January 29, 2026

Newsnap Kannada

The World at your finger tips!

election , ticket , BJP

I will leave my life, will not leave BJP : MLA Ramdas ಜೀವ ಬೇಕಾದ್ರೆ ಬಿಡುತ್ತೇನೆ, ‌ಬಿಜೆಪಿ ಪಕ್ಷ ಬಿಡೋಲ್ಲಾ : ಶಾಸಕ ರಾಮದಾಸ್‌

ರಾಮದಾಸ್ ಗೆ ಉಸಿರಾಟದ ಸಮಸ್ಯೆ: ಆಸ್ಪತ್ರೆಗೆ ದಾಖಲು

Spread the love

ಮೈಸೂರಿನ ಕೃಷ್ಣರಾಜ ಶಾಸಕ ಎಸ್.ಎ. ರಾಮದಾಸ್ ಗೆ ಸೋಮವಾರ ಮುಂಜಾನೆ 5 ಗಂಟೆಗೆ ಉಸಿರಾಟದ ಸಮಸ್ಯೆಯಿಂದಾಗಿ ಅವರನ್ನು ಮೈಸೂರಿನ ಜಯದೇವ ಆಸ್ಪತ್ರಗೆ ದಾಖಲಿಸಲಾಗಿದೆ.

ಕಳೆದ ಎರಡು ದಿನಗಳಿಂದ ರಾಮದಾಸ್ ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಕಾರ್ಯಕ್ರಮಗಳಲ್ಲಿ ತುಂಬಾ ಕ್ರಿಯಾಶೀಲರಾಗಿ ಭಾಗವಹಿಸುತ್ತಿದ್ದರು.

ಇಂದು ಬೆಳಿಗ್ಗೆ ಹಠಾತ್ತನೆ ಅವರ ಆರೋಗ್ಯದಲ್ಲಿ‌ ಏರುಪೇರಾಗಿರುವುದು ಆತಂಕವನ್ನುಂಟು ಮಾಡಿತ್ತು. ಆದರೆ ಆಸ್ಪತ್ರೆಗೆ ಸೇರಿಸಿದ ನಂತರ ಚಿಕಿತ್ಸೆಗೆ ರಾಮದಾಸ್ ಸ್ಪಂದಿಸುತ್ತಿದ್ದಾರೆ.

ಕಳೆದ ಕೆಲವು ತಿಂಗಳುಗಳ ಹಿಂದೆ ರಾಮದಾಸ್ ಅವರಿಗೆ ಲಘು ಹೃದಯಾಘಾತವಾಗಿತ್ತು. ತಕ್ಷಣವೇ ಅವರಿಗೆ ಆಪರೇಷನ್ ಮಾಡಿ ಹೃದಯಕ್ಕೆ ಸ್ಟೆಂಟ್ ಅಳವಡಿಸಿದ್ದರು. ನಂತರ ಅವರ ಆರೋಗ್ಯ ಸುಧಾರಣೆ ಆಗಿತ್ತು. ಇಂದು ಮತ್ತೆ ಅವರಿಗೆ ಎದೆನೋವು ಹಾಗೂ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದೆ.

error: Content is protected !!