ಬಿಜೆಪಿ ನಾಯಕಿ ಖುಷ್ಬೂ ಸುಂದರ್ ಅವರನ್ನು ಮಮಲಪುರಂ ಪೊಲೀಸರು ಬಂಧಿಸಿದ್ದಾರೆ.
ತಮಿಳುನಾಡಿನ ಸಂಸದ ಥೋಲ್ ತಿರುಮಾವಲನ್ ಅವರ ಚಿದಂಬರಂ ಎಂಬಲ್ಲಿರುವ ನಿವಾಸದ ಬಳಿ ಪ್ರತಿಭಟನೆಗೆ ತೆರಳುವಾಗ ಪೊಲೀಸರು ಖುಷ್ಬೂ ಸುಂದರ್ ಹಾಗೂ 16 ಬಿಜೆಪಿ ಕಾರ್ಯಕರ್ತರನ್ನು ಮುತ್ತಕಾಡು ಎಂಬಲ್ಲಿ ಬಂಧಿಸಿ ವಾಹನದಲ್ಲಿ ಕರೆದುಕೊಂಡು ಹೋಗಿದ್ದಾರೆ.
ವಿಡುತಲೈ ಚಿರುಥೈಗಲ್ ಕಡ್ಚಿ ಪಕ್ಷದ ಮುಖ್ಯಸ್ಥ ಹಾಗೂ ತಮಿಳುನಾಡಿನ ಸಂಸದರಾಗಿರುವ ಥೋಲ್ ತಿರುಮಾವಲನ್ ಮಹಿಳೆಯರಿಗೆ ಅವಮಾನ ಮಾಡುವ ರೀತಿಯಲ್ಲಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿರುವ ಬಿಜೆಪಿ ನಾಯಕಿ ಖುಷ್ಬೂ ಸುಂದರ್ ಮುಂಜಾನೆ ಅವರ ನಿವಾಸದ ಮುಂದೆ ಪ್ರತಿಭಟನೆಗೆ ತೆರಳಿದ್ದಾರೆ.
ಇದೇ ವೇಳೆ ವಿಡುತಲೈ ಚಿರುಥೈಗಲ್ ಕಡ್ಚಿ ಪಕ್ಷದ ಕಾರ್ಯಕರ್ತರು ಕೂಡ ಸಂಸದ ತಿರುಮಾವಲನ್ ಪರವಾಗಿ ಹಾಗೂ ಬಿಜೆಪಿ ವಿರುದ್ಧ ತಿರುಮಾವಲನ್ ನಿವಾಸದ ಮುಂದೆ ಪ್ರತಿಭಟನೆ ನಡೆಸುತ್ತಿದ್ದರು. ಈ ಹಿನ್ನೆಲೆ ಗಲಭೆ ಸೃಷ್ಟಿಯಾಗುವ ಸಾಧ್ಯತೆಯನ್ನು ಅರಿತ ಪೊಲೀಸರು ಮುತ್ತಕಾಡು ಎಂಬಲ್ಲಿ ಖೂಷ್ಬು ಅವರ ಕಾರು ತಡೆದು ಅನುಮತಿ ಪತ್ರ ಕೇಳಿದ್ದಾರೆ. ಇನ್ನು ಅನುಮತಿ ಇಲ್ಲವೆಂದು ಖೂಷ್ಬು ಹೇಳಿದಾಗ ಅವರನ್ನು ಹಾಗೂ ಅವರ ಜೊತೆ ಬಂದಿದ್ದ ಬಿಜೆಪಿ ಕಾರ್ಯಕರ್ತರನ್ನು ಬಂಧಿಸಿದ ಪೊಲೀಸರು ವಾಹನದಲ್ಲಿ ಕರೆದುಕೊಂಡು ಹೋಗಿದ್ದಾರೆ.
More Stories
ಮೈಸೂರಿನ ಪ್ರಮುಖ ರಸ್ತೆಗೆ ಸಿಎಂ ಸಿದ್ದರಾಮಯ್ಯ ಹೆಸರು: ಪಾಲಿಕೆ ತೀರ್ಮಾನಕ್ಕೆ ಆಕ್ಷೇಪಣೆಗಳು
10 ಸಾವಿರ ಕೋಟಿ ಕೈಗಾರಿಕೆ ಸ್ಥಾಪನೆ: ಪ್ರಸ್ತಾವನೆಗೆ ಉನ್ನತ ಮಟ್ಟದ ಸಮಿತಿ ಒಪ್ಪಿಗೆ
ಜನವರಿ 23, 24, 25 ರಂದು ಅಂತರಾಷ್ಟ್ರೀಯ ಸಿರಿಧಾನ್ಯ ಮೇಳ ಜರುಗಲಿದೆ: ಎನ್ ಚಲುವರಾಯಸ್ವಾಮಿ