ಈ ಹಿಂದೆ ಮೀಟೂ ಆರೋಪ ಮಾಡಿ ಬಾಲಿವುಡ್ ನಲ್ಲಿ ಭಾರೀ ಬಿರುಗಾಳಿ ಎಬ್ಬಿಸಿದ್ದ ತನುಶ್ರೀ ದತ್ತ, ಇದೀಗ ಮತ್ತೊಮ್ಮೆ ಗುಡುಗಿದ್ದಾಳೆ. ಮೀಟೂ ಆರೋಪ ಮಾಡಿದ್ದಕ್ಕೆ ತನಗಾದ ಅನ್ಯಾಯವನ್ನು ಮತ್ತೆ ತೆರೆದಿಟ್ಟಿದ್ದಾರೆ. ಈಗ ಬಾಲಿವುಡ್ ಮಾಫಿಯಾ ಬಗ್ಗೆ ಗುಡುಗಿದ್ದಾರೆ
ತನುಶ್ರೀ ದತ್ತ ಮೊದಲ ಬಾರಿಗೆ ಬಾಲಿವುಡ್ ನಲ್ಲಿ ಮೀಟೂ ಬಿರುಗಾಳಿಯನ್ನು ಎಬ್ಬಿಸಿದ ನಟಿ. ಬಾಲಿವುಡ್ ನ ಅನೇಕ ಕಲಾವಿದರ ಮತ್ತು ತಂತ್ರಜ್ಞರ ಬಣ್ಣ ಬಯಲು ಮಾಡಿದ್ದರು. ಈ ಕುರಿತು ಅವರು ಕಾನೂನು ಕ್ರಮಕ್ಕೂ ಮುಂದಾದರು. ಶಿಕಾರಿಪುರದಿಂದಲೇ ವಿಜಯೇಂದ್ರ ಸ್ಪರ್ಧೆ-ಕ್ಷೇತ್ರ ತ್ಯಾಗ ಮಾಡಿದ ಮಾಜಿ ಸಿಎಂ ಯಡಿಯೂರಪ್ಪ
ಆರೋಪ ಪ್ರತ್ಯಾರೋಪಗಳು ನಡೆದು ಆನಂತರ ಅನೇಕರು ಇವರಿಗೆ ಕಿರುಕುಳ ನೀಡಿದರಂತೆ. ಬಾಲಿವುಡ್ ನಲ್ಲಿ ಬೆಳೆಯಲಿಕ್ಕೆ ಬಿಡಲಿಲ್ಲವಂತೆ. ಬಾಲಿವುಡ್ ಮಾಫಿಯಾ ತಮ್ಮ ವೃತ್ತಿ ಬದುಕನ್ನೇ ಕತ್ತಲಿನಲ್ಲಿ ಇಟ್ಟಿತ್ತು ಎಂದು ಹೇಳಿಕೊಂಡಿದ್ದಾರೆ.
ಬಾಲಿವುಡ್ ಮಾಫಿಯಾದಿಂದ ಬಿಡಿಸಿಕೊಳ್ಳುವುದು ಅಷ್ಟೊಂದು ಸುಲಭವಲ್ಲ. ಅವರು ಹೇಳಿದಂತೆ ಕೇಳಿದರೆ, ಯಾರು ಬೇಕಾದರೂ ಸ್ಟಾರ್ ನಟಿಯರು ಆಗಬಹುದು ಎಂದು ಕೆಲವರನ್ನು ಮತ್ತೆ ಟೀಕಿಸಿದ್ದಾರೆ. ಆದರೆ, ಯಾವ ಮಾಫಿಯಾಗೂ ನಾನು ತಲೆಬಾಗದೇ ಇರುವ ಕಾರಣಕ್ಕಾಗಿ ನಾನಾ ರೀತಿಯ ಕಿರುಕುಳವನ್ನು ಅನುಭವಿಸಬೇಕಾಯಿತು ಎಂದು ಹೇಳಿದ್ದಾರೆ. ಇವತ್ತಿಗೂ ಅವರು ಮೀಟು ಪ್ರಕರಣದಿಂದಾಗಿ ಸಂಕಟಗಳನ್ನು ಅನುಭವಿಸುವುದು ತಪ್ಪಿಲ್ಲ ಎಂದಿದ್ದಾರೆ ತನುಶ್ರೀ.
- 10 ಸಾವಿರ ಕೋಟಿ ಕೈಗಾರಿಕೆ ಸ್ಥಾಪನೆ: ಪ್ರಸ್ತಾವನೆಗೆ ಉನ್ನತ ಮಟ್ಟದ ಸಮಿತಿ ಒಪ್ಪಿಗೆ
- ನಾನೊಬ್ಬ ರೈತ (ರೈತ ದಿನಾಚರಣೆಯ ಪ್ರಯುಕ್ತ )
- ಹೊರರಾಜ್ಯದ ಯುವತಿಯರನ್ನ ಕರೆಸಿ ಹೈಟೆಕ್ ವೇಶ್ಯಾವಾಟಿಕೆ ದಂಧೆ: ಆರೋಪಿ ಬಂಧನ
- ಬೆಂಗಳೂರಿನಲ್ಲಿ ಮಹಿಳೆಗೆ 30 ಲಕ್ಷ ರೂ. ವಂಚನೆ!
- ಎಪಿಗಾಮಿಯಾ ಸಹ-ಸಂಸ್ಥಾಪಕ ರೋಹನ್ ಮಿರ್ಚಂದಾನಿ ನಿಧನ
More Stories
ಬಿಗ್ ಬಾಸ್ ತೆಲುಗು ಗೆದ್ದ ಮೈಸೂರಿನ ನಿಖಿಲ್ ಮಳಿಯಕ್ಕಲ್
ವಿಶ್ವದಾಖಲೆ ತಬಲಾ ವಾದಕ ಉಸ್ತಾದ್ ಜಾಕಿರ್ ಹುಸೇನ್ ವಿಧಿವಶ
ಕಾಲ್ತುಳಿತದಲ್ಲಿ ಮಹಿಳೆ ಸಾವು: ನಟ ಅಲ್ಲು ಅರ್ಜುನ್ ಬಂಧನ