January 13, 2025

Newsnap Kannada

The World at your finger tips!

kb

ಜೆಡಿಎಸ್‌ ಗೂ ಒಮ್ಮೆ ಆಶೀರ್ವಾದ ಮಾಡಿ: ಯಶಸ್ವಿಯಾಗದಿದ್ರೆ ಪಕ್ಷ ವಿಸರ್ಜಿಸುವೆ – ಕುಮಾರಸ್ವಾಮಿ

Spread the love

ಸ್ವತಂತ್ರವಾಗಿ 5 ವರ್ಷ ಅಧಿಕಾರ ಮಾಡಲು ಅವಕಾಶ ನೀಡಿ. ಇನ್ನೊಬ್ಬರ ಮನೆ ಬಾಗಿಲಿಗೆ ಹೋಗೋ ತರಹ ಮಾಡಬೇಡಿ ಎಂದು ಮಾಜಿ ಮುಖ್ಯ ಮಂತ್ರಿ ಕುಮಾರಸ್ವಾಮಿ ಮನವಿ ಮಾಡಿದರು.

ಬಾಗಲಕೋಟೆ ಜಿಲ್ಲೆಯಲ್ಲಿ ನಡೆದ ಜೆಡಿಎಸ್ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಕುಮಾರಸ್ವಾಮಿ, 5 ವರ್ಷದ ಸರ್ಕಾರ ಕೊಟ್ರೆ ಹಲವು ಯೋಜನೆ ತರುವೆ. ಒಂದು ವೇಳೆ, ನಾನು 5 ವರ್ಷದಲ್ಲಿ ಯಶಸ್ವಿಯಾಗದಿದ್ದರೆ ಪಕ್ಷವನ್ನೇ ವಿಸರ್ಜನೆ ಮಾಡಿ ರಾಜ್ಯದ ಜನರಿಗೆ ಕ್ಷಮೆ ಕೇಳುವೆ. ಜನರಿಗೆ ನಿಮಗ್ಯಾರಿಗೂ ಮುಖ ತೋರಿಸಲ್ಲ. ಇನ್ನೆಂದೂ ನಿಮ್ಮ ಮುಂದೆ ಬರೋದಿಲ್ಲವೆಂದು ಕುಮಾರಸ್ವಾಮಿ ಪ್ರಕಟಿಸಿದರು.

kb1

ನಾನು ಈಗಾಗಲೇ ಎರಡು ಬಾರಿ ಮುಖ್ಯಮಂತ್ರಿ ಆಗಿದ್ದೇನೆ. ಕೇವಲ ಅಧಿಕಾರಕ್ಕಾಗಿ ಈ ಮಾತು ಹೇಳ್ತಿಲ್ಲ. 5 ವರ್ಷ ಅಧಿಕಾರ ನಡೆಸಲು ಕಾಂಗ್ರೆಸ್‌, ಬಿಜೆಪಿಗೆ ಅವಕಾಶ ಕೊಟ್ಟಿದ್ದೀರಿ. 5 ವರ್ಷ ಅಧಿಕಾರ ನಡೆಸಲು 2 ಪಕ್ಷಕ್ಕೆ ಅವಕಾಶ ನೀಡಿದ್ದೀರಿ. ಜೆಡಿಎಸ್ ಪಕ್ಷಕ್ಕೂ ಒಮ್ಮೆ ಆಶೀರ್ವಾದ ಮಾಡಿ ಎಂದು ಹೆಚ್‌.ಡಿ.ಕುಮಾರಸ್ವಾಮಿ ಹೇಳಿದರು.

ನಾವು ಬಿಜೆಪಿ ಬಿ ಟೀಂ ಅಲ್ಲ, ನಾವು ಯಾರ ಹಂಗಿನಲ್ಲಿಲ್ಲ:

ನಾವು ಬಿಜೆಪಿ ಬಿ ಟೀಂ ಅಲ್ಲ. ನಾವು ಯಾರ ಹಂಗಿನಲ್ಲಿಲ್ಲ.‌ ಅಲ್ಪಸಂಖ್ಯಾತ ಬಂಧುಗಳೇ ಕಾಂಗ್ರೆಸ್​ ಪಕ್ಷವನ್ನು ನಂಬಬೇಡಿ. ನನಗೆ ಒಂದು ಅವಕಾಶ ಕೊಡಿ, ನಾನೇನು ತಪ್ಪು ಮಾಡಿದ್ದೇನೆ? ನನಗೇಕೆ ಈ ಶಿಕ್ಷೆ? ಪ್ರತಿ ಹಳ್ಳಿ ಹಳ್ಳಿಗೂ ನಾನು ಬರುತ್ತೇನೆ. ಹಳ್ಳಿಕಟ್ಟೆಯಲ್ಲಿ ಕುಳಿತು ನನಗೆ ಶಕ್ತಿಕೊಡಿ ಎಂದು ಕೇಳುತ್ತೇನೆ ಎಂದರು.

Copyright © All rights reserved Newsnap | Newsever by AF themes.
error: Content is protected !!