ಪ್ರೀತಿಯನ್ನು ನಿರಾಕರಿಸಿದ್ದಕ್ಕೆ ವಿದ್ಯಾರ್ಥಿನಿ ಮೇಲೆ ಯುವಕ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಮಂಡ್ಯದ ಮೆಡಿಕಲ್ ಕಾಲೇಜು ಆವರಣದಲ್ಲಿ ಜರುಗಿದೆ.
ಪ್ಯಾರಾ ಮೆಡಿಕಲ್ ವಿದ್ಯಾರ್ಥಿನಿ ವೈ ಯರಹಳ್ಳಿ ಗ್ರಾಮದ ನವ್ಯಾ (20) ಅದೇ ಗ್ರಾಮದ ಸಂಪತ್ ಕುಮಾರ್ 2 ವರ್ಷದಿಂದ ಪ್ರೀತಿಸುತ್ತಿದರು. ಈ ವಿಚಾರ ಯುವತಿ ಮನೆಯವರಿಗೆ ತಿಳಿದು ಆಕೆಯ ತಂದೆ, ಓದಿನ ಕಡೆ ಗಮನ ಹರಿಸುವಂತೆ ಬುದ್ಧಿ ಹೇಳಿದ್ದಾರೆ. ಬಳಿಕ ಸಂಪತ್ ಕುಮಾರ್ ಜೊತೆ ನವ್ಯಾ ಅಂತರ ಕಾಯ್ದುಕೊಂಡಳು .
ಇದನ್ನು ಓದಿ –ಪದವೀಧರ, ಶಿಕ್ಷಕರ ಪರಿಷತ್ ಚುನಾವಣೆ: ಜೂ.13ರಂದು ‘ಶಾಲಾ-ಕಾಲೇಜು’ಗಳಿಗೆ ರಜೆ
ಆದರೂ ಪದೇ ಪದೇ ಪೀಡಿಸ್ತಿದ್ದ ಯುವಕ ನವ್ಯಾಗೆ ಕಾಲೇಜು ಬಿಡುವವರೆಗೂ ಕಾದು ಕುಳಿತು ಹಲ್ಲೆ ನಡೆಸಿದ್ದಾನೆ. ಬಳಿಕ ಪಾಗಲ್ ಪ್ರೇಮಿಗೆ ಸಾರ್ವಜನಿಕರು ಧರ್ಮದೇಟು ನೀಡಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ನವ್ಯಾಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾಲೇಜು ಬಿಡುವರೆಗೂ ಹೊಂಚು ಹಾಕಿದ್ದ ಆರೋಪಿ ಆಕೆ ಹೊರ ಬರುತ್ತಿದ್ದಂತೆ ಮೊದಲೇ ಬೈಕಿನಲ್ಲಿ ತಂದಿದ್ದ ರಿಪೀಸ್ ಪಟ್ಟಿಯಲ್ಲಿ ಹಲ್ಲೆ ಮಾಡಿದ್ದಾನೆ.
ಮೊನ್ನೆ ಸ್ನೇಹಿತರ ಜೊತೆ ಯುವತಿ ಬರ್ತ್ ಡೇ ಆಚರಿಸಿಕೊಂಡಿದ್ದಳು. ಈ ವೇಳೆ ತನ್ನ ಜೊತೆ ಬಾರದೆ ಸ್ನೇಹಿತರ ಜೊತೆ ಬರ್ತ್ ಡೇ ಮಾಡಿಕೊಂಡಿದ್ದಕ್ಕೆ ಗರಂ ಆಗಿದ್ದ ಯುವಕ, ನವ್ಯಾ ಮನೆಗೆ ಹೋಗಿ ಗಲಾಟೆ ಕೂಡ ಮಾಡಿದ್ದನಂತೆ.
ಅಲ್ಲದೇ ಇಬ್ಬರು ಜೊತೆಯಲ್ಲಿರುವ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಮಾಡುವ ಬೆದರಿಕೆ ಹಾಕಿದ್ದನಂತೆ. ಆಗಲೂ ಕೂಡ ಯುವತಿ ತಂದೆ ಆತನಿಗೆ ಬುದ್ಧಿವಾದ ಹೇಳಿ ಕಳುಹಿಸಿದ್ದರಂತೆ.
ಸಂಪತ್, ಹಲ್ಲೆ ನಡೆಸುವುದಕ್ಕಾಗಿ ಫ್ರೀ ಪ್ಲಾನ್ ಮಾಡಿ ನಂಬರ್ ಪ್ಲೇಟ್ ಇಲ್ಲದ ಸ್ಕೂಟರ್ ನಲ್ಲಿ ರಿಪೀಸ್ ಪಟ್ಟಿಯೊಂದಿಗೆ ಕಾಲೇಜು ಬಳಿ ಬಂದಿದ್ದ. ಸಂಜೆ ಕಾಲೇಜಿನಿಂದ ಹೊರಗೆ ಬರುತ್ತಿದ್ದಂತೆ ಏಕಾಏಕಿ ಹಲ್ಲೆ ಮಾಡಿದ್ದಾನೆ. ಕೂಡಲೆ ಗಂಭೀರವಾಗಿ ಗಾಯಗೊಂಡಿದ್ದ ನವ್ಯಾಳನ್ನ ಸ್ನೇಹಿತರು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.
ಇತ್ತ ಸ್ಥಳದಲ್ಲಿದ್ದ ಸಾರ್ವಜನಿಕರು ಹಲ್ಲೆ ನಡೆಸಿದ ಸಂಪತ್ನನ್ನು ಹಿಡಿದು ಹಿಗ್ಗಾಮುಗ್ಗಾ ಥಳಿಸಿ ಪೊಲೀಸರ ವಶಕ್ಕೆ ನೀಡಿದ್ದಾರೆ. ಮಂಡ್ಯದ ಪೂರ್ವ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
- ಮೈಸೂರು- 40 ಸಾವಿರ ಲಂಚ ಸ್ವೀಕರಿಸುತ್ತಿದ್ದ ಬಿಲ್ ಕಲೆಕ್ಟರ್ ಲೋಕಾಯುಕ್ತ ಬಲೆಗೆ
- IDBI ಬ್ಯಾಂಕಿನಲ್ಲಿ 600 ಹುದ್ದೆಗಳ ನೇಮಕಾತಿ – 2024
- ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಸೇವಾ ದರ ಹೆಚ್ಚಳ
- ರಾಜ್ಯದ ಹಲವೆಡೆ ಲೋಕಾಯುಕ್ತ ದಾಳಿ: 25 ಕಡೆಗಳಲ್ಲಿ ಪರಿಶೀಲನೆ
- ಮಂಡ್ಯ ಸಾಹಿತ್ಯ ಸಮ್ಮೇಳನಕ್ಕೆ ಗೊ.ರು.ಚ ಆಯ್ಕೆ
- ಖ್ಯಾತ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಮತ್ತು ಸಾಯಿರಾ ಬಾನು ವಿಚ್ಛೇದನ
More Stories
ಮೈಸೂರು- 40 ಸಾವಿರ ಲಂಚ ಸ್ವೀಕರಿಸುತ್ತಿದ್ದ ಬಿಲ್ ಕಲೆಕ್ಟರ್ ಲೋಕಾಯುಕ್ತ ಬಲೆಗೆ
ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಸೇವಾ ದರ ಹೆಚ್ಚಳ
ರಾಜ್ಯದ ಹಲವೆಡೆ ಲೋಕಾಯುಕ್ತ ದಾಳಿ: 25 ಕಡೆಗಳಲ್ಲಿ ಪರಿಶೀಲನೆ