December 19, 2024

Newsnap Kannada

The World at your finger tips!

BJP , Congress , MLC

ಬಿಜೆಪಿ MLC ಎಚ್. ವಿಶ್ವನಾಥ್ ಮತ್ತೆ ಕಾಂಗ್ರೆಸ್ ಸೇರುವ ಸುಳಿವು

Spread the love

ಮಗನಂತೆ ತಂದೆಯೂ ಕೂಡ ಮತ್ತೆ ಕಾಂಗ್ರೆಸ್ ಸೇರುವ ಮುನ್ಸೂಚನೆ ನೀಡಿ ಅಡ್ಡಗೋಡೆ ಮೇಲೆ ದೀಪ ಇಟ್ಟ ಹಾಗೆ ಬಿಜೆಪಿಯ ವಿಧಾನ ಪರಿಷತ್ ಸದಸ್ಯ ಹೆಚ್. ವಿಶ್ವನಾಥ್ ಮಾತನಾಡಿದ್ದಾರೆ. ನನ್ನ ಝಂಡಾ ಬದಲಾಗಬಹುದು ಆದರೆ ನನ್ನ ಅಜೆಂಡಾ ಬದಲಾಗಲು ಸಾಧ್ಯವಿಲ್ಲ ಎಂದು ತಿಳಿಸಿದರು.

ಹುಣಸೂರಿನಲ್ಲಿ ಕೆಂಪೇಗೌಡ ಜಯಂತಿ ವೇಳೆ ಡಿ.ಕೆ. ಶಿವಕುಮಾರ್ ಹಾಗೂ ಬಿಜೆಪಿಯ ವಿಧಾನ ಪರಿಷತ್ ಸದಸ್ಯ ಹೆಚ್. ವಿಶ್ವನಾಥ್ ಸ್ಥಳೀಯ ಶಾಸಕರೊಬ್ಬರ ಮನೆಯಲ್ಲಿ ಊಟ ಮಾಡಿದ ವಿಚಾರವಾಗಿ ಮಾತನಾಡಿದ ಅವರು ಅದರಲ್ಲಿ ಯಾವ ವಿಶೇಷ ಏನೂ ಇಲ್ಲ. ನಾನು, ಡಿ.ಕೆ.ಶಿವಕುಮಾರ್ ಅವರು ಮೊದಲಿನಿಂದಲೂ ಕಾಂಗ್ರೆಸ್‍ನ ಕಾರ್ಯಕರ್ತರಾಗಿದ್ದೆವು. ಈ ಪಕ್ಷದಲ್ಲೇ ಇದ್ದು ಅನೇಕ ಜನಪರ ಕೆಲಸವನ್ನು ಮಾಡಿದ್ದೇವೆ ಎಂದರು.

ಫೋಕ್ಸೋ ಕಾಯ್ದೆಅಡಿ ಮುರುಘಾ ಶ್ರೀಗಳ ಬಂಧನ : ಅಜ್ಞಾತ ಸ್ಥಳದಲ್ಲಿ ವಿಚಾರಣೆ ಸಾಧ್ಯತೆ

ಮುಂದಿನ ನಡೆ ಕಾಂಗ್ರೆಸ್ ನತ್ತವೇ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು, ಯಾರಿಗೆ ಗೊತ್ತು. ಸಂಜೆ ಮಳೆ ಬರಬಹುದು ವಾತಾವರಣವೂ ಬದಲಾಗಬಹುದು. ಒತ್ತಾಯ ಬಂದರೆ ಕಾಂಗ್ರೆಸ್‍ಗೂ ಹೋಗಬಹುದು. ಹೇಳಲಾಗುವುದಿಲ್ಲ. ಹೀಗೆ ಆಗಬೇಕು ಹಾಗೇ ಆಗಬೇಕು ಎಂಬ ನಿರ್ಣಯಗಳು ರಾಜಕಾರಣದಲ್ಲಿಲ್ಲ. ರಾಜಕಾರಣ ಈಗ ಯಾವ ರೀತಿಯಾಗಿದೆ ಎಂದು ನಾವು ಮತಕ್ಕಾಗಿ ಏನನ್ನು ಬೇಕಾದರು ಮಾಡಬಹುದು ಎಂದರು.

ಈ ದೇಶದ ಜನರು, ಬಡವರ ಪರ ಕಾರ್ಯಕ್ರಮವನ್ನು ಮಾಡುವುದಾಗಿದೆ. ಜಾತ್ಯಾತೀತ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸರ್ಕಾರದ ಜೊತೆ ಕೆಲಸ ಮಾಡಬೇಕು. ಇದು ನನ್ನ ಅಜೆಂಡಾವಾಗಿದೆ. ಹೀಗಾಗಿ ನನ್ನ ಅಜೆಂಡಾವನ್ನು ಯಾವುದೋ ಒಂದು ಝಂಡಾದಲ್ಲಿ ಕುಳಿತುಕೊಂಡು ಕೆಲಸ ಮಾಡುವುದು ಮುಖ್ಯವಾಗಿರುತ್ತದೆ ಎಂದು ತಿಳಿಸಿದರು.

Copyright © All rights reserved Newsnap | Newsever by AF themes.
error: Content is protected !!