March 15, 2026

Newsnap Kannada

The World at your finger tips!

yogesh

ಬಿಜೆಪಿ ಆಂತರಿಕ ಕಲಹ : ಸಿಪಿವೈ, ಬೆಲ್ಲದ್ ರಾತ್ರಿ ದೆಹಲಿಗೆ ದೌಡು

Spread the love

ರಾಜ್ಯ ಬಿಜೆಪಿ ಆಂತರಿಕ ಕಲಹ ಮತ್ತೆ ತಾರಕಕ್ಕೆ ಏರಿದೆ. ಮುಂದಿನ ಎರಡು ವರ್ಷ ನಾನೇ ಸಿಎಂ ಎಂದು ಯಡಿಯೂರಪ್ಪ ನಿನ್ನೆಯಷ್ಟೇ ಹೇಳಿಕೆ ನೀಡಿದ ಬೆನ್ನಲ್ಲೇ ಬಿಎಸ್ ವೈ ವಿರೋಧಿ ಬಣ ರಾತ್ರಿ ದೆಹಲಿಗೆ ದೌಡಾಯಿಸಿದೆ.

ಸಚಿವ ಸಿ ಪಿ ಯೋಗೇಶ್ವರ್ ಹಾಗೂ ಶಾಸಕ ಅರವಿಂದ್ ಬೆಲ್ಲದ್ ಕಳೆದ ರಾತ್ರಿಯೇ ದೆಹಲಿಗೆ ತೆರಳಿದ್ದಾರೆ. ಇಂದು ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರನ್ನು ಭೇಟಿಯಾಗಿ ತಮ್ಮ ಅತೃಪ್ತಿ, ಅಸಮಾಧಾನ ಹೊರ ಹಾಕುವ ಸಾಧ್ಯತೆ ಇದೆ.

ಕಳೆದ ಬಾರಿಯೂ ಸಿಪಿವೈ ಜೊತೆ ಬೆಲ್ಲದ್ ದೆಹಲಿಗೆ ಹೋಗಿದ್ದರು. ಈಗ ಮತ್ತೆ ಇಬ್ಬರೂ ಜಂಟಿಯಾಗಿ ವಿರೋಧಿ ಕಾರ್ಯಾಚರಣೆ ಆರಂಭಿಸಿರುವ ಹಿನ್ನೆಲೆಯಲ್ಲಿ ಬಿಜೆಪಿ ಆಂತರಿಕ ಕಲಹ ರಾಜಕೀಯ ಕ್ರಾಂತಿ ಮಾಡುವ ಸಾಧ್ಯತೆ ಇದೆ.

ಈ ನಡುವೆ ಜೂನ್ 17 ರಂದು ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ರಾಜ್ಯ ಕ್ಕೆ ಭೇಟಿ ನೀಡುವ ಬೆನ್ನಲ್ಲೇ ಸಿಎಂ ಯಡಿಯೂರಪ್ಪ ವಿರುದ್ಧ ಚಟುವಟಿಕೆಗಳು ಬಿರುಸುಗೊಂಡಿರುವುದರಿಂದ ಮತ್ತೆ ರಾಜ್ಯ ರಾಜಕಾರಣಕ್ಕೆ ರಂಗು ಬರಲಿದೆ.

error: Content is protected !!