January 10, 2025

Newsnap Kannada

The World at your finger tips!

presidental election,BJP,election

There is no discussion about Lok Sabha election contest: Jagdish Shettar ಲೋಕಸಭೆ ಚುನಾವಣೆ ಸ್ಪರ್ಧೆ ಕುರಿತು ಯಾವುದೇ ಚರ್ಚೆ ಇಲ್ಲ : ಜಗದೀಶ್​ ಶೆಟ್ಟರ್​

ಬಿಜೆಪಿ – ಜೆಡಿಎಸ್‌ದ್ದು ಪ್ರಕೃತಿ ಸಹಜ ಸಂಬಂಧ

Spread the love

ಭಾರತೀಯ ಜನತಾ ಪಕ್ಷ ಮತ್ತು ಜಾತ್ಯತೀತ ಜನತಾ ದಳದ್ದು ಪ್ರಕೃತಿ ಸಹಜ ಸಂಬಂಧ ಎಂದು ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಬಣ್ಣಿಸಿದ್ದಾರೆ.

ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಶೆಟ್ಟರ್, ಕುಮಾರಸ್ವಾಮಿ ಬಿಜೆಪಿ ಜತೆ ಇದ್ದಿದ್ದರೆ ಅಧಿಕಾರದಲ್ಲಿ. ಈಗ ಅವರು ಪಶ್ಚಾತ್ತಾಪ ಪಡುತ್ತಿದ್ದಾರೆ ಎಂದರು.

ಕಾಂಗ್ರೆಸ್ ಪಕ್ಷವನ್ನು ನಂಬಿ ಮೋಸ ಹೋಗಿದ್ದಾಗಿ ಎಚ್‌ಡಿಕೆ ಹೇಳಿದ್ದು ಸರಿಯಾಗಿದೆ. ಆ ಪಕ್ಷವು ಗಾಂಧಿ ಕುಟುಂಬ ಬಿಟ್ಟು ಬೇರೆಯವರನ್ನು ಬೆಳೆಸಿಲ್ಲ ಎಂದು ಶೆಟ್ಟೆರ್ ಟೀಕಿಸಿದರು.

ಕಾಂಗ್ರೆಸ್ ಜತೆ ರಾಜಕೀಯ ಸಂಬಂಧ ಹೊಂದುವವರು ಮೊದಲಿಗೆ ಚೆನ್ನಾಗಿದ್ದರೂ ನಂತರ ಅವರಿಂದ ಮೋಸ ಹೋಗಿ ಹೊರ ಬರುತ್ತಾರೆ ಎಂದು ಜೆಡಿಎಸ್ ಪಕ್ಷದವರನ್ನು ಹೆಸರಿಸದೆ ಪ್ರಸ್ತಾಪಿಸಿದ ಸಚಿವರು, ಕಾಂಗ್ರೆಸ್ ವಿರುದ್ಧ ಹೋರಾಟ ನಡೆಸಿಯೇ ಇತರ ಪಕ್ಷಗಳು ಜನ್ಮತಳೆದಿವೆ ಎಂದು ವಿವರಿಸಿದರು.

ಸಚಿವ ಸಂಪುಟ ವಿಸ್ತರಣೆ ಸಂಬಂಧ ವಿವರಣೆ ನೀಡಿದ ಶೆಟ್ಟರ್,
ಈ ವಿಷಯ ಪಕ್ಷದ ವರಿಷ್ಠರಿಗೆ ಸೇರಿದ್ದು, ಅವರು ಎಂದು ಹಸಿರುನಿಶಾನೆ ತೋರುವರೋ ಆಗ ಆಗಲಿದೆ ಎಂದು ಹೇಳಿದರು.

Copyright © All rights reserved Newsnap | Newsever by AF themes.
error: Content is protected !!