January 29, 2026

Newsnap Kannada

The World at your finger tips!

82e7ba74 4f7c 4294 a924 cff3cc6705bb

ಬಾಲಿವುಡ್ ಖ್ಯಾತ ನಟ ಫರಾಜ್ ಖಾನ್ ಬೆಂಗಳೂರಿನ ಆಸ್ಪತ್ರೆಯಲ್ಲಿ ನಿಧನ

Spread the love

‘ಮೆಹಂದಿ’, ‘ಫರೆಬ್‌’ ಮುಂತಾದ ಹಿಂದಿ ಸಿನಿಮಾಗಳಲ್ಲಿ ಹೀರೋ ಆಗಿ ನಟಿಸಿದ್ದ ಫರಾಜ್‌ ಖಾನ್‌ ಬುಧವಾರ (ನ.4) ಕೊನೆಯುಸಿರೆಳೆದ್ದಾರೆ. ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ.

ಈ ಸುದ್ದಿಯನ್ನು ಬಾಲಿವುಡ್‌ ನಿರ್ದೇಶಕಿ/ನಿರ್ಮಾಪಕಿ ಪೂಜಾ ಭಟ್‌ ಖಚಿತಪಡಿಸಿದ್ದಾರೆ. ‘ಫರಾಜ್‌ ಖಾನ್‌ ನಮ್ಮೆಲ್ಲರನ್ನು ಬಿಟ್ಟುಹೋದರು ಎಂಬುದನ್ನು ತಿಳಿಸಲು ತುಂಬ ನೋವಾಗುತ್ತಿದೆ. ಅವರಿಗೆ ಅಗತ್ಯ ಇದ್ದಾಗ ಸಹಾಯ ಮಾಡಿದ ಮತ್ತು ಶುಭ ಹಾರೈಸಿದ್ದ ಎಲ್ಲರಿಗೂ ಧನ್ಯವಾದಗಳು. ಅವರ ಕುಟುಂಬದವರಿಗಾಗಿ ಪ್ರಾರ್ಥಿಸಿ. ಅವರ ಅಗಲಿಕೆಯಿಂದ ಆದ ನಷ್ಟವನ್ನು ತುಂಬಲು ಸಾಧ್ಯವಿಲ್ಲ’ ಎಂದು ಪೂಜಾ ಭಟ್‌ ಟ್ವೀಟ್‌ ಮಾಡಿದ್ದಾರೆ.

ಶ್ವಾಸಕೋಶದ ಇನ್‌ಫೆಕ್ಷನ್‌ನಿಂದ ಬಳಲುತ್ತಿರುವ ಫರಾಜ್‌ ಖಾನ್‌ ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತೀವ್ರ ಕೆಮ್ಮಿನಿಂದ ಬಳಲುತ್ತಿರುವ ಅವರು ಸಾವು-ಬದುಕಿನ ನಡುವೆ ಹೋರಾಡುತ್ತಿದ್ದರು. ಕುಟುಂಬದವರ ಬಳಿ ಇದ್ದ ಹಣವೆಲ್ಲ ಖಾಲಿ ಆಗಿ, ಚಿಕಿತ್ಸೆಗಾಗಿ ಇನ್ನೂ 25 ಲಕ್ಷ ರೂ. ಬೇಕಾಗಿದೆ ಎಂದು ಫರಾಜ್‌ ಕುಟುಂಬದವರು ಮನವಿ ಮಾಡಿಕೊಂಡಿದ್ದರು. ಅದಕ್ಕೆ ಸಲ್ಮಾನ್‌ ಖಾನ್‌, ಫೂಜಾ ಭಟ್‌ ಮುಂತಾದ ಸೆಲೆಬ್ರಿಟಿಗಳು ಸ್ಪಂದಿಸಿದ್ದರು. ಕಡೆಗೂ ಫರಾಜ್‌ ಬದುಕುಳಿಯಲಿಲ್ಲ.

ಕಳೆದ 1 ವರ್ಷದಿಂದಲೂ ಫರಾಜ್‌ಗೆ ತೀವ್ರ ಕೆಮ್ಮು ಇತ್ತು. ಆಸ್ಪತ್ರೆಗೆ ದಾಖಲಿಸಿದ ಬಳಿಕ ಶ್ವಾಸಕೋಶ ಮಾತ್ರವಲ್ಲದೆ ಮಿದುಳಿನಲ್ಲಿಯೂ ಇನ್‌ಫೆಕ್ಷನ್‌ ಆಗಿರುವುದು ಗೊತ್ತಾಯಿತು. ಹಲವು ದಿನಗಳಿಂದ ಅವರು ವೆಂಟಿಲೇಟರ್‌ನಲ್ಲಿ ಇದ್ದರು. ಚಿಕಿತ್ಸೆಗೆ ಸ್ಪಂದಿಸುತ್ತಿದ್ದರಾದರೂ ಅವರಿಗೆ ಪ್ರಜ್ಞೆ ಬಂದಿರಲಿಲ್ಲ ಎಂಬ ಮಾಹಿತಿಯನ್ನು ಫರಾಜ್‌ ಸಹೋದರ ಫಹ್ಮಾನ್‌ ಖಾನ್‌ ಹಂಚಿಕೊಂಡಿದ್ದರು

error: Content is protected !!