January 28, 2026

Newsnap Kannada

The World at your finger tips!

karan12

ಬಾಲಿವುಡ್ ತಾರೆಯರಿಗೂ ಡ್ರಗ್ಸ್ ಲಿಂಕ್ ದೀಪಿಕಾ, ಕರಣ್, ಶಾಹಿದ್ ಡ್ರಗ್ಸ್ ಸೇವನೆ?

Spread the love

ಬಾಲಿವುಡ್ ನಿರ್ಮಾಪಕ-ನಿರ್ದೇಶಕ ಕರಣ್ ಜೋಹರ್ ಸೇರಿದಂತೆ ನಟಿ ದೀಪಿಕಾ ಪಡುಕೋಣೆ, ನಟರಾದ ಶಾಹಿದ್ ಕಪೂರ್, ಅರ್ಜುನ್ ಕಪೂರ್, ವಿಕ್ಕಿ ಕೌಶಲ್ ಮುಂತಾದವರ ಮೇಲೆ ಶಿರೋಮಣಿ ಅಕಾಲಿದಳದ ಮುಖಂಡ ಮಜಿಂದರ್ ಸಿಂಗ್ ಸಿರ್ಸಾ ಡ್ರಗ್ಸ್ ಸೇವನೆಯ ಆರೋಪವನ್ನು ಮಾಡಿದ್ದಾರೆ.

‘೨೦೧೯ರಲ್ಲಿ‌ ಕರಣ್ ಜೋಹರ್ ಪಾರ್ಟಿಯೊಂದನ್ನು ಆಯೋಜಿಸಿದ್ದರು. ಅದರಲ್ಲಿ ಶಾಹಿದ್, ದೀಪಿಕಾ, ಅರ್ಜುನ್ ಕಪೂರ್, ವಿಕ್ಕಿ ಕೌಶಲ್ ಮುಂತಾದವರು ಭಾಗವಹಿಸಿದ್ದರು. ಪಾರ್ಟಿಯ ವಿಡಿಯೋದಲ್ಲಿ ಅವರ ನಡುವಳಿಕೆಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಅವರು ಮಾದಕವಸ್ತು‌ ಸೇವನೆ ಮಾಡಿರುವುದು ಗೊತ್ತಾಗುತ್ತದೆ.’ ಎಂದು‌ ಆರೋಪಿಸಿ‌ ದೆಹಲಿಯಲ್ಲಿ ಮಾದಕವಸ್ತು ನಿಯಂತ್ರಣ ಬ್ಯುರೋ ಮುಖ್ಯಸ್ಥ ರಾಕೇಶ್ ಆಸ್ತಾನಾ ಅವರನ್ನು ಭೇಟಿ‌ ಮಾಡಿ ದೂರು ನೀಡಿದ್ದಾರೆ.

ಪಾರ್ಟಿಯ ವಿಡೀಯೋವನ್ನು ಟ್ಟಿಟರ್ ನಲ್ಲಿ‌ ಹಂಚಿಕೊಂಡಿರುವ ಮುಜಿಂದರ್ ‘ವಿಡೀಯೋದಲ್ಲಿ‌ ಕಾಣುತ್ತಿರುವವರನ್ನು ನೆನಪಿನಲ್ಲಿಟ್ಟುಕೊಳ್ಳಿ.‌ ಕೆಲವೇ ದಿನಗಳಲ್ಲಿ ಅವರನ್ನು ಡ್ರಗ್ಸ್ ಎನ್ ಸಿಬಿ‌ಯವರು ಬಂಧಿಸಲಿದ್ದಾರೆ’ ಎಂದು ಬರೆದುಕೊಂಡಿದ್ದಾರೆ.

error: Content is protected !!