ಶಿವಸೇನೆ ಹಾಗೂ ಮಹಾರಾಷ್ಟ್ರ ಸರ್ಕಾರದ ವಿರುದ್ಧ ಸೆಡ್ಡು ಹೊಡೆದ ನಟಿ ಕಂಗನಾ ಬಂಗಲೆಯ ಸ್ವಲ್ಪ ಭಾಗವನ್ನು ಮುಂಬೈಯ ಬಿಎಂಸಿ ‘ಅಕ್ರಮವಾಗಿ ಕಟ್ಟಲ್ಪಟ್ಟ ಭಾಗ’ ಎಂದು ಹೇಳಿ ಕೆಡವಿತ್ತು. ಬಂಗಲೆಯನ್ನು ಕೆಡವುದನ್ನು ನಿಲ್ಲಿಸಲು ಕಂಗನಾ ನ್ಯಾಯಾಲಯದ ಮೊರೆ ಹೋಗಿ ತಡೆಯಾಜ್ಞೆಯನ್ನೂ ತಂದಿದ್ದರು.
ಇದೀಗ ಕಂಗನಾ ತಮ್ಮ ಬಂಗಲೆಯನ್ನು ಹಾಳು ಮಾಡಿದ್ದಕ್ಕೆ ಬಿಎಂಸಿಗೆ ೨ ಕೋಟಿ ರು ನಷ್ಟ ಪರಿಹಾರ ತುಂಬಿಕೊಡಲು ಕೇಳಿದ್ದಾರೆ.
ಈ ಕುರಿತು ಮುಂಬೈ ಹೈ ಕೋರ್ಟ್ ಗೆ ಪಾಲಿಕೆ ವಿರುದ್ಧ ಈ ಹಿಂದೆ ಸಲ್ಲಿಸಿದ್ದ ಅರ್ಜಿಗೆ ಕೆಲವೊಂದು ಹೊಸ ಅಂಶಗಳನ್ನು ಸೇರಿಸಿದ್ದಾರೆ. ಅಂಶಗಳ ಸೇರಿಸುವಿಕೆಯಿಂದ ೨೯ ಪುಟಗಳ ಅರ್ಜಿ ಈಗ ೯೨ ಪುಟಗಳ ಅರ್ಜಿಯಾಗಿದೆ.
‘ಬಿಎಂಸಿಯವರು ಬಂಗಲೆಯ ಶೇ.೪೦ ಭಾಗವನ್ನು ಕೆಡವಿದ್ದಾರೆ. ಇದರಿಂದ ಬೆಲೆಬಾಳುವ ವಸ್ತುಗಳು, ಸೋಫಾ, ಕಲಾಕೃತಿಗಳು ಸೇರಿ ಸುಮಾರು ೨ ಕೋಟಿಯ ನಷ್ಟ ನನಗಾಗಿದೆ. ಹಾಗಾಗಿ ಪಾಲಿಗೆ ನನಗೆ ೨ ಕೋಟಿ ನಷ್ಟ ತುಂಬಿಕೊಡಬೇಕು’ ಎಂಬುದು ಹೊಸ ಅಂಶಗಳ ಸಾರಾಂಶ.


More Stories
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
Karnataka Budget 2025-26 : ಶಕ್ತಿ ಯೋಜನೆಗೆ 5,300 ಕೋಟಿ ಅನುದಾನ
ಪೊಲೀಸ್ ಅಧಿಕಾರಿಯ ಕಿರುಕುಳಕ್ಕೆ ಮನನೊಂದು ವ್ಯಕ್ತಿ ಆತ್ಮಹತ್ಯೆ ಆರೋಪ