December 23, 2024

Newsnap Kannada

The World at your finger tips!

lpg

image source : google

ವಾಟ್ಸಾಪ್​ನಲ್ಲೂ LPG ಸಿಲಿಂಡರ್ ಬುಕ್ ಮಾಡಿ

Spread the love

ನವೆಂಬರ್ 1 ರಿಂದ ಎಲ್​ಪಿಜಿ ಸಿಲಿಂಡರ್ ಬುಕಿಂಗ್ ಮತ್ತು ಡೆಲಿವರಿ ವಿಧಾನಗಳಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಎಲ್​ಪಿಜಿ ಗ್ರಾಹಕರ ಅನುಕೂಲಕ್ಕಾಗಿ ಇಂಡೇನ್ ಆಯಿಲ್ ಕೆಲವು ಬದಲಾವಣೆಗಳನ್ನು ತಂದಿದೆ.

ಈಗಾಗಲೇ ಇಂಡೇನ್ ಆಯಿಲ್ ತನ್ನ ಗ್ರಾಹಕರ ರಿಜಿಸ್ಟರ್ಡ್​ ಮೊಬೈಲ್ ನಂಬರ್​ಗೆ ಈ ಬಗ್ಗೆ ಮೆಸೇಜ್ ಕಳುಹಿಸಿ, ಮಾಹಿತಿ ನೀಡಿದೆ. ಇಷ್ಟು ಮಾತ್ರವಲ್ಲದೆ, ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಗ್ರಾಹಕರಿಗೆ ಇನ್ನಷ್ಟು ಸುಲಭ ಸೇವೆ ನೀಡುವ ಸಲುವಾಗಿ ಇಂಡೇನ್ ಆಯಿಲ್ ವಾಟ್ಸಾಪ್​ ಮೂಲಕ ಗ್ಯಾಸ್​ ಸಿಲಿಂಡರ್ ಬುಕ್ ಮಾಡುವ ಆಯ್ಕೆಯನ್ನೂ ನೀಡಿದೆ. ಹೀಗಾಗಿ, ನೀವೀಗ ಗ್ಯಾಸ್​ ಸಿಲಿಂಡರ್ ಬುಕ್ ಮಾಡುವುದು ಮೊದಲಿಗಿಂತಲೂ ಸುಲಭ.

ಯಾವ ರೀತಿಯಲ್ಲಿ ಇಂಡೇನ್ ಆಯಿಲ್ ಎಲ್​ಪಿಜಿ ಸಿಲಿಂಡರ್​ಗಳನ್ನು ಬುಕ್ ಮಾಡಬಹುದು ಎಂಬ ಬಗ್ಗೆ ಇಲ್ಲಿದೆ ಮಾಹಿತಿ…

  1. ಇಂಡೇನ್ ಆಯಿಲ್ ಗ್ಯಾಸ್​ ಏಜೆನ್ಸಿ ಅಥವಾ ಡಿಸ್ಟ್ರಿಬ್ಯೂಟರ್​ ಜೊತೆ ನೇರವಾಗಿ ಮಾತನಾಡುವ ಮೂಲಕ ಸಿಲಿಂಡರ್ ಬುಕ್ ಮಾಡಬಹುದು.
  2. ಗ್ಯಾಸ್​ ಏಜೆನ್ಸಿಯವರಿಗೆ ಫೋನ್ ಮಾಡಿ ಬುಕ್ ಮಾಡಬಹುದು.
  3. ಇಂಡೇನ್ ಆಯಿಲ್​ನ ಈ ವೆಬ್​ಸೈಟ್​ಗೆ ಭೇಟಿ ನೀಡಿ ಅಲ್ಲಿ ಕೂಡ ಸಿಲಿಂಡರ್ ಬುಕ್ ಮಾಡಬಹುದು.
  4. ಇಂಡೇನ್ ಆಯಿಲ್ ಕಂಪನಿಯ 7588888824 ವಾಟ್ಸಾಪ್​ ನಂಬರ್​ಗೆ ನಿಮ್ಮ ರಿಜಿಸ್ಟರ್ಡ್​​ ಮೊಬೈಲ್ ನಂಬರ್​ನಿಂದ ಮೆಸೇಜ್ ಕಳುಹಿಸಿ ಬುಕ್ ಮಾಡಬಹುದು.
  5. ಇಂಡೇನ್ ಆಯಿಲ್ ಆ್ಯಪ್ ಡೌನ್​ಲೋಡ್ ಮಾಡಿಕೊಂಡು, ಅದರಲ್ಲಿ ಕೂಡ ಸಿಲಿಂಡರ್ ಬುಕ್ ಮಾಡಬಹುದು.

