February 24, 2026

Newsnap Kannada

The World at your finger tips!

kishor nata

ಕೊರೊನಾ ಸೋಂಕಿನಿಂದ ಬಾಲಿವುಡ್ ನಟ ಕಿಶೋರ್​ ನಂದಲಸ್ಕರ್​ ನಿಧನ

Spread the love

ಹಿಂದಿ ಹಾಗೂ ಮರಾಠಿ ಚಿತ್ರರಂಗದ ಹಿರಿಯ ನಟ ಕಿಶೋರ್ ನಂದಲಸ್ಕರ್ (81) ಕೊರೊನಾದಿಂದ ಮುಂಬೈನ ಥಾಣೆಯಲ್ಲಿ ನಿಧನರಾಗಿದ್ದಾರೆ.

ಕಿಶೋರ್ ನಂದಲಸ್ಕರ್ ಏಪ್ರಿಲ್​ 14ರಿಂದ ಕೊರೊನಾ ಸೋಂಕಿನಿಂದ ಬಳಲುತ್ತಿದ್ದರು. ಥಾಣೆಯ ಕೋವಿಡ್ -19 ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ರು. ಆದರೆ ಉಸಿರಾಟ ತೊಂದರೆಯಿಂದ ಅವರು ಕೊನೆಯುಸಿರೆಳೆದಿದ್ದಾರೆ.

ಮರಾಠಿ ಚಿತ್ರದ ಮೂಲಕ ಸಿನಿರಂಗಕ್ಕೆ ಪಾದಾರ್ಪಣೆ ಮಾಡಿದ್ದ ಕಿಶೋರ್ ಅವರು ಬಾಲಿವುಟ್​ನ ವಾಸ್ತವ್, ಸಿಂಗಮ್, ಸಿಂಬಾ ಸೇರಿದಂತೆ ಹಲವು ಚಿತ್ರಗಳಲ್ಲಿ ವಿಶೇಷ ಪಾತ್ರಗಳಲ್ಲಿ ನಟಿಸಿದ್ದಾರೆ.

error: Content is protected !!