ಲಕ್ನೋ: ಆಯೋಧ್ಯೆಯ ಶ್ರೀರಾಮ ಜನ್ಮಭೂಮಿ ದೇವಸ್ಥಾನವನ್ನು ಆರ್‌ಡಿಎಕ್ಸ್ ಬಳಸಿ ಸ್ಫೋಟಿಸಿ, ಬಾಬರಿ ಮಸೀದಿಯನ್ನು ಪುನಃ ನಿರ್ಮಾಣ ಮಾಡುವುದಾಗಿ ಬೆದರಿಕೆ ಬಂದಿದ್ದು, ಈ ಕುರಿತು ಅಪರಿಚಿತ ವ್ಯಕ್ತಿಯ ವಿರುದ್ಧ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಸಿಎ ಚಂದನ್ ಕುಮಾರ್ ರೈ ಅವರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
2024ರ ಆಗಸ್ಟ್ 22 ರಂದು ಟ್ರಸ್ಟ್‌ನ ಹೆಲ್ಪ್ ಡೆಸ್ಕ್ ವಾಟ್ಸಾಪ್‌ಗೆ ಬಂದ ಉರ್ದು ಭಾಷೆಯ ಸಂದೇಶದಲ್ಲಿ, ದೇವಸ್ಥಾನವನ್ನು 4000 ಕಿಲೋ ಆರ್‌ಡಿಎಕ್ಸ್ ಬಳಸಿ ಧ್ವಂಸಗೊಳಿಸುವುದಾಗಿ ಎಚ್ಚರಿಸಲಾಗಿದೆ. ತನಿಖೆಯಂತೆ, ಬಿಹಾರ ಪ್ರಾಂತ್ಯದ ಭಾಗಲ್ಪುರ ಜಿಲ್ಲೆಯ ಬಾಬರ್ ಗಂಜ್ ನಿವಾಸಿ ಮೊಹಮ್ಮದ್ ಅಮನ್ ಎಂಬ ವ್ಯಕ್ತಿಯ ಹೆಸರು ಈ ಪ್ರಕರಣದಲ್ಲಿ ಉಲ್ಲೇಖಿಸಲಾಗಿದೆ.
ಈ ಘಟನೆಗೆ ಸಂಬಂಧಿಸಿದಂತೆ, ತನಿಖೆ ನಡೆಸುತ್ತಿರುವ ಇನ್‌ಸ್ಪೆಕ್ಟರ್ ರಜನೀಶ್ ಕುಮಾರ್ ಪಾಂಡೆ ಅವರಿಗೆ ನ್ಯಾಯಾಲಯ ಸಮನ್ಸ್ ಜಾರಿ ಮಾಡಿದ್ದು, ಈಗಾಗಲೇ ಬಂಧನಕ್ಕೊಳಗಾಗಿರುವ ಆರೋಪಿ ಮೊಹಮ್ಮದ್ ಅಮಾನ್ ಅವರ ಜಾಮೀನು ಅರ್ಜಿ ವಿಚಾರಣೆಯ ಸಂದರ್ಭ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಅಶೋಕ್ ಕುಮಾರ್ ದುಬೆ ಅವರು ಈ ಆದೇಶ ಹೊರಡಿಸಿದ್ದಾರೆ.ಇದನ್ನು ಓದಿ –ಚನ್ನಪಟ್ಟಣ ನಗರಸಭೆ ಆಯುಕ್ತ ನಾಗೇಶ್ ಅವರ ಮನೆ ಮೇಲೆ ಲೋಕಾಯುಕ್ತ ದಾಳಿ
ನ್ಯಾಯಾಲಯದ ಆದೇಶದಂತೆ, ತನಿಖೆ ನಡೆಸುತ್ತಿರುವ ಸಬ್ ಇನ್‌ಸ್ಪೆಕ್ಟರ್ ರಜನೀಶ್ ಕುಮಾರ್ ಪಾಂಡೆ ಅವರು ಕೇಸ್ ಡೈರಿ ಮತ್ತು ಸಂಬಂಧಿತ ದಾಖಲೆಗಳೊಂದಿಗೆ ನ್ಯಾಯಾಲಯದ ಮುಂದೆ ಹಾಜರಾಗಬೇಕಾಗಿದೆ.
More Stories
₹5.50 ಲಕ್ಷ ಮೌಲ್ಯದ ಡ್ರಗ್ಸ್ ಜಪ್ತಿ, ಇಬ್ಬರು ಬಂಧನ
ಮುಡಾ ಹಗರಣ: ಸ್ನೇಹಮಯಿ ಕೃಷ್ಣ ಮತ್ತು ಕೈ ಮುಖಂಡ ಲಕ್ಷ್ಮಣ್ ನಡುವೆ ವಾಗ್ವಾದ
ಯೋಗ ಗುರು ಶರತ್ ಜೋಯಿಸ್ ಹೃದಯಾಘಾತದಿಂದ ನಿಧನ