ಬಳ್ಳಾರಿ ಬಿಜೆಪಿ ಮುಖಂಡರ ಲೆಕ್ಕಾಚಾರ ಉಲ್ಟಾ – ಸೀರೆ, ಬೆಳ್ಳಿ ನಾಣ್ಯ ವಾಪಸ್​​ ನೀಡಿದ ಕಾಂಗ್ರೆಸ್ ಸದಸ್ಯರು

Team Newsnap
1 Min Read

ನಾವು ಸೀರೆ, ಕಾಯಿನ್​ಗೆ ಬಗ್ಗಲ್ಲ. ನಮಗೆ ಪಕ್ಷ ಮುಖ್ಯ, ನಾವು ಬಿಜೆಪಿಗೆ ಮತ ಹಾಕಿಲ್ಲ. ನಾವು ಕಾಂಗ್ರೆಸ್​ನವರು ಎಂದು ನೀಡಿದ್ದ 11 ಸೀರೆ 11 ಬೆಳ್ಳಿ ಕಾಯಿನ್​ಗಳನ್ನು ವಾಪಸ್ ನೀಡಿದ ವಿಡಿಯೋ ಇದೀಗ ಫುಲ್ ವೈರಲ್ ಆಗಿದೆ.

ವಿಧಾನ ಪರಿಷತ್ ಚುನಾವಣೆ ಸಲುವಾಗಿ ಬಳ್ಳಾರಿ ಜಿಲ್ಲೆ ಕಂಪ್ಲಿ ತಾಲೂಕಿನ ಹಂಪಾದೇವನಹಳ್ಳಿ ಗ್ರಾಪಂ ಸದಸ್ಯರ ಮತದಾಸೆಯ ಸಲುವಾಗಿ ಬಿಜೆಪಿ ಮುಖಂಡರು ಸೀರೆ ಹಾಗೂ ಬೆಳ್ಳಿ ನಾಣ್ಯಗಳನ್ನು ಹಂಚಿದ್ದರು ಎನ್ನಲಾಗಿದೆ. 

ಆದರೆ, ಚುನಾವಣೆ ಮುಗಿದ ಬಳಿಕ ಬಿಜೆಪಿ ಮುಖಂಡರು ನೀಡಿದ್ದ 11 ಸೀರೆ, 11 ಬೆಳ್ಳಿ ಕಾಯಿನ್​ಗಳನ್ನು ಕಾಂಗ್ರೆಸ್ ಗ್ರಾಮ ಪಂಚಾಯಿತಿ ಸದಸ್ಯರು ವಾಪಸ್ ನೀಡಿದ್ದಾರೆ.

ಈ ಕುರಿತ ವಿಡಿಯೋ ಗ್ರಾಮದಲ್ಲಿ ವೈರಲ್​ ಆಗಿದೆ.

ಬಳ್ಳಾರಿ ವಿಧಾನಪರಿಷತ್ ಚುನಾವಣೆ ಹಿನ್ನೆಲೆ ಪ್ರತಿ ಪಕ್ಷಗಳು ಮತದಾರರ ಮನವೊಲಿಸಲು ಮತದಾರರಿಗೆ ಅನೇಕ ಆಮಿಷವೊಡ್ಡಿದ್ದರು

ಆದರೆ ಬಳ್ಳಾರಿಯಲ್ಲಿ ಬಿಜೆಪಿ ಮುಖಂಡರ ಲೆಕ್ಕಾಚಾರ ಉಲ್ಟಾ ಹೊಡೆದಿದೆ. ಕಾಂಗ್ರೆಸ್ ಸದಸ್ಯರು ಬಿಜೆಪಿ ವಿರುದ್ದವಾಗಿ ಮತ ಹಾಕಿ ಪಕ್ಷ ನಿಷ್ಠೆ ತೋರಿದ್ದಾರೆ.

Share This Article
Leave a comment