February 22, 2026

Newsnap Kannada

The World at your finger tips!

bila

ಲಿವ್ವಿಂಗ್ ರಿಲೇಶನ್ಸ್ ನಿರಾಕರಿಸಿದ ಮಹಿಳೆಯನ್ನು ಕೊಲೆ ಮಾಡಿದ ಗೆಳೆಯ !

Spread the love

ಮಹಿಳಾ ಸೆಕ್ಯುರಿಟಿ ಗಾರ್ಡ್‌ ಆಗಿ ಕೆಲ ಮಾಡುತ್ತಿದ್ದ ಸುಧಾರಾಣಿ ಎಂಬ ಮಹಿಳೆಯನ್ನು ಇಂದು ಬೆಳಗಾವಿ ಜಿಲ್ಲಾ ಆಸ್ಪತ್ರೆ ಕ್ಯಾಂಟೀನ್ ಬಳಿ ವ್ಯಕ್ತಿಯೊಬ್ಬ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾನೆ.

ಬೈಲಹೊಂಗಲ ತಾಲೂಕಿನ ಮೂಗಬಸವ ಗ್ರಾಮದ ಸುಧಾರಾಣಿ ಹಡಪದ ಎಂಬ ಮಹಿಳೆ ಕೊಲೆಯಾಗಿದ್ದಾಳೆ.ಬೈಲಹೊಂಗಲದ ಆಶ್ರಯ ಕಾಲೋನಿ ನಿವಾಸಿ ಈರಣ್ಣ ಬಾಬು ಜಗಜಂಪಿ ಕೊಲೆ ಮಾಡಿದ ಆರೋಪಿ.

ಸುಧಾರಾಣಿ ತನ್ನ ಗಂಡನನ್ನು ಬಿಟ್ಟು ಸುಮಾರು ಮೂರು ವರ್ಷಗಳಿಂದ ಈರಣ್ಣ ಎಂಬಾತನ ಜೊತೆಯಲ್ಲಿ ಲಿವ್ವಿಂಗ್ ರಿಲೇಶನ್ಸ್ ಹೊಂದಿದ್ದಳು ಎನ್ನಲಾಗಿದೆ.

ಕೆಲ ದಿನಗಳಿಂದ ಈರಣ್ಣನನ್ನು ನಿರಾಕರಣೆ ಮಾಡಿ ಬೇರೆ ವ್ಯಕ್ತಿಯೊಂದಿಗೆ ಸಂಬಂಧ ಬಯಸಿದ್ದಳು ಎಂದು ಸಂಶಯ ಪಟ್ಟ ಈರಣ್ಣಆಗಾಗ ಈಕೆಯೊಂದಿಗೆ ಜಗಳವಾಡುತ್ತಿದ್ದನು. ಅನೇಕ ಸಲ ಬುದ್ಧಿವಾದ ಹೇಳಿದರೂ ಕೇಳಿರಲಿಲ್ಲ. ಇದರಿಂದ ಬೇಸರಗೊಂಡು ಸುಧಾರಾಣಿಯನ್ನು ಮಾರಕಾಸ್ತ್ರದಿಂದ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

error: Content is protected !!