January 15, 2025

Newsnap Kannada

The World at your finger tips!

suresh angadi w

ಬೆಳಗಾವಿಗೆ ಮಂಗಳ ಅಂಗಡಿ, ತಿರುಪತಿಗೆ ರತ್ನಪ್ರಭಗೆ ಬಿಜೆಪಿ ಟಿಕೆಟ್

Spread the love

ಏ. 17 ರಂದು ನಡೆಯಲಿರುವ ಲೋಕಸಭಾ, ವಿಧಾನಸಭಾ ಉಪ ಚುನಾವಣೆಗೆ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.

ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ‌ ಅನುಕಂಪ ಗಟ್ಟಿಸಲು ಸುರೇಶ್ ಅಂಗಡಿ ಪತ್ನಿ ಮಂಗಳ‌ ಅವರಿಗೆ ಟಿಕೆಟ್ ನೀಡಲಾಗಿದೆ.

ತಿರುಪತಿ ಲೋಕಸಭಾ ಕ್ಷೇತ್ರಕ್ಕೆ ಕರ್ನಾಟಕದ ಮಾಜಿ ಮುಖ್ಯ ಕಾರ್ಯದರ್ಶಿ ರತ್ನಪ್ರಭ ಅವರಿಗೆ ನೀಡಲಾಗಿದೆ.

ರಾಜ್ಯದ ವಿಧಾನಸಭಾ ಉಪ ಚುನಾವಣೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ

  • ಶರಣು ಸಲಾಗರ್ – ಕರ್ನಾಟಕ ಬಸವಕಲ್ಯಾಣ ಕ್ಷೇತ್ರ
    *ಪ್ರತಾಪ್ ಗೌಡ ಪಾಟೀಲ್- ಕರ್ನಾಟಕ- ಮಸ್ಕಿ ಕ್ಷೇತ್ರ

ಉಪ ಚುನಾವಣೆ ಏಕೆ ?

ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾಗಿದ್ದ ಸಂಸದ ಸುರೇಶ್‌ ಅಂಗಡಿಯವರ ಹಾಗೂ ಬಸವ ಕಲ್ಯಾಣ ವಿಧಾನ ಸಭಾ ಕ್ಷೆತ್ರದಿಂದ ಆಯ್ಕೆಯಾಗಿದ್ದ ಬಿ.ನಾರಾಯಣ ರಾವ್ ಅವರ ನಿಧನದಿಂದ, ಮಸ್ಕಿ ವಿಧಾನ ಸಭಾ ಕ್ಷೇತ್ರದಿಂದ ಪ್ರತಾಪ್ ಗೌಡ ಪಾಟೀಲ್ ರಾಜೀನಾಮೆಯಿಂದ ಉಪ ಚುನಾವಣೆ ನಡೆಯುತ್ತಿದೆ.

ಮತದಾನ, ಏಣಿಕೆ ಯಾವಾಗ ?

ರಾಜ್ಯದ ಒಂದು ಲೋಕಸಭಾ ಕ್ಷೇತ್ರವಾದ ಬೆಳಗಾವಿ ಮತ್ತು ವಿಧಾನ ಸಭಾ ಕ್ಷೇತ್ರಗಳಾದ ಬೀದರ್‌ʼನ ಬಸವ ಕಲ್ಯಾಣ ಮತ್ತು ಮಾಸ್ಕಿ ವಿಧಾನ ಸಭಾ ಕ್ಷೇತ್ರಗಳಿಗೆ ಏಪ್ರಿಲ್‌ 17ರಂದು ಚುನಾವಣೆ ನಡೆಸಲಾಗುವುದು ಎಂದು ಆಯೋಗ ತಿಳಿಸಿದೆ.

ಈ ಚುನಾವಣೆಗಳಿಗೆ ನಾಮಪತ್ರ ಸಲ್ಲಿಕೆಗೆ ಮಾರ್ಚ್‌ 31ರವರೆಗೆ ಕಾಲಾವಾಕಾಶ ನೀಡಲಾಗಿದೆ. ಮೇ 2ರಂದು ಪ್ರಕಟವಾಗಲಿದೆ.

Copyright © All rights reserved Newsnap | Newsever by AF themes.
error: Content is protected !!