ಪತ್ರಕರ್ತರು ಎಂದು ಹೇಳಿಕೊಂಡು ವೈದ್ಯರೊಬ್ಬರನ್ನು ಬ್ಲಾಕ್‌ಮೇಲ್ ಮಾಡಿ ಹಣ ಕೊಡುವಂತೆ ಒತ್ತಾಯಿಸಿರುವ ಮೂವರು ಯುವತಿ ರನ್ನು ಮೈಸೂರಿನ ಮಂಡಿ ಪೊಲೀಸರು ಬಂಧಿಸಿದ್ದಾರೆ .
ಅಮ್ರಿನ್ ಸಾನಿಯಾ, ಸಾಹಿದ್ ಆಶಿಯಾ ಬಾಯಿ ಎಂಬವರು ಪತ್ರಕರ್ತರು ಎಂದು ಹೇಳಿಕೊಂಡು ಬ್ಲಾಕ್‌ಮೇಲ್ ಮಾಡಿದವರು ಎಂದು ಹೇಳಲಾಗಿದೆ.
ಕೆ.ಆರ್.ಆಸ್ಪತ್ರೆಯ ನ್ಯೂರೋ ಸರ್ಜನ್ ಡಾ.ರಾಜೇಶ್ ಎಂಬವರನ್ನು ನೀವು ರೋಗಿಗಳಿಗೆ ಸರಿಯಾಗಿ ಚಿಕಿತ್ಸೆ ನೀಡುತ್ತಿಲ್ಲ. ಹಣ ಪಡೆಯುತ್ತಿದ್ದೀರಾ. ಈ ಬಗ್ಗೆ ನಮ್ಮ ಬಳಿ ದೂರು ಪತ್ರಗಳು ಮತ್ತು ಸಂಬಂಧಿಸಿದ ವಿಡಿಯೋ ಕ್ಲಿಪ್‌ಗಳು ಇದೆ, ಮಾಧ್ಯಮಗಳಲ್ಲಿ ಪ್ರಸಾರ ಮಾಡುತ್ತೇವೆ. ನಿಮ್ಮ ಹೆಸರು ಹಾಳಾಗುತ್ತದೆ ಎಂದು ಬ್ಲಾಕ್‌ಮೇಲ್ ಮಾಡಿದ್ದಾರೆ.
ಇವೆಲ್ಲವನ್ನೂ ತಡೆಯಬೇಕಾದರೆ 5 ಲಕ್ಷ ರು ನೀಡುವಂತೆ ಬೇಡಿಕೆ ಇಟ್ಟಿದ್ದಲ್ಲದೆ, ಆನಂತರ 2 ಲಕ್ಷ ರೂ. ನೀಡುವಂತೆ ಕೇಳಿದ್ದಾರೆ. ಅಂತಿಮವಾಗಿ 50 ಸಾವಿರ ರೂ. ಅನ್ನು ನೀಡಲು ಒಪ್ಪಿದ್ದಾರೆ.
ಜ.18ರಂದು ವೈದ್ಯರು ಹಣ ನೀಡಲು ಸಂಜೀವಿನಿ ಆಸ್ಪತ್ರೆ ಬಳಿ ಬಂದಾಗ ಅವರ ಮೇಲೆ ಹತ್ತು ಜನರ ಗುಂಪೊಂದು ದಾಳಿ ಮಾಡಲು ಯತ್ನಿಸಿದೆ. ಈ ವೇಳೆ ವೈದ್ಯರು ಅವರಿಂದ ತಪ್ಪಿಸಿಕೊಂಡು ಹೋಗಿ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಸಂಬಂಧ ಮಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- ಮಕ್ಕಳನ್ನು ಕೊಂದು ಆತ್ಮಹತ್ಯೆಗೆ ಶರಣಾದ ದಂಪತಿ
- 2024-25ನೇ ಅತಿಥಿ ಉಪನ್ಯಾಸಕರ ನೇಮಕಾತಿಗೆ ಅರ್ಜಿ ಆಹ್ವಾನ
- 10ನೇ ತರಗತಿ ಪಾಸಾದವರಿಗೆ ರೈಲ್ವೆ ಇಲಾಖೆಯಲ್ಲಿ ಉದ್ಯೋಗ ಅವಕಾಶ
- HMPV ವೈರಸ್ ಕರ್ನಾಟಕಕ್ಕೆ ಪ್ರವೇಶ: ಬೆಂಗಳೂರಿನಲ್ಲಿ 8 ತಿಂಗಳ ಮಗುವಿಗೆ ಸೋಂಕು ದೃಢ
- ಮಳೆ ನಿಂತರೂ ಮರದ ಹನಿ ನಿಲ್ಲದು
More Stories
ಮಕ್ಕಳನ್ನು ಕೊಂದು ಆತ್ಮಹತ್ಯೆಗೆ ಶರಣಾದ ದಂಪತಿ
2024-25ನೇ ಅತಿಥಿ ಉಪನ್ಯಾಸಕರ ನೇಮಕಾತಿಗೆ ಅರ್ಜಿ ಆಹ್ವಾನ
HMPV ವೈರಸ್ ಕರ್ನಾಟಕಕ್ಕೆ ಪ್ರವೇಶ: ಬೆಂಗಳೂರಿನಲ್ಲಿ 8 ತಿಂಗಳ ಮಗುವಿಗೆ ಸೋಂಕು ದೃಢ