ಬೊಮ್ಮಾಯಿ ಸಂಪುಟ ರಚನೆಗೆ ಸಿದ್ದತೆ – ಪಟ್ಟಿ ಫೈನಲ್‍ಗೊಳಿಸಲು ಸರ್ಕಸ್

Team Newsnap
1 Min Read
BJP Parva begins in Old Mysore Province - CM Bommai ಹಳೇ ಮೈಸೂರು ಪ್ರಾಂತದಲ್ಲಿ ಬಿಜೆಪಿ ಪರ್ವ ಆರಂಭ - ಸಿಎಂ ಬೊಮ್ಮಾಯಿ

ಕಳೆದ. 6 – 7 ದಿನಗಳಿಂದ ನಡೆಯುತ್ತಿರುವ ಸಂಪುಟ ಸರ್ಕಸ್ ಸೋಮವಾರ ಅಂತ್ಯ ಗೊಳ್ಳುವ‌ ಸಾಧ್ಯತೆ ಇದೆ.

ಸಂಪುಟ ಪಟ್ಟಿ ಭಾನುವಾರ ರಾತ್ರಿಯೇ ಆಖೈರು ಆಗಿರುವ ಸಾಧ್ಯತೆ ಇದೆ.

ಹೈಕಮಾಂಡ್ ಸೂಚನೆ ಮೇರೆಗೆ ಸಂಭಾವ್ಯರ ಪಟ್ಟಿಯೊಂದಿಗೆ ನಿನ್ನೆ (ಭಾನುವಾರ) ಸಂಜೆ ದೆಹಲಿಗೆ ತೆರಳಿದ ಸಿಎಂ ಬಸವರಾಜ ಬೊಮ್ಮಾಯಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ. ಈ ವೇಳೆ ಸಂಪುಟ ಪಟ್ಟಿಯನ್ನು ಬಸವರಾಜ ಬೊಮ್ಮಾಯಿ ಫೈನಲ್ ಮಾಡಿಕೊಂಡು ಇಂದು ಬೆಂಗಳೂರಿಗೆ ವಾಪಸ್ ಆಗಲಿದ್ದಾರೆ.

ಇಂದು ಅಥವಾ ನಾಳೆ ಸಂಜೆಯೇ ನೂತನ ಸಂಪುಟ ಅಸ್ತಿತ್ವಕ್ಕೆ ಬರಲಿದೆ. ಈ ಬೆಳವಣಿಗೆ ಸಚಿವ ಸ್ಥಾನದ ಆಕಾಂಕ್ಷಿಗಳ ಲಾಬಿ ಮಾತ್ರ ಹೆಚ್ಚಾಗಿದೆ.

ಕಳೆದ ಬಾರಿ ಸಿಕ್ಕಂತೆ ಈ ಬಾರಿ ಬೆಂಗಳೂರಿನ ಶಾಸಕರಿಗೆ ಹೆಚ್ಚು ಪ್ರಾತಿನಿಧ್ಯ ಸಿಗೋದು ಅನುಮಾನ. ಬಿಎಸ್‍ವೈ ಸಂಪುಟದಲ್ಲಿ ಬೆಂಗಳೂರಿನ 8 ಸಚಿವರಿದ್ದರು. ಬೊಮ್ಮಾಯಿ ಸಂಪುಟದಲ್ಲಿ 6 ಮಂದಿ ಬೆಂಗಳೂರಿನ ಶಾಸಕರಿಗೆ ಮಂತ್ರಿ ಭಾಗ್ಯ ಎನ್ನಲಾಗಿದೆ.

ಬೊಮ್ಮಾಯಿ ಸಂಪುಟದಲ್ಲಿ ಮಂತ್ರಿ ಭಾಗ್ಯ ಯಾರಿಗೆ?ಲೆಕ್ಕಾಚಾರದ ಪಟ್ಟಿ:

  • ಅಶ್ವತ್ಥ ನಾರಾಯಣ್- ಮಲ್ಲೇಶ್ವರಂ ಶಾಸಕ
  • ಶ್ರೀರಾಮುಲು-ಮೊಳಕಾಲ್ಮೂರು ಶಾಸಕ
  • ಅರವಿಂದ್ ಲಿಂಬಾವಳಿ- ಮಹದೇವಪುರ ಶಾಸಕ
  • ಮಾಧುಸ್ವಾಮಿ-ಚಿಕ್ಕನಾಯಕನ
    ಹಳ್ಳಿ ಶಾಸಕ
  • ಮುರುಗೇಶ್ ನಿರಾಣಿ-ಬೀಳಗಿ ಶಾಸಕ
  • ಮುನಿರತ್ನ-ಆರ್.ಆರ್.ನಗರ ಶಾಸಕ
  • ಬಿ.ಸಿ.ಪಾಟೀಲ್-ಹಿರೇಕೆರೂರು ಶಾಸಕ
  • ಬೈರತಿ ಬಸವರಾಜು-ಕೆಆರ್ ಪುರಂ ಶಾಸಕ
  • ಡಾ.ಕೆ.ಸುಧಾಕರ್-ಚಿಕ್ಕಬಳ್ಳಾಪುರ ಶಾಸಕ
  • ಎಸ್.ಟಿ.ಸೋಮಶೇಖರ್-
    ಯಶವಂತಪುರ ಶಾಸಕ
  • ಅರವಿಂದ ಬೆಲ್ಲದ್-ಧಾರವಾಡ ಪಶ್ಚಿಮ ಶಾಸಕ
  • ಉಮೇಶ್ ಕತ್ತಿ-ಹುಕ್ಕೇರಿ ಶಾಸಕ
  • ವಿ.ಸೋಮಣ್ಣ-ಗೋವಿಂದರಾಜ
    ನಗರ ಶಾಸಕ,
  • ಸುನಿಲ್ ಕುಮಾರ್-ಕಾರ್ಕಳ ಶಾಸಕ,
  • ಎಸ್.ಅಂಗಾರ-ಸುಳ್ಯ ಶಾಸಕ
Share This Article
Leave a comment