February 21, 2026

Newsnap Kannada

The World at your finger tips!

mla

ಮಹಿಳೆಯಿಂದ ಬಿಜೆಪಿ ಶಾಸಕನ ಬ್ಲ್ಯಾಕ್ ಮೇಲ್ : ತಮಿಳುನಾಡಿನಲ್ಲಿ ನಾಲ್ವರ ಬಂಧನ

Spread the love

ರಾಜ್ಯ ರಾಜಕೀಯದಲ್ಲಿ ಪದೇ ಪದೇ ಸಿಡಿ ಕೇಸ್ ಸೇರಿದಂತೆ ಮಹಿಳೆಯರ ಬ್ಲಾಕ್‍ಮೇಲ್ ನಡುವೆ ಇದೀಗ ಮತ್ತೊಂದು ಬ್ಲಾಕ್‍ಮೇಲ್ ಕೇಸ್ ವರದಿಯಾಗಿದೆ.

ಸೇಡಂ ಬಿಜೆಪಿ ಶಾಸಕ ರಾಜ್ ಕುಮಾರ್ ಪಾಟೀಲ್‍ ವಿರುದ್ದ ಮಹಿಳೆಯೊಬ್ಬರು ಬ್ಲಾಕ್ ಮೇಲ್ ಮಾಡಿರುವ ಆರೋಪ ಕೇಳಿ ಬಂದಿದೆ.

ಶಾಸಕರು ಉತ್ತರ ಕರ್ನಾಟಕ ಮೂಲದವರು. ಮಹಿಳೆ ವಿರುದ್ಧ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಈಗಾಗಲೇ ಶಾಸಕರ ದೂರಿನ ಮೇರೆಗೆ ನಾಲ್ವರು ಆರೋಪಿಗಳನ್ನು ಪೊಲೀಸರು ತಮಿಳುನಾಡಿನಲ್ಲಿ ವಶಕ್ಕೆ ಪಡೆದಿದ್ದಾರೆ.

ಸಿಎಂ ಫೇಸ್‍ಬುಕ್ ಪೇಜ್‍ನಲ್ಲಿ ಬಹಿರಂಗವಾಗಿ ಮಹಿಳೆ ಮೆಸೇಜ್ ಮಾಡಿದ್ದರು. ಮಹಿಳೆಯ ಬ್ಲ್ಯಾಕ್‍ಮೇಲ್ ಬೆದರಿಕೆಯಿಂದ ಎಂಎಲ್‍ಎ ದೂರು ನೀಡಿದ್ದಾರೆ.

ಈ ಪ್ರಕರಣ ಸಂಬಂಧ ಮಹಿಳೆಯು ವಕೀಲ ಜಗದೀಶ್ ಜೊತೆ ವಿಧಾನ ಸೌಧ ಪೊಲೀಸ್ ಠಾಣೆಗೆ ತೆರಳಿದ್ದಾರೆ.

error: Content is protected !!