February 23, 2026

Newsnap Kannada

The World at your finger tips!

arunsing

ಇಂದು ರಾಜ್ಯಕ್ಕೆ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ : ನಾಯಕತ್ವಕ್ಕೆ ತಾರ್ಕಿಕ ಅಂತ್ಯ ?

Spread the love

ರಾಜ್ಯಕ್ಕೆ ಇಂದು ಬಿಜೆಪಿ ಉಸ್ತುವಾರಿ ಸಂಜೆ ಅರುಣ್​ಸಿಂಗ್ ಬೆಂಗಳೂರಿಗೆ ಆಗಮಿಸಲಿದ್ದಾರೆ.

ರಾಜ್ಯ ಬಿಜೆಪಿಯಲ್ಲಿ ಕಳೆದ ಹಲವು ದಿನಗಳಿಂದ ಸೃಷ್ಟಿಯಾಗಿರುವ ಬಂಡಾಯ, ಗೊಂದಲ, ವೈಮನಸ್ಸುಗಳಿಗೆ ಶೀಘ್ರವೇ ತಾರ್ಕಿಕ ಅಂತ್ಯ ಬೀಳಲಿದೆ.

ನಾಯಕತ್ವ ಬದಲಾವಣೆ, ಪರ-ವಿರೋಧ ಚಟುವಟಿಕೆಗಳಿಗೆ ತೆರೆಯಲು, ಭಿನ್ನಮತ ಸಾರಿರುವ ಮಂತ್ರಿ ಗಳು, ಶಾಸಕರೊಂದಿಗೆ ಸಭೆ ನಡೆಸುವ ಸಾಧ್ಯತೆ ಇದೆ.

ಅರುಣ್ ಸಿಂಗ್ ಮೂರು ದಿನ ರಾಜ್ಯದಲ್ಲೇ ಮೊಕ್ಕಾಂ ಹೂಡಿ ಎಲ್ಲರೊಡನೆ ಸಮಾಲೋಚನೆ ನಡೆಸಿ ಬಿಜೆಪಿಯಲ್ಲಿನ ಬಿಕ್ಕಟ್ಟಿಗೆ ಪರಿಹಾರ ಸೂತ್ರ ರೂಪಿಸುವ ಕಸರತ್ತು ನಡೆಸಲಿದ್ದಾರೆ. ಪಕ್ಷ ಹಾಗೂ ಸರ್ಕಾರದ ವರ್ಚಸ್ಸಿಗೆ ಆಗಿರುವ ಹಾನಿಯನ್ನು ಸರಿಪಡಿಸಿ ಬಿಕ್ಕಟ್ಟಿಗೆ ಪರಿಹಾರ ಸೂತ್ರವನ್ನು ಕಂಡುಕೊಳ್ಳಲು ಎಲ್ಲರ ಅಭಿಪ್ರಾಯ ಆಲಿಸಲಿದ್ದಾರೆ.

ಸಚಿವ ಯೋಗಿಶ್ವರ್ ಅವರನ್ನು ಸಚಿವ ಸಂಪುಟದಿಂದ ಕೈ ಬಿಡುವಂತೆ 65 ಕ್ಕೂ ಹೆಚ್ಚು ಶಾಸಕರು ಅರುಣ್ ಸಿಂಗ್ ಅವರನ್ನು ಒತ್ತಾಯಿಸುವ ಸಾಧ್ಯತೆ ಇದೆ.

error: Content is protected !!