಾಪಸ್ಸು ನೀಡಿ ಪ್ರಕರಣಕ್ಕೆ ಅಂತ್ಯ ಹಾಡಲಾಯಿತು.

Copyright © All rights reserved Newsnap | Newsever by AF themes.
error: Content is protected !!