ಬೆಂಗಳೂರು : ಇಂದು ಬೆಳಗ್ಗೆ 10 ಗಂಟೆಗೆ ಮಹಿಳೆ ಮೇಲೆ BMTC ಬಸ್ನಲ್ಲಿ ಕಂಡಕ್ಟರ್ ಹಲ್ಲೆ ಮಾಡಿರುವ ವೀಡಿಯೊ ವೈರಲ್ ಆಗಿದೆ.
ಮಹಿಳೆ ಮತ್ತು ಕಂಡಕ್ಟರ್ (Conductor) ನಡುವೆ ಟಿಕೆಟ್ ವಿಚಾರವಾಗಿ ಗಲಾಟೆ ನಡೆದಿದ್ದು ,ಈ ವೇಳೆ ಕೋಪಗೊಂಡ ಕಂಡಕ್ಟರ್ ಮಹಿಳೆ ಮೇಲೆ ಹಲ್ಲೆ ನಡೆಸಿದ್ದಾರೆ.
ಬಸ್ನಲ್ಲಿದ್ದ ಪ್ರಯಾಣಿಕರ ಮೊಬೈಲ್ನಲ್ಲಿ ಈ ದೃಶ್ಯಗಳು ಸೆರೆಯಾಗಿದ್ದು ,ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಐಪಿಸಿ 354A ಅಡಿ ಎಫ್‌ಐಆರ್ (FIR) ದಾಖಲಾಗಿದೆ.
ನನ್ನ ಮೇಲೆ ಹೇಗೆ ಕೈ ಮಾಡಿದೆ ಅಂತ ಕಣ್ಣೀರು ಹಾಕುತ್ತಾ ಮಹಿಳೆ ಪ್ರಶ್ನೆ ಮಾಡಿದ್ದು ,ಇದೇ ವೇಳೆ ಮಹಿಳೆ ಸಹ ಕಂಡಕ್ಟರ್ ಕೆನ್ನೆಗೆ ಬಾರಿಸಿಸಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.ಇದರಿಂದ ಮತ್ತಷ್ಟು ಕೋಪಗೊಂಡ ಕಂಡಕ್ಟರ್ ಹಲ್ಲೆ ನಡೆಸಿದ್ದಾದ್ದಾರೆ.
ಬಸ್ನಲ್ಲಿದ್ದ ಇತರ ಪ್ರಯಾಣಿಕರು ಮಹಿಳೆಯ ರಕ್ಷಣೆಗೆ ಮುಂದಾಗಿದ್ದಾರೆ .ಈಜಲು ನದಿಗೆ ಇಳಿದಿದ್ದ ಮೂವರು ಯುವಕರು ನೀರು ಪಾಲು – ಓರ್ವನ ಮೃತದೇಹ ಪತ್ತೆ
ಇನ್ನು . ಹಲ್ಲೆಗೊಳಗಾದ ಮಹಿಳೆ ಯಾರು? ಕಂಡಕ್ಟರ್ ಯಾರು? ಎಂಬುದರ ಬಗ್ಗೆ ನಿಖರ ಮಾಹಿತಿ ಲಭ್ಯವಿಲ್ಲ.
More Stories
ಓದಿನ ಮಹತ್ವ
ಕುಂಭಮೇಳ ಪ್ರಯಾಣಿಕರಿಗೆ ಸುವಾರ್ತೆ: ಮೈಸೂರು-ಪ್ರಯಾಗ್ ರಾಜ್ ವಿಶೇಷ ರೈಲು ಸೇವೆ
ಮಂಡ್ಯದಲ್ಲಿ ಭೀಕರ ಅಪಘಾತ: ಕಾರು-ಲಾರಿ ಡಿಕ್ಕಿಯಾಗಿ ಮೂವರು ವಿದ್ಯಾರ್ಥಿ ಸಾವು