ವಾಟ್ಸಾಪ್​ನಲ್ಲಿ ಬುಕ್ ಮಾಡುವುದು ಹೇಗೆ?:

ಇಂಡೇನ್ ಆಯಿಲ್ ಗ್ರಾಹಕರು 7588888824 ನಂಬರ್​ಗೆ ವಾಟ್ಸಾಪ್​ ಮೂಲಕ ಮೆಸೇಜ್ ಕಳುಹಿಸಿ, ಎಲ್​ಪಿಜಿ ಸಿಲಿಂಡರ್ ಬುಕ್ ಮಾಡಬಹುದು. REFILL ಎಂದು ಟೈಪ್ ಮಾಡಿ, ನಿಮ್ಮ ರಿಜಿಸ್ಟರ್ಡ್​​ ನಂಬರ್​ನಿಂದ 7588888824 ನಂಬರ್​ಗೆ ವಾಟ್ಸಾಪ್​ನಲ್ಲಿ ಮೆಸೇಜ್ ಕಳುಹಿಸಿದರೆ ಸಿಲಿಂಡರ್ ಬುಕ್ ಆಗುತ್ತದೆ. ನಿಮ್ಮ ನಂಬರ್​ಗೆ ಬಂದ ಓಟಿಪಿಯನ್ನು ಹೇಳಿದ ನಂತರ ಡೆಲಿವರಿ ಬಾಯ್ ನಿಮಗೆ ಸಿಲಿಂಡರ್ ಡೆಲಿವರಿ ನೀಡುತ್ತಾನೆ.

ನೀವು ಯಾವ ವೇಳೆಯಲ್ಲಿ ಬೇಕಾದರೂ ನಿಮ್ಮ ರಿಜಿಸ್ಟರ್​ ಫೋನ್ ನಂಬರ್​ನಿಂದ ಕರೆ ಮಾಡಿ, ಇಂಡೇನ್ ಆಯಿಲ್ ಸಿಲಿಂಡರ್ ಬುಕ್ ಮಾಡಬಹುದು. ಈಗಾಗಲೇ ಈ ಹೊಸ ನಿಯಮ ಜಾರಿಗೆ ಬಂದಿದೆ. ಇಂಡೇನ್ ಆಯಿಲ್ ಗ್ರಾಹಕರು 7718955555 ಈ ನಂಬರ್​ಗೆ ಮೆಸೇಜ್ ಕಳುಹಿಸಿ ಅಥವಾ ಐವಿಆರ್​ಎಸ್​ ಮೂಲಕವೂ ಸಿಲಿಂಡರ್ ಬುಕ್ ಮಾಡಬಹುದು.

ಆದರೆ, ಯಾವುದೋ ನಂಬರ್​ನಿಂದ ಮೆಸೇಜ್ ಕಳುಹಿಸಿದರೆ ಗ್ಯಾಸ್​ ಸಿಲಿಂಡರ್ ಬುಕ್ ಆಗುವುದಿಲ್ಲ. ನೀವು ನಿಮ್ಮ ಗ್ಯಾಸ್​ ಕನೆಕ್ಷನ್​ನ ದಾಖಲಾತಿಯ ಜೊತೆ ಕೊಟ್ಟಿರುವ ನಂಬರ್​ನಿಂದ ಮೆಸೇಜ್ ಕಳುಹಿಸಿದರೆ ಮಾತ್ರ ಸಿಲಿಂಡರ್ ಬುಕ್ ಆಗಲಿದೆ. ಅಥವಾ ನಿಮಗೆ ನೀಡಲಾದ ಇಂಡೇನ್​ನ ಬುಕ್​ನಲ್ಲಿರುವ ಐವಿಆರ್​ಎಸ್ ಕಸ್ಟಮರ್ ಐಡಿ ಮೂಲಕವೂ ಸಿಲಿಂಡರ್ ಬುಕ್ ಮಾಡಬಹುದು.

Copyright © All rights reserved Newsnap | Newsever by AF themes.
error: Content is protected !!